ರಣಧೀರ್ ಕಪೂರ್
ಬಾಲಿವುಡ್
ಬಾಲಿವುಡ್ ನಟ ರಣಧೀರ್ ಕಪೂರ್ ಗೆ ಕೊರೋನಾ ಸೋಂಕು: ಆಸ್ಪತ್ರೆಗೆ ದಾಖಲು
ಬಾಲಿವುಡ್‌ನ ಹಿರಿಯ ನಟ ರಣಧೀರ್ ಕಪೂರ್‌ಗೆ ಕೊರೊನಾ ವೈರಸ್ ಸೋಂಕು ತಗುಲಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮುಂಬೈ: ಬಾಲಿವುಡ್‌ನ ಹಿರಿಯ ನಟ ರಣಧೀರ್ ಕಪೂರ್‌ಗೆ ಕೊರೊನಾ ವೈರಸ್ ಸೋಂಕು ತಗುಲಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
74 ವರ್ಷ ವಯಸ್ಸಿನ ರಣಧೀರ್ ಕಪೂರ್‌ಗೆ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಣಧೀರ್ ಕಪೂರ್ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಆತಂಕ ಪಡುವಂಥದ್ದು ಏನೂ ಇಲ್ಲ. ಕೋವಿಡ್-19ಗಾಗಿ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ.
ಈ ಹಿಂದೆ ಎರಡೂ ಡೋಸ್‌ಗಳ ಕೋವಿಡ್ ಲಸಿಕೆಯನ್ನು ರಣಧೀರ್ ಕಪೂರ್ ಪಡೆದಿದ್ದರು. ಲಸಿಕೆ ಪಡೆದಿದ್ದರೂ ರಣಧೀರ್ ಕಪೂರ್‌ಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ಆದರೆ, ಚಳಿ ಜ್ವರ ಬಿಟ್ಟರೆ ರಣಧೀರ್ ಕಪೂರ್‌ಗೆ ಗಂಭೀರ ಆರೋಗ್ಯ ಸಮಸ್ಯೆ ಕಂಡುಬಂದಿಲ್ಲ. ರಣಧೀರ್ ಕಪೂರ್ ಜೊತೆಗೆ ಅವರ ಐವರು ಸಿಬ್ಬಂದಿಗಳಿಗೂ ಕೊರೊನಾ ವೈರಸ್ ಸೋಂಕು ತಗುಲಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ