ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ಉದ್ಯಮಿ ರಾಜ್ ಕುಂದ್ರಾಗೆ ಅಶ್ಲೀಲ ವಿಡಿಯೊ ದಂಧೆ ಪ್ರಕರಣದಲ್ಲಿ ಮುಂಬೈ ಹೈಕೋರ್ಟ್ ಮಧ್ಯಂತರ ರಕ್ಷಣೆ ನೀಡಿದೆ.
ಇದೇ ಸಂದರ್ಭದಲ್ಲಿ ನ್ಯಾಯಾಲಯ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ಆಗಸ್ಟ್ 25ಕ್ಕೆ ಮುಂದೂಡಿದೆ. ಮುಂಬಯಿ ಸೈಬರ್ ಪೊಲೀಸರು, ರಾಜ್ ಕುಂದ್ರಾ ಮತ್ತು ಅವರ ಸಹವರ್ತಿಗಳು ಆನ್ ಲೈನ್ ನಲ್ಲಿ ಅಶ್ಲೀಲ ವೀಡಿಯೊಗಳನ್ನು ತಯಾರಿಸಿ ಹೊರಬಿಡುತ್ತಿದ್ದಾರೆ ಎಂದು ಮುಂಬೈ ಸೈಬರ್ ಕ್ರೈಂ ವಿಭಾಗದ ಪೊಲೀಸರಿಗೆ ಬಂದ ದೂರಿನ ಆಧಾರದ ಮೇಲೆ ಜುಲೈ 19ರಂದು ಅವರನ್ನು ವಶಕ್ಕೆ ಪಡೆಯಲಾಗಿತ್ತು.
ಈ ತಿಂಗಳ ಆರಂಭದಲ್ಲಿ ಸೆಷನ್ಸ್ ಕೋರ್ಟ್ ತನ್ನ ಬಂಧನ ಪೂರ್ವ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನಂತರ ಕುಂದ್ರಾ ಹೈಕೋರ್ಟ್ ಮೊರೆ ಹೋಗಿದ್ದರು. ಇದೀಗ ರಾಜ್ ಕುಂದ್ರಾ ಜೈಲಿನಲ್ಲಿದ್ದಾರೆ.
ಅಶ್ಲೀಲ ವಯಸ್ಕರ ಚಿತ್ರಗಳ ಸೃಷ್ಟಿ ಮತ್ತು ಕೆಲವು ಅಪ್ಲಿಕೇಶನ್‌ಗಳ ಮೂಲಕ ಅವುಗಳನ್ನು ಪ್ರಕಟಿಸುತ್ತಿದ್ದ ಗಂಭೀರ ಆರೋಪ ಕುಂದ್ರಾ ಮತ್ತು ಅವರ ತಂಡದ ಮೇಲಿದೆ. ಭಾರತೀಯ ದಂಡ ಸಂಹಿತೆಯ (ಅಶ್ಲೀಲ ಮತ್ತು ಅಸಭ್ಯ ಜಾಹೀರಾತುಗಳು ಮತ್ತು ಪ್ರದರ್ಶನಗಳಿಗೆ ಸಂಬಂಧಿಸಿದ) ಸೆಕ್ಷನ್ 420 (ವಂಚನೆ), 34 (ಸಾಮಾನ್ಯ ಉದ್ದೇಶ), 292 ಮತ್ತು 293 ರ ಅಡಿಯಲ್ಲಿ ಕುಂದ್ರಾ ಅವರನ್ನು ಮುಂಬೈ ಪೋಲಿಸರು ಪ್ರಮುಖ ಸಂಚುಗಾರ ಎಂದು ಹೆಸರಿಸಿದ್ದಾರೆ. ಐಪಿಸಿ) ಐಟಿ ಕಾಯ್ದೆಯ ಸಂಬಂಧಿತ ವಿಭಾಗಗಳು ಮತ್ತು ಮಹಿಳೆಯರ ಅಸಭ್ಯ ಪ್ರಾತಿನಿಧ್ಯ (ನಿಷೇಧ) ಕಾಯಿದೆ ಮೇಲೆ ಸಹ ಅವರ ವಿರುದ್ಧ ದೂರು ಕೇಸು ದಾಖಲಾಗಿದೆ.
Advertisement