ಎರಡನೇ ಪತ್ನಿಗೂ ವಿಚ್ಛೇದನ ನೀಡಿದ ಅಮೀರ್ ಖಾನ್, 15 ವರ್ಷಗಳ ದಾಂಪತ್ಯ ಜೀವನ ಅಂತ್ಯ

ಬಾಲಿವುಡ್ ನ 'ಪರ್ಫೆಕ್ಷನಿಸ್ಟ್' ನಟ ಅಮೀರ್ ಖಾನ್ ವೈಯಕ್ತಿಕ ಜೀವನದಲ್ಲಿ ಮತ್ತೊಮ್ಮೆ ಎಡವಿದ್ದಾರೆ, ತಮ್ಮ ಎರಡನೇ ಪತ್ನಿ ಕಿರಣ್ ರಾವ್ ಗೆ ವಿಚ್ಛೇದನ ನೀಡಿದ್ದಾರೆ. 
ಮಗನೊಂದಿಗೆ ಅಮೀರ್ ಖಾನ್-ಕಿರಣ್ ರಾವ್(ಸಂಗ್ರಹ ಚಿತ್ರ)
ಮಗನೊಂದಿಗೆ ಅಮೀರ್ ಖಾನ್-ಕಿರಣ್ ರಾವ್(ಸಂಗ್ರಹ ಚಿತ್ರ)
Updated on

ಮುಂಬೈ: ಬಾಲಿವುಡ್ ನ 'ಪರ್ಫೆಕ್ಷನಿಸ್ಟ್' ನಟ ಅಮೀರ್ ಖಾನ್ ವೈಯಕ್ತಿಕ ಜೀವನದಲ್ಲಿ ಮತ್ತೊಮ್ಮೆ ಎಡವಿದ್ದಾರೆ, ತಮ್ಮ ಎರಡನೇ ಪತ್ನಿ ಕಿರಣ್ ರಾವ್ ಗೆ ವಿಚ್ಛೇದನ ನೀಡಿದ್ದಾರೆ. 

ಈ ಬಗ್ಗೆ ಇಬ್ಬರೂ ಜಂಟಿ ಹೇಳಿಕೆ ಹೊರಡಿಸಿದ್ದು 15 ವರ್ಷಗಳ ವೈವಾಹಿಕ ಜೀವನವನ್ನು ಕೊನೆಗೊಳಿಸುತ್ತಿರುವುದಾಗಿ ತಿಳಿಸಿದ್ದಾರೆ.

ನಮ್ಮ ಜೀವನದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸುತ್ತಿದ್ದು ಇನ್ನು ಮುಂದೆ ಪತಿ-ಪತ್ನಿಯಾಗಿ ಇರುವುದಿಲ್ಲ, ನಮ್ಮ ಪುತ್ರನಿಗೆ  ಪೋಷಕರಾಗಿ ಮುಂದುವರಿಯುತ್ತೇವೆ, ಪುತ್ರನ ಪೋಷಕರಾಗಿ ನಮ್ಮ ಸಹಕಾರ, ಪ್ರೀತಿ-ವಿಶ್ವಾಸ ಮುಂದುವರಿಯಲಿದೆ ಎಂದು ಹೇಳಿಕೊಂಡಿದ್ದಾರೆ. 

ಈ ಮೂಲಕ ಅಮೀರ್ ಖಾನ್ ಅವರ ಎರಡನೇ ವೈವಾಹಿಕ ಜೀವನವೂ ಮುರಿದು ಹೋದಂತಾಗಿದೆ. ಅಮೀರ್ ಖಾನ್ ಮತ್ತು ಕಿರಣ್ ರಾವ್ ಲಗಾನ್ ಚಿತ್ರದ ಚಿತ್ರೀಕರಣ ವೇಳೆ ಆಪ್ತರಾಗಿ ಪ್ರೀತಿಸಿ 2005ರಲ್ಲಿ ವಿವಾಹವಾಗಿದ್ದರು. ಅವರಿಗೆ ಆಜಾದ್ ಎಂಬ ಮಗನಿದ್ದಾನೆ.

ಇದಕ್ಕೂ ಮುನ್ನ ಅಮೀರ್ ಖಾನ್ 1986ರಲ್ಲಿ ರೀನಾ ದತ್ತರನ್ನು ಮದುವೆಯಾಗಿ ಇಬ್ಬರು ಮಕ್ಕಳನ್ನು ಪಡೆದು 2002ರಲ್ಲಿ ವಿಚ್ಛೇದನ ಪಡೆದಿದ್ದರು.

''ನಾವು ಸ್ವಲ್ಪ ಸಮಯದ ಹಿಂದೆಯೇ ಯೋಜಿಸಿ ಪ್ರತ್ಯೇಕವಾಗುವ ಬಗ್ಗೆ ತೀರ್ಮಾನ ತೆಗೆದುಕೊಂಡೆವು. ಈಗ ಅದನ್ನು ಔಪಚಾರಿಕವಾಗಿ ಅಧಿಕೃತವಾಗಿ ತಿಳಿಸುತ್ತಿದ್ದೇವೆ. ಪತಿ-ಪತ್ನಿ ದಾಂಪತ್ಯ ಸಂಬಂಧದಲ್ಲಿ ಬೇರೆಯಾದರೂ ಕೂಡ ಮಗ ಆಜಾದ್ ನ ಬೆಳವಣಿಗೆಗೆ ನಮ್ಮ ಪ್ರೀತಿ-ಕಾಳಜಿ ಹಿಂದಿನಂತೆಯೇ ಮುಂದುವರಿಯಲಿದೆ. ಆತನನ್ನು ಒಟ್ಟಿಗೆ ಪೋಷಿಸಿ, ಬೆಳೆಸುತ್ತೇವೆ. ಉಳಿದಂತೆ ಸಿನೆಮಾ, ಪಾನಿ ಫೌಂಡೇಶನ್ ಮತ್ತು ಇತರ ಯೋಜನೆಗಳಲ್ಲಿ ಸಾಮಾಜಿಕ ಕೆಲಸ-ಕಾರ್ಯಗಳು ಸಹಯೋಗದಿಂದ ಮುಂದುವರಿಸಲಿದ್ದೇವೆ'' ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com