ಕನ್ನಡ ಥ್ರಿಲ್ಲರ್ 'ಯು-ಟರ್ನ್' ರಿಮೇಕ್ ನಿರ್ಮಿಸುವುದಾಗಿ ಏಕ್ತಾ ಕಪೂರ್ ಘೋಷಣೆ!

ಕನ್ನಡ ಥ್ರಿಲ್ಲರ್ ನಿನಿಮಾ "ಯು-ಟರ್ನ್"ನ ಹಿಂದಿ ರಿಮೇಕ್ ನಿರ್ಮಾಣ ಮಾಡುವುದಾಗಿ ನಿರ್ಮಾಪಕಿ ಏಕ್ತಾ ಕಪೂರ್ ಸೋಮವಾರ ಪ್ರಕಟಿಸಿದ್ದಾರೆ.
ಅಲಯ ಎಫ್
ಅಲಯ ಎಫ್

ಕನ್ನಡ ಥ್ರಿಲ್ಲರ್ ನಿನಿಮಾ "ಯು-ಟರ್ನ್"ನ ಹಿಂದಿ ರಿಮೇಕ್ ನಿರ್ಮಾಣ ಮಾಡುವುದಾಗಿ ನಿರ್ಮಾಪಕಿ ಏಕ್ತಾ ಕಪೂರ್ ಸೋಮವಾರ ಪ್ರಕಟಿಸಿದ್ದಾರೆ. "ಜವಾನಿ ಜಾನೆಮನ್" ನಟಿ ಅಲಯ ಎಫ್ ಈ ಚಿತ್ರದ ಮುಖ್ಯ ಪಾತ್ರದಲ್ಲಿರಲಿದ್ದಾರೆ. ಚಿತ್ರಕ್ಕೆ ಚೊಚ್ಚಲ ನಿರ್ದೇಶಕ  ಆರಿಫ್ ಖಾನ್ ಆಕ್ಷನ್ ಕಟ್ ಹೇಳಲಿದ್ದಾರೆ.

ಶ್ರದ್ಧಾ ಶ್ರೀನಾಥ್ ಅಭಿನಯದ "ಯು-ಟರ್ನ್" 2016ರಲ್ಲಿ ತೆರೆ ಕಂಡಿತ್ತು. ಈ ಹಿಂದೆ 2017 ರಲ್ಲಿ ಮಲಯಾಳಂನಲ್ಲಿ ರಿಮೇಕ್ ಮಾಡಲಾಗಿದ್ದ ಈ ಚಿತ್ರ 2018 ರಲ್ಲಿ ತೆಲುಗು-ತಮಿಳು ದ್ವಿಭಾಷೆಗೆ ಸಹ ಹೋಗಿತ್ತು. ನಟಿ ಸಮಂತಾ ಅಕ್ಕಿನೇನಿ ಈ ಯೋಜನೆಯನ್ನು ನಿರ್ಮಿಸಿದ್ದರು. ಇದಕ್ಕೆ ಮೂಲ ನಿರ್ದೇಶಕ ಪವನ್ ಕುಮಾರ್ ಅವರು ಆಕ್ಷನ್ ಕಟ್ ಹೇಳಿದ್ದರು.

ಏಕ್ತಾ ಕಪೂರ್ ಅವರು 2020ರ ತಮ್ಮ ಮೊದಲ ಚಿತ್ರದಲ್ಲಿನ ಅಲಯ ಅವರ ಅಭಿನಯಕ್ಕೆ ಮಾರು ಹೋಗಿದ್ದಾರೆ. "ಆಕೆಗೆ ಸ್ವಯಂ ಭರವಸೆ ಮೂಡಿಸಬಲ್ಲ ಗುಣವಿದೆ, ಅದು ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸಲು ಸಹಕಾರಿ ಎಂದು ನಾನು ನಂಬುತ್ತೇನೆ. ಯು-ಟರ್ನ್ ನಿಮ್ಮನ್ನು ತಿರುವುಗಳೊಡನೆ ಸವಾರಿ ಮಾಡಿಸುತ್ತದೆ. ಭರ್ಜರಿ ಉತ್ಸಾಹವನ್ನು ತರುತ್ತದೆ. ಅಲಯ ಅವರನ್ನು ನಮ್ಮ ತಂಡಕ್ಕೆ ಸೇರಿಸಿಕೊಳ್ಳಲು ತುಂಬಾ ಸಂತೋಷವಾಗಿದೆ" ಎಂದು ನಿರ್ಮಾಪಕಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಯು-ಟರ್ನ್ ಅನ್ನು ಕಲ್ಟ್ ಮೂವೀಸ್ ನಿರ್ಮಿಸಲಿದ್ದು, ಇದು ಶೋಭಾ ಕಪೂರ್ ಮತ್ತು ಏಕ್ತಾ ಕಪೂರ್ ಅವರ ಬಾಲಾಜಿ ಟೆಲಿಫಿಲ್ಮ್ಸ್ ಅಡಿಯಲ್ಲಿನ ಹೊಸ ವಿಭಾಗವಾಗಿದೆ.

ಜುಲೈ 6 ರಂದು ಯು-ಟರ್ನ್ ಸೆಟ್ಟೇರಲಿದೆ. ಅನುರಾಗ್ ಕಶ್ಯಪ್ ಅವರ ದೊಬಾರಾ ಮತ್ತು ದಿಬಾಕರ್ ಬ್ಯಾನರ್ಜಿ ಅವರ ಎಲ್ಎಸ್ಡಿ 2 ನಂತರ ಕಲ್ಟ್ ಮೂವೀಸ್ ಅಡಿಯಲ್ಲಿ ಘೋಷಿಸಲ್ಪಟ್ಟ ಮೂರನೇ ಚಿತ್ರ ಇದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com