ಹಿರೋಯಿನ್ಸ್‌ ಎಂದರೆ ಹೈ ಪ್ರೊಫೈಲ್ಸ್‌ ವೇಶ್ಯೆರಂತೆ ನೋಡಲಾಗುತ್ತದೆ: ನಟಿ ಮಹಿಕಾ ಶರ್ಮಾ

ಹಾಲಿವುಡ್‌ನಿಂದ ಸ್ಯಾಂಡಲ್‌ ವುಡ್‌ ವರೆಗೆ ಸಿನಿಮಾರಂಗದಲ್ಲಿ ಕಳೆದ ಕೆಲವು ವರ್ಷಗಳಿಂದ "ಕಾಸ್ಟಿಂಗ್ ಕೌಚ್" , "ಮೀಟೂ" ಎಂಬ  ಪದಗಳ ಬಳಕೆ  ಸಾಮಾನ್ಯ ವಿಷಯವಾಗಿದೆ. 
ಮಹಿಕಾ ಶರ್ಮಾ
ಮಹಿಕಾ ಶರ್ಮಾ
Updated on

ಮುಂಬೈ: ಹಾಲಿವುಡ್‌ನಿಂದ ಸ್ಯಾಂಡಲ್‌ ವುಡ್‌ ವರೆಗೆ ಸಿನಿಮಾರಂಗದಲ್ಲಿ ಕಳೆದ ಕೆಲವು ವರ್ಷಗಳಿಂದ "ಕಾಸ್ಟಿಂಗ್ ಕೌಚ್" , "ಮೀಟೂ" ಎಂಬ  ಪದಗಳ ಬಳಕೆ  ಸಾಮಾನ್ಯ ವಿಷಯವಾಗಿದೆ. 

ಚಿತ್ರರಂಗದಲ್ಲಿ "ಪಾತ್ರಕ್ಕಾಗಿ ಫಲ್ಲಂಗ"ದ ಹೆಸರಿನಲ್ಲಿ ಉದಯೋನ್ಮುಖ ನಟಿಯರಿಗೆ ನೀಡುವ ಲೈಂಗಿಕ ಕಿರುಕುಳಕ್ಕೆ ಅಂತ್ಯವೇ ಇಲ್ಲ    ..   ನಿರ್ಮಾಪಕರು, ನಿರ್ದೇಶಕರು ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಸಿನಿ ತಾರೆಯರು ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದಾರೆ. ಈಗ ನಟಿ ಮಹಿಕಾ ಶರ್ಮಾ ಈ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ್ದಾರೆ. 

ಮನರಂಜನಾ ಕ್ಷೇತ್ರದಲ್ಲಿ, ನಟಿಯರನ್ನು ಸದಾ ಲೈಂಗಿಕ ವಸ್ತುಗಳಂತೆ ಪರಿಗಣಿಸಲಾಗುತ್ತಿದೆ. ಕೆಲವರು ಬಲವಂತ ಮಾಡಿದರೆ, ಮತ್ತೆ ಕೆಲವರು  ಅವಕಾಶ ನೀಡುವ ಆಸೆ ಹುಟ್ಟಿಸಿ ಬಲೆಗೆ ಬೀಳಿಸಿಕೊಳ್ಳುತ್ತಾರೆ. ಉದ್ಯಮದಲ್ಲಿ ಮುಂದುವರಿಯಬೇಕಾದರೆ, ನೀವು ಯಾವುದಾದರೂ ತ್ಯಾಗ ಮಾಡಲೇ ಬೇಕು ಎಂದು ಬಹಳಷ್ಟು ಮಂದಿ  ನನಗೆ ಹೇಳಿದ್ದಾರೆ. ಅವರು( ನಿರ್ದೇಶಕ, ನಿರ್ಮಾಪಕ) ಹೇಳುವುದನ್ನು ನೀವು ಕೇಳದಿದ್ದರೆ ಅವಕಾಶ  ಬರುವುದಿಲ್ಲ. ಚಿತ್ರರಂಗದಲ್ಲಿ ಬದುಕು ಕಂಡುಕೊಳ್ಳಲು ಬರುವ ಹೆಚ್ಚಿನ ನಾಯಕಿಯರು ಕಾಸ್ಟಿಂಗ್‌ ಕೌಚ್‌ ಹೆಸರಿನಲ್ಲಿ ನಿರ್ದೇಶಕರಿಗೆ ಅಥವಾ ನಿರ್ಮಾಪಕರಿಗೆ  ಬಲಿಯಾಗುತ್ತಾರೆ. 

ಯುವತಿಯರನ್ನು ಅವರು ಕೇವಲ ಲೈಂಗಿಕ ವಸ್ತುಗಳಂತೆ ನೋಡುತ್ತಾರೆ. ಇನ್ನೂ ಯಾವುದೇ ಹಿನ್ನೆಲೆ ಇಲ್ಲದೆ ಬರುವ ಹುಡುಗಿಯರ ಪರಿಸ್ಥಿತಿ  ಕೆಟ್ಟದಾಗಿರುತ್ತದೆ. ಸಮಾಜ ಕೂಡ ಸಿನಿಮಾದವರನ್ನು ನೋಡುವ ದೃಷ್ಟಿಕೋನ ಬೇರೆಯಾಗಿರುತ್ತದೆ. ಹಿರೋಯಿನ್ಸ್‌ ಎಂದರೆ ಹೈ ಪ್ರೊಫೈಲ್ಸ್‌   ವೇಶ್ಯೆರಂತೆ ನೋಡಲಾಗುತ್ತದೆ. ಕ್ರೇಜ್‌ ಹೊರತುಪಡಿಸಿ, ಗೌರವವಿಲ್ಲ. "ಇದು ದಾರುಣ ವಿಷಯ"  ಎಂದು ಚಿತ್ರೋದ್ಯಮದಲ್ಲಿ ಲೈಂಗಿಕ ಕಿರುಕುಳದ ಬಗ್ಗೆ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಹಿಕಾ ಹೇಳಿದ್ದಾರೆ.

ರೂಪದರ್ಶಿಯಾಗಿ ವೃತ್ತಿಜೀವನ ಪ್ರಾರಂಭಿಸಿದ ಮಹಿಕಾ... ಬಾಲಿವುಡ್ ಚಿತ್ರಗಳಲ್ಲಿ ಮಿಂಚಿದ್ದಾರೆ. ರಾಮಾಯಣ, ಎಫ್‌ಐಆರ್ ಮುಂತಾದ  ಧಾರಾವಾಹಿಗಳ ಮೂಲಕ ಹೆಸರಾಗಿದ್ದಾರೆ. ಪ್ರಸ್ತುತ ಬಾಲಿವುಡ್‌ನಲ್ಲಿ ಕಂಪನ ಸೃಷ್ಟಿಸುತ್ತಿರುವ ರಾಜ್‌ಕುಂದ್ರ ಅವರ ಪೋರ್ನೊ ಚಿತ್ರ ನಿರ್ಮಾಣ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ" ಶಿಲ್ಪಾ ಶೆಟ್ಟಿಯನ್ನು ಸ್ಫೂರ್ತಿಯಾಗಿ ನೋಡುವ ನಾವು ಅಶ್ಲೀಲ ಪ್ರಕರಣದಲ್ಲಿ ಆಕೆಯ ಪತಿ ರಾಜ್‌ಕುಂದ್ರ ಬಂಧನಕ್ಕೊಳಗಾಗುವುದನ್ನು ನೋಡುತ್ತಿರುವುದು ಭಯವಾಗುತ್ತಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com