ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಉದ್ಯಮಿ-ಪತಿ ರಾಜ್ ಕುಂದ್ರಾ ಅವರು ಮಂಗಳವಾರ ನಟಿ ಶೆರ್ಲಿನ್ ಚೋಪ್ರಾ ಅವರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.
ತಮ್ಮ ವಿರುದ್ಧ "ಸುಳ್ಳು ಮತ್ತು ಆಧಾರರಹಿತ" ಆರೋಪಗಳನ್ನು ಮಾಡಿ ತಮ್ಮ ಪ್ರತಿಷ್ಠೆಗೆ ಧಕ್ಕೆ ಉಂಟು ಮಾಡಿದ್ದಕ್ಕಾಗಿ ಕ್ಷಮೆ ಕೇಳಬೇಕು ಮತ್ತು 50 ಕೋಟಿ ರೂಪಾಯಿ ಮಾನಹಾನಿ ಪರಿಹಾರ ಕೋರಿದ್ದಾರೆ.
ತಮ್ಮ ವಕೀಲ ಪ್ರಶಾಂತ್ ಪಾಟೀಲ್ ಮೂಲಕ ಕಳುಹಿಸಿದ ಲೀಗಲ್ ನೋಟಿಸ್ ನಲ್ಲಿ, ಚೋಪ್ರಾ ಅವರು ಏಳು ದಿನಗಳ ಒಳಗೆ ಪ್ರಮುಖ ಪತ್ರಿಕೆಗಳಲ್ಲಿ ಮತ್ತು ಡಿಜಿಟಲ್ ಮಾಧ್ಯಮ ವೇದಿಕೆಗಳಲ್ಲಿ ಸಾರ್ವಜನಿಕವಾಗಿ ಬೇಷರತ್ ಕ್ಷಮೆಯಾಚಿಸಬೇಕು ಎಂದು ಕೋರಲಾಗಿದೆ. ಕ್ಷಮೆ ಕೇಳದಿದ್ದರೆ 37 ವರ್ಷದ ನಟಿಯ ವಿರುದ್ಧ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಎಚ್ಚರಿಸಿದೆ.
ಶೆರ್ಲಿನ್ ಚೋಪ್ರಾ ಹಣ ವಸೂಲಿ ಮಾಡುವ ಉದ್ದೇಶದಿಂದ ಆರೋಪ ಮಾಡಿದ್ದು, ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಕ್ಷಮೆ ಕೇಳದಿದ್ದರೆ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣ ಎದುರಿಸಬೇಕಾಗುತ್ತದೆ ಎಂದು ಶಿಲ್ಪಾ ಶೆಟ್ಟಿ ದಂಪತಿ ಎಚ್ಚರಿಕೆ ನೀಡಿದ್ದಾರೆ.
Advertisement