ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಕಚ್ಚಿದ ಹಾವು: ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ!
ಪನ್ವೇಲ್ನಲ್ಲಿರುವ ತಮ್ಮ ಫಾರ್ಮ್ ಹೌಸ್ ಗೆ ತಡರಾತ್ರಿ ಸಲ್ಮಾನ್ ಖಾನ್ ವಾಯು ವಿಹಾರ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಹಾವೊಂದು ಕಚ್ಚಿದೆ. ವಿಷ ರಹಿತ ಹಾವು ಕಚ್ಚಿರೋದು ವರದಿಯಾಗಿದೆ.
Published: 26th December 2021 01:32 PM | Last Updated: 27th December 2021 01:11 PM | A+A A-

ಸಲ್ಮಾನ್ ಖಾನ್
ಬಾಲಿವುಡ್ ನ ಸಲ್ಮಾನ್ ಖಾನ್ ತಡರಾತ್ರಿ ತಮ್ಮ ಫಾರ್ಮ್ಹೌಸ್ನಲ್ಲಿದ್ದಾಗ ಅವರಿಗೆ ಹಾವು ಕಚ್ಚಿದೆ.
ಪನ್ವೇಲ್ನಲ್ಲಿರುವ ತಮ್ಮ ಫಾರ್ಮ್ ಹೌಸ್ ಗೆ ತಡರಾತ್ರಿ ಸಲ್ಮಾನ್ ಖಾನ್ ವಾಯು ವಿಹಾರ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಹಾವೊಂದು ಕಚ್ಚಿದೆ. ವಿಷ ರಹಿತ ಹಾವು ಕಚ್ಚಿರೋದು ವರದಿಯಾಗಿದೆ.
ಇದನ್ನೂ ಓದಿ: ಮೆಗಾಸ್ಟಾರ್ ಚಿರಂಜೀವಿ ನಟನೆಯ 'ಗಾಡ್ ಫಾದರ್' ಸಿನಿಮಾದಲ್ಲಿ ಸಲ್ಮಾನ್ ಖಾನ್: ಫೆಬ್ರವರಿಯಲ್ಲಿ ಶೂಟಿಂಗ್
ಮುಂಜಾಗ್ರತ ಕ್ರಮವಾಗಿ ಸಲ್ಮಾನ್ ಖಾನ್ ಅವರನ್ನು ಆಸ್ಪತ್ರೆ ಸೇರಿಸಿದ್ದಾರೆ. ಚಿಕಿತ್ಸೆ ಪಡೆದು ಇಂದು ಬೆಳಗ್ಗೆ 9 ಗಂಟೆಗೆ ಸಲ್ಮಾನ್ ಖಾನ್ ಡಿಸ್ಚಾರ್ಜ್ ಆಗಿದ್ದಾರೆ. ಮರಳಿ ಮತ್ತೆ ತಮ್ಮ ಫಾರ್ಮ್ಹೌಸ್ಗೆ ತೆರಳಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಸದ್ಯ ಸಲ್ಮಾನ್ ಆರೋಗ್ಯದ ಬಗ್ಗೆ ಯಾವುದೇ ಚಿಂತೆ ಬೇಡ ಎಂದು ವೈದ್ಯರು ತಿಳಿಸಿದ್ದಾರೆ.