ವ್ಯಾಕ್ಸಿನ್ ವಿರೋಧಿ ಪೂಜಾ ಬೇಡಿಗೆ ಕೊರೋನಾ ಸೋಂಕು: ಲಸಿಕೆ ಹಾಕಿಸಿಕೊಳ್ಳದಿರುವುದು ನನ್ನ ವಯಕ್ತಿಕ ನಿರ್ಧಾರ
ನಟಿ ಪೂಜಾ ಬೇಡಿಗೆ ಕೊರೋನಾ ಸೋಂಕು ತಗುಲಿದೆ. ಮೊದಲಿನಿಂದಲೂ ಕೊವಿಡ್ ಲಸಿಕೆ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿದ್ದ ಅವರಿಗೆ ಈಗ ಕೊರೊನಾ ಸೋಂಕು ತಗುಲಿದ್ದು ಈ ಬಗ್ಗೆ ಅವರು ಸ್ವತಃ ಮಾಹಿತಿ ಹಂಚಿಕೊಂಡಿದ್ದಾರೆ.
Published: 18th October 2021 02:08 PM | Last Updated: 18th October 2021 02:08 PM | A+A A-

ಪೂಜಾ ಬೇಡಿ
ನಟಿ ಪೂಜಾ ಬೇಡಿಗೆ ಕೊರೋನಾ ಸೋಂಕು ತಗುಲಿದೆ. ಮೊದಲಿನಿಂದಲೂ ಕೊವಿಡ್ ಲಸಿಕೆ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿದ್ದ ಅವರಿಗೆ ಈಗ ಕೊರೊನಾ ಸೋಂಕು ತಗುಲಿದ್ದು ಈ ಬಗ್ಗೆ ಅವರು ಸ್ವತಃ ಮಾಹಿತಿ ಹಂಚಿಕೊಂಡಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಪೂಜಾ ಬೇಡಿ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ‘ಲಸಿಕೆ ತೆಗೆದುಕೊಳ್ಳದಿರುವ ಬಗ್ಗೆ ನಾನು ಮೊದಲಿನಿಂದಲೂ ಮಾತನಾಡುತ್ತಾ ಬಂದಿದ್ದೇನೆ. ವ್ಯಾಕ್ಸಿನ್ ಪಡೆಯಬಾರದು ಎಂಬುದು ನನ್ನ ನಿರ್ಧಾರ ಆಗಿತ್ತು. ಸ್ವಂತ ರೋಗ ನಿರೋಧಕ ಶಕ್ತಿಯೇ ನಿಧಾನವಾಗಿ ಹೆಚ್ಚಲಿದೆ. ನಿಮ್ಮ ಆಯ್ಕೆ ಏನು ಎಂಬುದನ್ನು ನೀವೇ ನಿರ್ಧರಿಸಿ’ ಎಂದು ಪೂಜಾ ಬೇಡಿ ಹೇಳಿದ್ದಾರೆ.
ಗೋವಾದಲ್ಲಿ ವಾಸವಾಗಿರುವ ಪೂಜಾ ಬೇಡಿ ಅವರು ಫಿಟ್ನೆಸ್ ಕೋಚ್ ಆಗಿ ಕೆಲಸ ಮಾಡುತ್ತಿದ್ದಾರೆ. ಕೊವಿಡ್ ಲಕ್ಷಣಗಳು ಕಾಣಿಸಿಕೊಂಡಾಗ ಅವರು ಡಸ್ಟ್ ಅಲರ್ಜಿ ಆಗಿರಬಹುದು ಅಂತ ತಿಳಿದುಕೊಂಡಿದ್ದರು. ಆದರೆ ಪರಿಸ್ಥಿತಿ ನಿಧಾನಕ್ಕೆ ಹದಗೆಡಲು ಶುರುವಾಯಿತು. ಹಾಗಾಗಿ ಟೆಸ್ಟ್ ಮಾಡಿಸಿಕೊಳ್ಳಲು ತೀರ್ಮಾನಿಸಿದರು. ಆಗ ಅವರಿಗೆ ಕೊವಿಡ್ ಪಾಸಿಟಿವ್
ಆಗಿರುವುದು ತಿಳಿಯಿತು. ‘ಲಸಿಕೆ ಬರುವುದಕ್ಕಿಂತಲೂ ಮುನ್ನ ಕೊವಿಡ್ ತಗುಲಿಸಿಕೊಂಡ ಶೇ.99ರಷ್ಟು ಜನರು ಬದುಕಿದ್ದಾರೆ. ಲಸಿಕೆ ಪಡೆದ ನಂತರವೂ ಶೇ.99ರಷ್ಟು ಮಂದಿ ಬದುಕಿದ್ದಾರೆ. ನಾವು ಎಚ್ಚರಿಕೆಯಿಂದ ಇರಬೇಕು. ಗಾಬರಿ ಆಗುವ ಅವಶ್ಯಕತೆ ಇಲ್ಲ’ ಎಂದು ಪೂಜಾ ಬೇಡಿ ಹೇಳಿದ್ದಾರೆ.
ಇದನ್ನೂ ಓದಿ: ಮಿಲಿಂದ್ ಸೋಮನ್ ಬೆತ್ತಲೆ ಓಟದ ಚಿತ್ರ: ತಪ್ಪೇನಿದೆ? ಅದು ಆತನ ಸೌಂದರ್ಯ ಎಂದ ಪೂಜಾ ಬೇಡಿ!
ಆಗಸ್ಟ್ ತಿಂಗಳಲ್ಲಿ ಅವರು ಬಲವಂತದ ಲಸಿಕೆ ಅಭಿಯಾನದ ಬಗ್ಗೆ ಗರಂ ಆಗಿದ್ದರು. ‘ಹಲವು ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ಒತ್ತಾಯ ಹೇರುತ್ತಿವೆ. ಕೆಲಸ ಉಳಿಸಿಕೊಳ್ಳಲು ಉದ್ಯೋಗಿಗಳಿಗೆ ಇದು ಅನಿವಾರ್ಯ ಆಗುತ್ತಿದೆ. ಲಸಿಕೆಯ ಅಡ್ಡಪರಿಣಾಮದಿಂದ ಸಾವು ಅಥವಾ ವೈಕಲ್ಯ ಉಂಟಾದರೆ ಈ ಕಂಪನಿಗಳೇ ಪರಿಹಾರ ಕೊಡುತ್ತವಾ? ಲಸಿಕೆ ಪಡೆಯದೆಯೂ ಬದುಕುಳಿಯುವ ಸಾಧ್ಯತೆ ಶೇ.99ರಷ್ಟು ಇರುವಾಗ ನಿಜಕ್ಕೂ ಅಪಾಯದಲ್ಲಿ ಇರುವವರಿಗೆ ಮಾತ್ರ ಸರ್ಕಾರ ಲಸಿಕೆ ಹಾಕಿಸಬೇಕು. ಮಾಸ್ಕ್ ಧರಿಸುವಂತೆ ಹೇಳಬೇಕು. ಐಸೋಲೇಟ್ ಆಗುವಂತೆ ಸೂಚಿಸಬೇಕು. ಅದರ ಬದಲು ಇಡೀ ಜಗತ್ತಿಗೆ ಲಸಿಕೆ ಹಾಕಿಸುವುದಲ್ಲ. ಲಸಿಕೆ ಹಾಕಿಸಿಕೊಳ್ಳದವರನ್ನು ತಾರತಮ್ಯದಿಂದ ನೋಡಬಾರದು. ಹಾಗೆ ಮಾಡುವುದು ತರ್ಕರಹಿತ ಮತ್ತು ಅಪಾಯಕಾರಿ ಆಗುತ್ತದೆ’ ಎಂದು ಅವರು ಟ್ವೀಟ್ ಮಾಡಿದ್ದರು.