ಭಾರತದಲ್ಲಿ ಕೆಲ ಮುಸ್ಲಿಮರಿಂದ ತಾಲಿಬಾನ್ ಪರ ಸಂಭ್ರಮಾಚರಣೆ: ನಟ ನಾಸಿರುದ್ದೀನ್ ಶಾ ಟೀಕೆ

ಅಫ್ಘಾನಿಸ್ತಾನ ತಾಲಿಬಾನ್ ವಶವಾಗಿರುವುದನ್ನು ಸಂಭ್ರಮಿಸುತ್ತಿರುವ ಕೆಲ ಭಾರತೀಯ ಮುಸ್ಲಿಮರನ್ನು ಬಾಲಿವುಡ್ ನಟ ನಾಸಿರುದ್ದೀನ್ ಶಾ ಕಟುವಾಗಿ ಟೀಕಿಸಿದ್ದಾರೆ.
ನಾಸಿರುದ್ದೀನ್ ಶಾ
ನಾಸಿರುದ್ದೀನ್ ಶಾ

ಪುಣೆ/ಮುಂಬೈ: ಅಫ್ಘಾನಿಸ್ತಾನ ತಾಲಿಬಾನ್ ವಶವಾಗಿರುವುದನ್ನು ಸಂಭ್ರಮಿಸುತ್ತಿರುವ ಕೆಲ ಭಾರತೀಯ ಮುಸ್ಲಿಮರನ್ನು ಬಾಲಿವುಡ್ ನಟ ನಾಸಿರುದ್ದೀನ್ ಶಾ ಕಟುವಾಗಿ ಟೀಕಿಸಿದ್ದಾರೆ.   

ತಾಲಿಬಾನ್ ಬಗ್ಗೆ ಸಹಾನುಭೂತಿ ಹೊಂದಿರುವ ಭಾರತೀಯ ಮುಸ್ಲಿಮರನ್ನು ಟೀಕಿಸಿರುವ ಅವರ ವಿಡಿಯೋ ಬುಧವಾರ ರಾತ್ರಿಯಿಂದ ಟ್ವಿಟರ್‌ನಲ್ಲಿ ವೈರಲ್ ಆಗಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಮರಳಿ ಅಧಿಕಾರಕ್ಕೆ ಬಂದಿರುವುದು ಇಡೀ ವಿಶ್ವಕ್ಕೆ ಕಳವಳಕಾರಿಯಾಗಿದ್ದರೂ ಸಹ, ಕೆಲವು ಮುಸ್ಲಿಮರು ಸಂಭ್ರಮಿಸುತ್ತಿದ್ದಾರೆ. ಅನಾಗರಿಕರನ್ನು ಓಲೈಸುವ ಆಚರಣೆಗಳು ಕಡಿಮೆ ಅಪಾಯಕಾರಿಯಲ್ಲ ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ.

ಭಾರತೀಯ ಮುಸ್ಲಿಮರು ತಮ್ಮ ಧರ್ಮದಲ್ಲಿ ಆಧುನಿಕತೆ ಮತ್ತು ಸುಧಾರಣೆಗಳನ್ನು ಬಯಸುತ್ತಾರೆಯೇ ಅಥವಾ ಅವರು ಹಳೆಯ ಅನಾಗರಿಕ ಮೌಲ್ಯಗಳಿಗೆ ಮರಳಲು ಬಯಸುತ್ತಾರೆಯೇ? ಎಂದು ತಮ್ಮನ್ನು ತಾವು ಪ್ರಶ್ನಿಸಿಕೊಳ್ಳಬೇಕು. ಮಿರ್ಜಾ ಗಾಲಿಬ್ ಬಹಳ ಹಿಂದೆಯೇ ಹೇಳಿದಂತೆ, ನನ್ನ ದೇವರೊಂದಿಗಿನ ನನ್ನ ಸಂಬಂಧವು ಸಾಟಿಯಿಲ್ಲ. ನನಗೆ ರಾಜಕೀಯ ಧರ್ಮದ ಅಗತ್ಯವಿಲ್ಲ. 

ಹಿಂದುಸ್ತಾನಿ ಇಸ್ಲಾಂ, ಇಸ್ಲಾಂ ಧರ್ಮಕ್ಕಿಂತ ಭಿನ್ನವಾಗಿದ್ದು ಪ್ರಪಂಚದ ಇತರ ಭಾಗಗಳಲ್ಲಿ ಆಚರಣೆಯಲ್ಲಿದೆ ಮತ್ತು ನಾವು ಅದನ್ನು ಗುರುತಿಸಲು ಸಾಧ್ಯವಾಗದ ಸಮಯ ಬರದಂತೆ ನಾನು ದೇವರನ್ನು ಪ್ರಾರ್ಥಿಸುತ್ತೇನೆ ಎಂಬ ಚಿಂತನೆಯನ್ನು ನಾಸಿರುದ್ದೀನ್ ಶಾ ಹಂಚಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com