ಮುಂಬಯಿ: ಅಶ್ಲೀಲ ಚಿತ್ರಗಳ ನಿರ್ಮಾಣ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಉದ್ಯಮಿ ರಾಜ್ ಕುಂದ್ರಾಗೆ ಜಾಮೀನು ಸಿಕ್ಕಿದ ಹಿನ್ನೆಲೆಯಲ್ಲಿ ಇಂದು ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಎರಡು ತಿಂಗಳ ಕಾಲ ಜೈಲು ವಾಸ ಅನುಭವಿಸಿದ ಉದ್ಯಮಿ ರಾಜ್ ಕುಂದ್ರಾ ಬೆಳಗ್ಗೆ 11.30ಕ್ಕೆ ಆರ್ತೂರು ಜೈಲಿನಿಂದ ರೀಲಿಸ್ ಆಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, 50 ಸಾವಿರ ರೂಪಾಯಿಗಳ ಶ್ಯೂರಿಟಿ ಮೇರೆಗೆ ಉದ್ಯಮಿ ರಾಜ್ ಕುಂದ್ರಾ ಅವರಿಗೆ ಮುಂಬೈ ನ್ಯಾಯಾಲಯ ಜಾಮೀನು ನೀಡಿದೆ.
ಜುಲೈ 19 ರಂದು ಬಂಧನವಾಗಿದ್ದ ರಾಜ್ ಕುಂದ್ರಾ ಸಹಚರ ರಯಾನ್ ಥಾರ್ಪೆ ಅವರಿಗೂ ಜಾಮೀನು ನೀಡಲಾಗಿದೆ, 49 ವರ್ಷದ ಉದ್ಯಮಿ ರಾಜ್ ಕುಂದ್ರಾ ಅವರನ್ನು ಎರಡು ತಿಂಗಳ ಹಿಂದೆ ಬಂಧಿಸಲಾಗಿತ್ತು.
Advertisement