ತಾಲಿಬಾನ್- ಆರ್ ಎಸ್ ಎಸ್ ಹೋಲಿಕೆ ಹೇಳಿಕೆಗಾಗಿ ಮೊಕದ್ದಮೆ: ಜಾವೇದ್ ಅಖ್ತರ್ ಗೆ ಥಾಣೆ ಕೋರ್ಟ್ ನೋಟಿಸ್

ತಾಲಿಬಾನ್ ನೊಂದಿಗೆ ಆರ್ ಎಸ್ ಎಸ್ ಹೋಲಿಕೆ ಆರೋಪಕ್ಕೆ ಸಂಬಂಧಿಸಿದಂತೆ ವಿರುದ್ಧ ದಾಖಲಾಗಿರುವ ಮಾನನಷ್ಟ ಮೊಕದ್ದಮೆಯಲ್ಲಿ ಬಾಲಿವುಡ್ ಖ್ಯಾತ ಗೀತೆ ರಚನೆಕಾರ, ಕವಿ  ಜಾವೇದ್ ಅಖ್ತರ್ ಗೆ ಥಾಣೆಯ ಕೋರ್ಟ್ ಒಂದು ಸೋಮವಾರ ಶೋಕಾಸ್ ನೋಟಿಸ್ ನೀಡಿದೆ.
ರಾಷ್ಟ್ರ ಪ್ರಶಸ್ತಿ ವಿಜೇತ ಗೀತೆ ರಚನೆಕಾರ ಜಾವೇದ್ ಅಖ್ತರ್
ರಾಷ್ಟ್ರ ಪ್ರಶಸ್ತಿ ವಿಜೇತ ಗೀತೆ ರಚನೆಕಾರ ಜಾವೇದ್ ಅಖ್ತರ್

ಥಾಣೆ: ತಾಲಿಬಾನ್ ನೊಂದಿಗೆ ಆರ್ ಎಸ್ ಎಸ್ ಹೋಲಿಕೆ ಆರೋಪಕ್ಕೆ ಸಂಬಂಧಿಸಿದಂತೆ ವಿರುದ್ಧ ದಾಖಲಾಗಿರುವ ಮಾನನಷ್ಟ ಮೊಕದ್ದಮೆಯಲ್ಲಿ ಬಾಲಿವುಡ್ ಖ್ಯಾತ ಗೀತೆ ರಚನೆಕಾರ, ಕವಿ  ಜಾವೇದ್ ಅಖ್ತರ್ ಗೆ ಥಾಣೆಯ ಕೋರ್ಟ್ ಒಂದು ಸೋಮವಾರ ಶೋಕಾಸ್ ನೋಟಿಸ್ ನೀಡಿದೆ.

 ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮತ್ತು ಜಂಟಿ ಸಿವಿಲ್ ನ್ಯಾಯಾಧೀಶರ (ಹಿರಿಯ ವಿಭಾಗ) ನ್ಯಾಯಾಲಯದಲ್ಲಿ  ಆರ್‌ಎಸ್‌ಎಸ್ ಕಾರ್ಯಕರ್ತ ವಿವೇಕ್ ಚಂಪಾನೇಕರ್ ಸಲ್ಲಿಸಿರುವ ಮೊಕದ್ದಮೆಯಲ್ಲಿ 1 ಕೋಟಿ ರೂ. ಪರಿಹಾರವನ್ನು ಕೋರಿದ್ದಾರೆ. ನವೆಂಬರ್ 12 ರಂದು ಹಿಂತಿರುಗಿಸಬಹುದಾದ ನೋಟಿಸ್ ನೀಡಲು ನ್ಯಾಯಾಲಯ ಆದೇಶಿಸಿದೆ.

ವಿಶ್ವದಾದ್ಯಂತ ಬಲಪಂಥೀಯರು ಅಸಾಮಾನ್ಯ ಸಾಮ್ಯತೆಯನ್ನು ಹೊಂದಿದ್ದಾರೆ ಎಂದು 76 ವರ್ಷದ ಹಿರಿಯ ಗೀತೆ ರಚನೆಕಾರರಾಗಿರುವ ಜಾವೇದ್ ಅಖ್ತರ್ ಈ ತಿಂಗಳ ಆರಂಭದಲ್ಲಿ ಖಾಸಗಿ ಸುದ್ದಿ ವಾಹಿಯೊಂದಿಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ತಾಲಿಬಾನಿಗಳು ಇಸ್ಲಾಮಿಕ್ ದೇಶವನ್ನು ಬಯಸುತ್ತಾರೆ. ಈ ಜನರು ಹಿಂದೂ ರಾಷ್ಟ್ರವನ್ನು ಮಾಡಲು ಬಯಸುತ್ತಾರೆ ಎಂದು  ನಾಗ್ಪುರ್ ಪ್ರಧಾನ ಕಚೇರಿಯ ಹಿಂದುತ್ವ ಸಂಘಟನೆಯ ಹೆಸರನ್ನು ಹೇಳದೆ ಜಾವೇದ್ ಅಖ್ತರ್ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com