ತೆರೆಗೆ ಬರಲು ಸಜ್ಜಾಗುತ್ತಿದೆ ಅಟಲ್ ಬಿಹಾರಿ ವಾಜಪೇಯಿ ಸಿನಿಮಾ, ಪ್ರಮುಖ ಪಾತ್ರಧಾರಿ ನಟನ ಹುಡುಕಾಟದಲ್ಲಿ ನಿರ್ಮಾಪಕರು
ಮುಂಬೈ: ಭಾರತದ ಮಾಜಿ ಪ್ರಧಾನ ಮಂತ್ರಿಗಳಲ್ಲಿ ದಿವಂಗತ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೆಸರು ಅಜರಾಮರ. ತಮ್ಮ ಕೆಲಸ, ಸಚ್ಚಾರಿತ್ರ್ಯದಿಂದ ಜನಪ್ರಿಯರು.ಇದೀಗ ಅವರ ಜೀವನಚರಿತ್ರೆ ತೆರೆಮೇಲೆ ಬರುತ್ತಿದೆ.
ಜನ್ಹಿತ್ ಮೇ ಜಾರಿ ಖ್ಯಾತಿಯ ನಿರ್ಮಾಪಕರಾದ ವಿನೋದ್ ಭಾನುಶಾಲಿ ಮತ್ತು ಪಿಎಂ ನರೇಂದ್ರ ಮೋದಿ (2019) ಚಿತ್ರವನ್ನು ನಿರ್ಮಿಸಿದ ಸಂದೀಪ್ ಸಿಂಗ್ ಅವರು ಉಲ್ಲೇಖ್ ಎನ್ ಪಿ ಅವರ ಹೆಚ್ಚು ಮಾರಾಟವಾದ ಪುಸ್ತಕ ದಿ ಅನ್‌ಟೋಲ್ಡ್ ವಾಜಪೇಯಿ: ಪೊಲಿಟಿಷಿಯನ್ ಮತ್ತು ಪ್ಯಾರಡಾಕ್ಸ್ ಅನ್ನು ಸಿನೆಮಾ ತಯಾರಿಸಲು ನಿರ್ಧರಿಸಿದ್ದಾರೆ.
ಮೇನ್ ರಹೂನ್ ಯಾ ನಾ ರಹೂನ್, ಯೇ ದೇಶ್ ರೆಹನಾ ಚಾಹಿಯೇ - ಅಟಲ್ ಎಂಬ ಶೀರ್ಷಿಕೆಯ ಚಿತ್ರವು ಮುಂದಿನ ವರ್ಷ ತೆರೆಗೆ ಬರಲಿದೆ. ಮುಖ್ಯ ಪಾತ್ರಧಾರಿಗೆ ನಟನ ಹುಡುಕಾಟ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಚಿತ್ರವು ಅಟಲ್ ಬಿಹಾರಿ ವಾಜಪೇಯಿ ಅವರ 99ನೇ ಜನ್ಮದಿನವಾದ ಮುಂದಿನ ವರ್ಷ 2023 ರ ಕ್ರಿಸ್ ಮಸ್ ಗೆ ಬಿಡುಗಡೆಯಾಗಲಿದೆ.
ನನ್ನ ಜೀವನದುದ್ದಕ್ಕೂ ನಾನು ಅಟಲ್‌ಜಿ ಅವರ ದೊಡ್ಡ ಅಭಿಮಾನಿ. ಒಬ್ಬ ಜನ ನಾಯಕ, ಒಬ್ಬ ರಾಜನೀತಿಜ್ಞ ಸರ್ವಶ್ರೇಷ್ಠತೆ, ದಾರ್ಶನಿಕ ಅಟಲ್ ಬಿಹಾರಿ ವಾಜಪೇಯಿಯವರು. ನಮ್ಮ ರಾಷ್ಟ್ರ ನಿರ್ಮಾಣಕ್ಕೆ ಅವರ ಕೊಡುಗೆ ಅಪ್ರತಿಮವಾಗಿದೆ. ಭಾನುಶಾಲಿ ಸ್ಟುಡಿಯೋಸ್ ಲಿಮಿಟೆಡ್ ಅವರ ಜೀವನಚರಿತ್ರೆಯನ್ನು ಬೆಳ್ಳಿತೆರೆಗೆ ತರುತ್ತಿರುವುದು ನಮಗೆ ದೊಡ್ಡ ಗೌರವವಾಗಿದೆ ಎಂದು ನಿರ್ಮಾಪಕ ವಿನೋದ್ ಭಾನುಶಾಲಿ ಹೇಳಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ಅವರು ತಮ್ಮ ಮಾತುಗಳಿಂದ ಶತ್ರುಗಳ ಹೃದಯವನ್ನು ಗೆದ್ದ ಭಾರತದ ಇತಿಹಾಸದ ಶ್ರೇಷ್ಠ ನಾಯಕರಲ್ಲಿ ಒಬ್ಬರು, ಅವರು ರಾಷ್ಟ್ರವನ್ನು ಸಮರ್ಥವಾಗಿ ಮುನ್ನಡೆಸಿದ್ದರು. ಪ್ರಗತಿಪರ ಭಾರತದ ನೀಲನಕ್ಷೆಯನ್ನು ರಚಿಸಿದವರು. ಒಬ್ಬ ಚಲನಚಿತ್ರ ನಿರ್ಮಾಪಕನಾಗಿ ಅವರ ಬಗ್ಗೆ ಚಲನಚಿತ್ರ ಮೂಲಕ ಜನರಿಗೆ ತೋರಿಸುವುದು, ಹೇಳುವುದು ಅತ್ಯುತ್ತಮ ಸಂವಹನ ಮಾಧ್ಯಮ ಎಂದು ನಾನು ಭಾವಿಸಿದ್ದೇನೆ. ಅವರ ರಾಜಕೀಯ ಸಿದ್ಧಾಂತಗಳನ್ನು ಮಾತ್ರವಲ್ಲದೆ ಅವರ ಮಾನವೀಯ ಮತ್ತು ಕಾವ್ಯಾತ್ಮಕ ಅಂಶಗಳನ್ನು ಚಿತ್ರದಲ್ಲಿ ಅವಾವರಣಗೊಳಿಸಲಾಗುತ್ತದೆ ಎಂದು ಸಂದೀಪ್ ಸಿಂಗ್ ಹೇಳಿದ್ದಾರೆ.