ಶಾರುಖ್ ಖಾನ್ ಹಿಂದೂಸ್ತಾನದ ಐಡೆಂಟಿಟಿ ಅಲ್ಲ, ರಿಲೇಶನ್‌ಶಿಪ್‌ ನಲ್ಲಿರೋದು ದೊಡ್ಡ ವಿಷಯವೇ ಆದರೂ, ಮದುವೆಯಷ್ಟು ದೊಡ್ಡದಲ್ಲ: ಅರ್ಜುನ್ ಕಪೂರ್

ಬಾಲಿವುಡ್ ನಟ ಅರ್ಜುನ್ ಕಪೂರ್  ಸಾಮಾನ್ಯವಾಗಿ ಯಾವ್ಯಾವುದೋ ವಿಷಯಗಳಿಗಾಗಿ ಸುದ್ದಿಯಲ್ಲಿರುತ್ತಾರೆ. ಚಲನಚಿತ್ರಗಳ ಕೆಟ್ಟ ಆಯ್ಕೆ ಹಾಗೂ ಮಲೈಕಾ ಆರೋರಾ ಅವರೊಟ್ಟಿಗಿನ ಸಂಬಂಧಕ್ಕಾಗಿ ಸದಾ ಟ್ರೋಲ್ ಗೊಳಗಾಗುತ್ತಿರುತ್ತಾರೆ.
ಅರ್ಜುನ್ ಕಪೂರ್
ಅರ್ಜುನ್ ಕಪೂರ್
Updated on

ಬಾಲಿವುಡ್ ನಟ ಅರ್ಜುನ್ ಕಪೂರ್ ಸಾಮಾನ್ಯವಾಗಿ ಯಾವ್ಯಾವುದೋ ವಿಷಯಗಳಿಗಾಗಿ ಸುದ್ದಿಯಲ್ಲಿರುತ್ತಾರೆ. ಚಲನಚಿತ್ರಗಳ ಕೆಟ್ಟ ಆಯ್ಕೆ ಹಾಗೂ ಮಲೈಕಾ ಆರೋರಾ ಅವರೊಟ್ಟಿಗಿನ ಸಂಬಂಧಕ್ಕಾಗಿ ಸದಾ ಟ್ರೋಲ್ ಗೊಳಗಾಗುತ್ತಿರುತ್ತಾರೆ.

ಆದರೆ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ನೀಡಿದ ಉತ್ತರದಿಂದಾಗಿ ಅರ್ಜುನ್ ಕಪೂರ್ ಅವರ ಅಭಿಮಾನಿಗಳು ಹಾಗೂ ವಿಮರ್ಶಕರು ಅವರನ್ನು ಶ್ಲಾಘಿಸುತ್ತಿದ್ದಾರೆ.

ಅರ್ಜುನ್ ಕಪೂರ್ ಇತ್ತೀಚೆಗೆ MTV ಯ ನಿಷೇಧ್ ಸೀಸನ್ 2 ರ ಬಿಡುಗಡೆ ಸಮಾರಂಭದಲ್ಲಿ ಕಾಣಿಸಿಕೊಂಡರು. ಈ ವೇಳೆ ಅವರು ದೈಹಿಕ ಹಾಗೂ ಲೈಂಗಿಕ ಆರೋಗ್ಯ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಮಾತನಾಡಿದರು.

ಮಾಧ್ಯಮ ಸಂವಾದದ ಸಮಯದಲ್ಲಿ, ಪತ್ರಕರ್ತರೊಬ್ಬರು ವಿವಾಹಪೂರ್ವ ಲೈಂಗಿಕತೆಯ ಬಗ್ಗೆ ಮತ್ತು ಬಹು ಲೈಂಗಿಕ ಪಾಲುದಾರರನ್ನು ಹೊಂದುವ ಬಗ್ಗೆ ಪ್ರಶ್ನೆ ಕೇಳಿದರು.

ನಮ್ಮ ದೇಶದ ಸಂಸ್ಕೃತಿಯೇ ನಮ್ಮ ಅಸ್ಮಿತೆ. ಓರ್ವ ಪುರುಷನಿಗೆ ಓರ್ವ ಮಹಿಳೆ ಎನ್ನುವುದು ಭಾರತದ ಅಸ್ಮಿತೆ. ಮದುವೆಗೂ ಮುನ್ನ ಲೈಂಗಿಕ ಸಂಬಂಧ ಬೆಳೆಸಬಾರದು ಎನ್ನುವುದುಂಟು. ನಾವು ಒಮ್ಮೆ ಬದುಕುತ್ತೇವೆ, ಒಮ್ಮೆ ಸಾಯುತ್ತೇವೆ, ಒಮ್ಮೆ ಮದುವೆಯಾಗುತ್ತೇವೆ. ಇದನ್ನು ಶಾರುಖ್ ಅವರು ಪ್ರಚಾರ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ನೀವು ಯಾಕೆ ಬಹುಸಂಗಾತಿಗಳಿರಬೇಕು ಅಥವಾ ಮುಕ್ತ ಸಂಭೋಗ ಇರಬೇಕು ಎಂದು ಯೋಚನೆ ಮಾಡುತ್ತೀರಿ" ಎಂದು  ಅರ್ಜುನ್  ಕಪೂರ್ ಅವರಿಗೆ ಪ್ರಶ್ನೆ ಮಾಡಲಾಗಿತ್ತು.

"ಯಾರು ಈ ಐಡೆಂಟಟಿಯನ್ನು ಮಾಡಿದ್ದಾರೆ" ಎಂದು ಅರ್ಜುನ್ ಕಪೂರ್ ಅವರು ಪ್ರಶ್ನೆ ಕೇಳಿದ್ದಾರೆ. ಆಗ ಪತ್ರಕರ್ತ ಅವರು "ಶಾರುಖ್ ಖಾನ್" ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಅರ್ಜುನ್ ಕಪೂರ್, "ಶಾರುಖ್ ಖಾನ್  ಹಿಂದೂಸ್ತಾನದ ಐಡೆಂಟಿಟಿ ಅಲ್ಲ, ಆದರೆ ಶಾರುಖ್ ಖಾನ್ ಅವರು ಈ ರೀತಿ ವಿಷಯವನ್ನು ಪ್ರಚಾರ ಮಾಡೋದಿಲ್ಲ" ಎಂದು ಹೇಳಿದ್ದಾರೆ.

ಮತ್ತೆ ಮುಂದುವರಿದು ಅರ್ಜುನ್ "ವ್ಯಕ್ತಿಯ ಜೀವನದಲ್ಲಿ ಏಳು ಬೀಳು ಇರುತ್ತದೆ. ನೀವು ಸಾಕಷ್ಟು ಜನರನ್ನು ನೋಡುತ್ತೀರಿ, ರಿಲೇಶನ್‌ಶಿಪ್‌ನ್ನು ಬೆಳೆಸಿಕೊಳ್ಳುತ್ತೀರಿ. ಮದುವೆಯಾಗದೆ ಇರೋದಕ್ಕಿಂತ ಮದುವೆಯಾಗೋದು ದೊಡ್ಡ ವಿಷಯ. ರಿಲೇಶನ್‌ಶಿಪ್‌ನಲ್ಲಿರೋದು ದೊಡ್ಡ ವಿಷಯವೇ ಆದರೂ ಕೂಡ ಮದುವೆಯಷ್ಟು ದೊಡ್ಡದಲ್ಲ. ಮದುವೆ ಹಂತಕ್ಕೆ ಹೋಗಲು ಸಾಕಷ್ಟು ಹಂತ ಇರುತ್ತದೆ. ಒಬ್ಬರನ್ನು ನೋಡಿದಾಗಲೇ ನಾವು ಇವರನ್ನು ಮದುವೆಯಾಗಬೇಕು ಎಂದು ನಿರ್ಧಾರಕ್ಕೆ ಬರೋದು ಕಷ್ಟ" ಎಂದಿದ್ದಾರೆ. ಪತ್ರಕರ್ತರು ಕೇಳಿದ ಪ್ರಶ್ನೆಗೆ ಗಲಿಬಿಲಿಗೊಳ್ಳದೇ ಅರ್ಜುನ್ ಕಪೂರ್ ಶಾಂತವಾಗಿ ಉತ್ತರಿಸಿದ್ದಾರೆ. ಈ ವಿಡಿಯೋ ನೋಡಿ ನೆಟ್ಟಿಗರು ಅರ್ಜುನ್ ಕಪೂರ್ ಅವರನ್ನು ಹಾಡಿ ಹೊಗಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com