ಗಾಲ್ವಾನ್ ಸಂಘರ್ಷ ಕುರಿತು ಟ್ವೀಟ್ ಮಾಡಿ ಟ್ರೋಲ್ ಗೆ ತುತ್ತಾದ ನಟಿ ರಿಚಾ ಚಡ್ಡಾ

ಬಾಲಿವುಡ್ ನಟಿ ರಿಚಾ ಚಡ್ಡಾ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟೀಕೆಗೆ ವ್ಯಕ್ತರಾಗಿದ್ದಾರೆ. ಅವರ ವಿರುದ್ಧ ಕೇಸು ದಾಖಲಿಸಬೇಕೆಂಬ ಆಗ್ರಹ ಕೇಳಿಬರುತ್ತಿದೆ. ಅದಕ್ಕೆ ಕಾರಣ ಅವರು 2020ರ ಭಾರತ ಮತ್ತು ಚೀನಾ ಮಧ್ಯೆ ನಡೆದಿದ್ದ ಗಾಲ್ವಾನ್ ಸಂಘರ್ಷ ಕುರಿತು ಮಾಡಿದ್ದ ಟ್ವೀಟ್. 
ರಿಚಾ ಚಡ್ಡಾ ಮಾಡಿದ ಟ್ವೀಟ್
ರಿಚಾ ಚಡ್ಡಾ ಮಾಡಿದ ಟ್ವೀಟ್
Updated on

ನವದೆಹಲಿ: ಬಾಲಿವುಡ್ ನಟಿ ರಿಚಾ ಚಡ್ಡಾ(Richa Chadda) ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟೀಕೆಗೆ ವ್ಯಕ್ತರಾಗಿದ್ದಾರೆ. ಅವರ ವಿರುದ್ಧ ಕೇಸು ದಾಖಲಿಸಬೇಕೆಂಬ ಆಗ್ರಹ ಕೇಳಿಬರುತ್ತಿದೆ. ಅದಕ್ಕೆ ಕಾರಣ ಅವರು 2020ರ ಭಾರತ ಮತ್ತು ಚೀನಾ ಮಧ್ಯೆ ನಡೆದಿದ್ದ ಗಾಲ್ವಾನ್ ಸಂಘರ್ಷ ಕುರಿತು ಮಾಡಿದ್ದ ಟ್ವೀಟ್. 

2020ರಲ್ಲಿ ನಡೆದ ಗಾಲ್ವಾನ್ ಸಂಘರ್ಷದಲ್ಲಿ ಹಲವು ಭಾರತೀಯ ಯೋಧರು ಹುತಾತ್ಮರಾಗಿದ್ದರು. ಮೊನ್ನೆ ಹೇಳಿಕೆ ನೀಡಿದ್ದ ಉತ್ತರ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ, ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು (PoK) ಹಿಂಪಡೆಯಲು ಭಾರತೀಯ ಸೇನೆ ಸಿದ್ಧವಾಗಿದೆ ಎಂದಿದ್ದರು.

ಅದಕ್ಕೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ್ದ ರಿಚಾ ಚಡ್ಡಾ ಗಾಲ್ವಾನ್ ಹಾಯ್ ಎಂದು ಕರೆಯುತ್ತಿದೆ, ಹೋಗಿ ಯುದ್ಧ ಮಾಡಿ ಎಂಬ ಅರ್ಥ ಬರುವ ರೀತಿಯಲ್ಲಿ ಟ್ವೀಟ್ ಮಾಡಿದ್ದರು.

ಅವರು ಟ್ವೀಟ್ ಮಾಡಿದ್ದೇ ತಡ, ಸೋಷಿಯಲ್ ಮೀಡಿಯಾದಲ್ಲಿ ಹಲವರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಭಾರತ ಮತ್ತು ಚೀನಾ ನಡುವಿನ 2020 ಘರ್ಷಣೆಯ ಬಗ್ಗೆ ಮಾತನಾಡುವ ಮೂಲಕ ರಿಚಾ ಚಡ್ಡಾ ಭಾರತೀಯ ಸೇನೆಯನ್ನು ಮತ್ತು ಸೈನಿಕರನ್ನು ಅವಮಾನ ಮಾಡಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. 

"ಗಾಲ್ವಾನ್ ಕಣಿವೆಯಲ್ಲಿ ನಮ್ಮ ಸೈನಿಕರ ತ್ಯಾಗವನ್ನು ಅಪಹಾಸ್ಯ ಮಾಡಲಾಗುತ್ತಿದೆ. ನಾಚಿಕೆಗೇಡಿನ ಮತ್ತು ಅವಮಾನಕರ ಎಂದು ಒಬ್ಬರು ಹೇಳಿದರೆ. ಮತ್ತೊಬ್ಬರು, ಪಿಒಕೆಯಲ್ಲಿ ಕಮಾಂಡಿಂಗ್ ಅಧಿಕಾರಿಯೊಬ್ಬರು ನೀಡಿದ ಹೇಳಿಕೆಗೆ ಪ್ರತಿಕ್ರಿಯೆಯಾಗಿ 'ಗಾಲ್ವಾನ್ ಹಾಯ್' ಎಂದು ರಿಚಾ ಚಡ್ಡಾ ಬರೆಯುತ್ತಾರೆ. ಭಾರತಕ್ಕಾಗಿ ತಮ್ಮ ಪ್ರಾಣವನ್ನು ನೀಡಿದವರನ್ನು ಅಗೌರವಗೊಳಿಸುವುದು. ಭಾರತೀಯ ಸೇನೆಯನ್ನು ಅಪಹಾಸ್ಯ ಮಾಡುವುದು. ಎಷ್ಟು ಕೆಳಮಟ್ಟಕ್ಕೆ ಹೋಗುತ್ತಾರೆ ಎಂಬುದಕ್ಕೆ ಮತ್ತೊಂದು ನಿದರ್ಶನವಾಗಿದೆ, ಇಂತವರಿಗೆ ಬಹಿಷ್ಕಾರ ಹಾಕಬೇಕು ಎಂದಿದ್ದಾರೆ. 

ಬಿಜೆಪಿಯ ಮಂಜಿಂದರ್ ಸಿಂಗ್ ಸಿರ್ಸಾ, "ಅವಮಾನಕರ ಟ್ವೀಟ್. ಆದಷ್ಟು ಬೇಗ ಹಿಂಪಡೆಯಬೇಕು. ನಮ್ಮ ಸಶಸ್ತ್ರ ಪಡೆಗಳನ್ನು ಅವಮಾನಿಸುವುದು ಸಮರ್ಥನೀಯವಲ್ಲ" ಎಂದು ಟ್ವೀಟ್ ಮಾಡಿದ್ದಾರೆ.

ಈ ಮಧ್ಯೆ, ರಕ್ಷಣಾ ಸಚಿವರ ಹಿಂದಿನ ಭಾಷಣವನ್ನು ಉಲ್ಲೇಖಿಸಿ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರ ಹೇಳಿಕೆಯನ್ನು ಅವರು ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಹಿಂಪಡೆಯುವ ಭಾರತ ಸರ್ಕಾರದ ಸಂಕಲ್ಪವನ್ನು ಪುನರುಚ್ಚರಿಸಿದರು, ಪಾಕ್ ಆಕ್ರಮಿತ ಕಾಶ್ಮೀರ ಭಾಗದ ಎಲ್ಲಾ ನಿರಾಶ್ರಿತರು ತಮ್ಮ ಭೂಮಿ ಮತ್ತು ಮನೆಗಳನ್ನು ಮರಳಿ ಪಡೆಯುತ್ತಾರೆ ಎಂದು ಹೇಳಿದರು.

ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ, "ಭಾರತೀಯ ಸೇನೆಗೆ ಸಂಬಂಧಿಸಿದಂತೆ, ಸರ್ಕಾರ ನೀಡುವ ಯಾವುದೇ ಆದೇಶವನ್ನು ಅದು ನಿರ್ವಹಿಸುತ್ತದೆ. ಅಂತಹ ಆದೇಶಗಳನ್ನು ನೀಡಿದಾಗ, ನಾವು ಯಾವಾಗಲೂ ಅದಕ್ಕೆ ಸಿದ್ಧರಾಗಿರುತ್ತೇವೆ ಎಂದು ಹೇಳಿದ್ದಾರೆ. 

ಎರಡೂ ರಾಷ್ಟ್ರಗಳ ಹಿತಾಸಕ್ತಿಯಿಂದಾಗಿ ಕದನ ವಿರಾಮವನ್ನು ಎಂದಿಗೂ ಮುರಿಯುವುದಿಲ್ಲ ಆದರೆ ನಮ್ಮ ಮಿಲಿಟರಿ ಯಾವಾಗಲೂ ಸಿದ್ಧವಾಗಿದೆ, ಪಾಕಿಸ್ತಾನ ಯಾವುದೇ ಕ್ಷಣದಲ್ಲಿ ಕದನ ವಿರಾಮ ಉಲ್ಲಂಘಿಸಿದರೆ ನಾವು ಅವರಿಗೆ ಸೂಕ್ತ ಉತ್ತರವನ್ನು ನೀಡುತ್ತೇವೆ ಎಂದು ಕದನ ವಿರಾಮದ ಉತ್ತರ ಸೇನಾ ಕಮಾಂಡರ್ ದ್ವಿವೇದಿ ಹೇಳಿದ್ದಾರೆ.

ರಿಚಾ ಚಡ್ಡಾ ಕ್ಷಮೆ: ತಮ್ಮ ಟ್ವೀಟ್ ಗೆ ವ್ಯತಿರಿಕ್ತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದಂತೆ ನಟಿ ರಿಚಾ ಜನತೆಯ ಭಾರತೀಯ ಸೇನೆ ಮತ್ತು ಯೋಧರ ಕ್ಷಮೆ ಕೋರಿ ಸ್ಪಷ್ಟನೆ ನೀಡಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com