'ಹೊಸ ವೃತ್ತಿಗೆ ಸೇರುವ ಸಾಮರ್ಥ್ಯವಿಲ್ಲ, ರಾಜಕೀಯಕ್ಕೆ ಸೇರುವುದಿಲ್ಲ, ಕಲಾವಿದೆಯಾಗಿ ಮುಂದುವರಿಕೆ: ಕಂಗನಾ ರಾನಾವತ್

ನಟಿ ಕಂಗನಾ ರಣಾವತ್ ಅವರು ರಾಜಕೀಯದಲ್ಲಿ ತೀವ್ರ ಆಸಕ್ತಿ ಹೊಂದಿದ್ದರೂ ವೃತ್ತಿಪರವಾಗಿ ಸಕ್ರಿಯವಾಗಿ ರಾಜಕೀಯಕ್ಕೆ ಪ್ರವೇಶಿಸುವ ಯಾವುದೇ ಯೋಜನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕಂಗನಾ ರಾನಾವತ್
ಕಂಗನಾ ರಾನಾವತ್
Updated on

ಮುಂಬೈ: ನಟಿ ಕಂಗನಾ ರನಾವತ್ ಅವರು ರಾಜಕೀಯದಲ್ಲಿ ತೀವ್ರ ಆಸಕ್ತಿ ಹೊಂದಿದ್ದರೂ ವೃತ್ತಿಪರವಾಗಿ ಸಕ್ರಿಯವಾಗಿ ರಾಜಕೀಯಕ್ಕೆ ಪ್ರವೇಶಿಸುವ ಯಾವುದೇ ಯೋಜನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕಂಗನಾ ರಾನಾವತ್ ದೇಶದ ಆಗುಹೋಗುಗಳಿಗೆ, ಬಿಜೆಪಿ ಪರವಾಗಿ ಆಗಾಗ ಪ್ರತಿಕ್ರಿಯೆ ನೀಡುತ್ತಿರುತ್ತಾರೆ. ಇಂತಹ ಸಂದರ್ಭಗಳೆಲ್ಲ ಅವರು ರಾಜಕೀಯಕ್ಕೆ ಸೇರುತ್ತಾರೆಯೇ ಎಂಬ ಚರ್ಚೆಗಳು ಆಗುತ್ತಿರುತ್ತದೆ. ಅದಕ್ಕೆ ಕೊನೆಗೂ ಸ್ಪಷ್ಟನೆ ನೀಡಿದ್ದಾರೆ. 

ಕಂಗನಾ ರನಾವತ್ (Kangana Ranauth) ಅವರು ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್‌ಗೆ ಭೇಟಿ ನೀಡಿದರು, ಅಲ್ಲಿ ಸೆಪ್ಟೆಂಬರ್ 17 ರಂದು ಪ್ರಾರಂಭವಾದ ಇ-ಹರಾಜಿನ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಉಡುಗೊರೆಯಾಗಿ ನೀಡಲಾದ 1,200 ಕ್ಕೂ ಹೆಚ್ಚು ವಸ್ತುಗಳನ್ನು ಪ್ರದರ್ಶಿಸಲಾಗಿದೆ.

ಅಯೋಧ್ಯೆಯಲ್ಲಿ ಮುಂಬರುವ ಶ್ರೀರಾಮ ಮಂದಿರದ ಮಾದರಿಗಾಗಿ ಬಿಡ್‌ಗಳನ್ನು ಇರಿಸಿರುವ ಕಂಗನಾ ತಮ್ಮ ವೃತ್ತಿ ಜೀವನ ಚಲನಚಿತ್ರಗಳ ಮೇಲೆ ಕೇಂದ್ರೀಕೃತವಾಗಿದೆ ಎಂದಿದ್ದಾರೆ. 

"ನಾನು ನನ್ನ ಚಲನಚಿತ್ರಗಳ ಚಿತ್ರೀಕರಣದಲ್ಲಿ ನಿರತನಾಗಿರುವುದರಿಂದ ರಾಜಕೀಯಕ್ಕೆ(Politics) ಪ್ರವೇಶಿಸುವ ಯಾವುದೇ ಯೋಜನೆ ಇಲ್ಲ. ನಾನು ರಾಜಕೀಯದಲ್ಲಿ ಆಸಕ್ತಿ ಹೊಂದಿದ್ದೇನೆ ಆದರೆ ಕಲಾವಿದಳಾಗಿ ಮಾತ್ರ. ನಾನು ನನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ್ದರಿಂದ ನಾನು ಯಶಸ್ವಿ ಕಲಾವಿದಳಾಗಿದ್ದೇನೆ. 16 ವರ್ಷದವಳಾಗಿದ್ದಾಗ ಚಿತ್ರರಂಗ ಪ್ರವೇಶಿಸಿದೆ ಎಂದರು. 

"ನನಗೆ ಹೊಸ ವೃತ್ತಿಜೀವನವನ್ನು ಪ್ರಾರಂಭಿಸುವ ಸಾಮರ್ಥ್ಯವಿಲ್ಲ ಆದರೆ ನಾನು ಯಾವಾಗಲೂ ರಾಜಕೀಯದಲ್ಲಿ ನನ್ನ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಉತ್ತಮ ಚಲನಚಿತ್ರಗಳನ್ನು ಮಾಡುತ್ತೇನ, ನಾನು ದೇಶಪ್ರೇಮಿ, ನಾನು ನನ್ನ ಕೆಲಸದಲ್ಲಿ ತುಂಬಾ ನಿರತಳಾಗಿರುತ್ತೇನೆ. ದೇಶಕ್ಕಾಗಿ ಒಳ್ಳೆಯದನ್ನು ಮಾಡುವ ಜನರನ್ನು ನಾನು ಯಾವಾಗಲೂ ಬೆಂಬಲಿಸುತ್ತೇನೆ ಎಂದರು. 
ರನೌತ್ ಅವರು ತಮ್ಮ ಮುಂಬರುವ ನಿರ್ದೇಶನದ ಎಮೆರ್ಜೆನ್ಸಿ ಬಗ್ಗೆ ಮಾತನಾಡಿದ್ದಾರೆ, ಇದರಲ್ಲಿ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪಾತ್ರವನ್ನೂ ನಿರ್ವಹಿಸಿದ್ದಾರೆ. 

ಎಮೆರ್ಜೆನ್ಸಿ ಚಿತ್ರದಲ್ಲಿ ಕ್ರಾಂತಿಕಾರಿ ನಾಯಕ ಜೆ ಪಿ ನಾರಾಯಣ್ ಪಾತ್ರದಲ್ಲಿ ಹಿರಿಯ ನಟ ಅನುಪಮ್ ಖೇರ್, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯಾಗಿ ಶ್ರೇಯಸ್ ತಲ್ಪಾಡೆ, ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್ಷಾ ಪಾತ್ರದಲ್ಲಿ ಮಿಲಿಂದ್ ಸೋಮನ್ ಮತ್ತು ಲೇಖಕ-ಸಾಂಸ್ಕೃತಿಕ ಕಾರ್ಯಕರ್ತ ಪುಪುಲ್ ಜಯಕರ್ ಪಾತ್ರದಲ್ಲಿ ಮಹಿಮಾ ಚೌಧರಿ ಕಾಣಿಸಿಕೊಳ್ಳಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com