ಮುಂಬೈ: ಬಿಗ್ ಬಾಸ್ 16ರಲ್ಲಿ ಪಾಲ್ಗೊಂಡಿರುವ ಬಾಲಿವುಡ್ ಖ್ಯಾತ ನಿರ್ದೇಶಕ ಸಾಜಿದ್ ಖಾನ್ ಮತ್ತೆ ಮೀಟೂ ವಿವಾದದಲ್ಲಿ ಸಿಲುಕಿದ್ದಾರೆ. ಸಾಜಿದ್ ಖಾನ್ ವಿರುದ್ಧ ಉರ್ಫಿ ಜಾವೇದ್, ಶೆರ್ಲಿನ್ ಚೋಪ್ರಾ, ಕಾಮ್ಯಾ ಪಂಜಾಬಿ ಮತ್ತು ಮಂದನಾ ಕರಿಮಿ ಸೇರಿದಂತೆ ಹಲವು ನಟಿಯರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.
ಇತ್ತೀಚೆಗೆ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರು ಬಿಗ್ ಬಾಸ್ ಸೀಸನ್ 16 ರಿಂದ ಸಾಜಿದ್ ಅವರನ್ನು ಹೊರಹಾಕುವಂತೆ ಮನವಿ ಮಾಡಿದ್ದರು. ಅವರು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರಿಗೆ ಪತ್ರವನ್ನೂ ಬರೆದಿದ್ದಾರೆ.
ಇದೀಗ ಶೆರ್ಲಿನ್ ಚೋಪ್ರಾ ಸಾಜಿದ್ ಖಾನ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ವಿವಿಧ ಸೆಕ್ಷನ್ ಗಳಡಿ ಜುಹು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಶೆರ್ಲಿನ್, ಆತನನ್ನು ಬಿಗ್ ಬಾಸ್ ನಿಂದ ಹೊರಹಾಕುವಂತೆ ಒತ್ತಾಯಿಸಿದ್ದಾರೆ.
ಈ ಕುರಿತು ಎಎನ್ ಐ ಸುದ್ದಿಸಂಸ್ಥೆಯೊಂದರಲ್ಲಿ ಮಾತನಾಡಿರುವ ಶೆರ್ಲಿನ್, ಮೊದಲು ಸಾಜಿದ್ ಖಾನ್ ನಂತಹವರ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಲು ಧೈರ್ಯ ಇರಲಿಲ್ಲ. ಮೀಟೂ ನಂತರ ಮಹಿಳೆಯರು ಮುಂದೆ ಬಂದಿದ್ದು, ಆತನನ್ನು ಜೈಲಿಗೆ ಹಾಕಬೇಕು ಎಂದು ಒತ್ತಾಯಿಸಿದರು.
Advertisement