ಸಲ್ಮಾನ್ ಖಾನ್ ಹತ್ಯೆಗೆ ಸಂಚು: ಫಾರ್ಮ್ ಹೌಸ್  ಸಿಬ್ಬಂದಿಯೊಂದಿಗೆ ಸ್ನೇಹ ಬೆಳೆಸಲು ಯತ್ನಿಸಿದ ಗ್ಯಾಂಗ್!

ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಹತ್ಯೆಗೆ ಸಂಚು ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಗುರುವಾರ ಮಹತ್ವದ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ.
ಸಲ್ಮಾನ್ ಖಾನ್
ಸಲ್ಮಾನ್ ಖಾನ್

ನವದೆಹಲಿ: ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಹತ್ಯೆಗೆ ಸಂಚು ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಗುರುವಾರ ಮಹತ್ವದ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ.

ಸಲ್ಮಾನ್ ಖಾನ್ ಮುಂಬೈಯಲ್ಲಿನ ಫಾರ್ಮ್ ಹೌಸ್ ಗೆ ಬರುವ ಮತ್ತು ನಿರ್ಗಮಿಸುವ ವೇಳೆಯನ್ನು ಖಚಿತಪಡಿಸಿಕೊಳ್ಳಲು ಅಲ್ಲಿನ ಸಿಬ್ಬಂದಿಯೊಂದಿಗೆ ಸ್ನೇಹ ಬೆಳೆಸಿಕೊಳ್ಳಲು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸದಸ್ಯರು ಪ್ರಯತ್ನಿಸಿದರಲ್ಲದೇ, ರಸ್ತೆ ಗುಂಡಿಗಳಿಂದಾಗಿ ಸಲ್ಮಾನ್ ಖಾನ್  ಮನೆಗೆ ಬರುವಾಗ ಮತ್ತು ನಿರ್ಗಮಿಸುವಾಗ ಅವರ ಕಾರು ಯಾವ ವೇಗದಲ್ಲಿ ಚಲಿಸುತ್ತದೆ ಎಂಬುದನ್ನು ತಿಳಿಯಲು ಸಲ್ಮಾನ್ ಅವರ ತೋಟದ ಮನೆಯ ಸುತ್ತಲಿನ ಪ್ರದೇಶವನ್ನು ಪರಿಶೀಲಿಸಿದ್ದರು. ಶೂಟರ್‌ಗಳು ಸಣ್ಣ ಪಿಸ್ತೂಲ್ ಕಾರ್ಟ್ರಿಡ್ಜ್‌ಗಳನ್ನು ಹೊತ್ತೊಯ್ದಿದ್ದರು ಎಂದು ದೆಹಲಿ ವಿಶೇಷ ಪೊಲೀಸ್ ಆಯುಕ್ತ ಹೆಚ್ ಜಿಎಸ್ ಧಲಿವಾಲ್ ತಿಳಿಸಿದ್ದಾರೆ.  

ಸಿದ್ದು ಮೂಸ್ ವಾಲಾ ಹತ್ಯೆಗೂ ಮುನ್ನವೇ ಈ ಗ್ಯಾಂಗ್ ಸಲ್ಮಾನ್ ಖಾನ್ ಕೊಲ್ಲಲು ಯೋಜನೆ ಸಿದ್ಧಪಡಿಸಿತ್ತು. ಸಲ್ಮಾನ್ ಖಾನ್ ಅಭಿಮಾನಿಗಳಂತೆ ಬಿಂಬಿಸಿಕೊಂಡು, ಸಲ್ಮಾನ್ ಖಾನ್ ಫಾರ್ಮ್ ಹೌಸ್ ಮನೆಯ ಸಿಬ್ಬಂದಿಯೊಂದಿಗೆ ಸ್ನೇಹ ಬೆಳೆಸಿಕೊಳ್ಳಲು ಯತ್ನಿಸಿದ್ದರು. ಫಾರ್ಮ್ ಹೌಸ್ ಬಳಿಯೇ ಮನೆಯೊಂದನ್ನು ಬಾಡಿಗೆ ಪಡೆದು ಅಲ್ಲಿಯೇ ಒಂದು ತಿಂಗಳ ಕಾಲ ಇದ್ದರು ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದರು.

 ಕಪಿಲ್ ಪಂಡಿತ್, ಸಂತೋಷ್ ಜಾಧವ್, ಸಚಿನ್ ವಿಷ್ಣೋಯ್ ಥಾಪನ್ ಮುಂಬೈನ ವಾಝೆ ಪ್ರದೇಶದ ಪನ್ವೇಲ್‌ನಲ್ಲಿ ಬಾಡಿಗೆ ಕೊಠಡಿಯೊಂದಿಗೆ ಉಳಿದುಕೊಳ್ಳಲು ಬಂದಿದ್ದರು. ಪನ್ವೆಲ್‌ನಲ್ಲಿ ಸಲ್ಮಾನ್ ಖಾನ್ ಅವರ ಫಾರ್ಮ್‌ಹೌಸ್ ಇದೆ. ಆದ್ದರಿಂದ ಅದೇ ಫಾರ್ಮ್‌ಹೌಸ್‌ಗೆ ಹೋಗುವ ಮಾರ್ಗದಲ್ಲಿ ಲಾರೆನ್ಸ್ ಶೂಟರ್‌ಗಳು ಬಾಡಿಗೆಗೆ ಪಡೆದ ಕೊಠಡಿಯಲ್ಲಿ ಸುಮಾರು ಒಂದೂವರೆ ತಿಂಗಳು ಅಲ್ಲಿಯೇ ಉಳಿದುಕೊಂಡಿದ್ದರು ಎಂದು ಅವರು ಹೇಳಿದರು.

ಬಿಷ್ಣೋಯ್  ಸೂಚನೆ ಮೇರೆಗೆ  ಕಪಿಲ್ ಪಂಡಿತ್, ಸಂತೋಷ್ ಜಾಧವ್ ಮತ್ತು ಸಚಿನ್ ಬಿಷ್ಣೋಯ್ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದರು.  ಆದರೆ ಆ ಅವಧಿಯಲ್ಲಿ ಸಲ್ಮಾನ್ ಖಾನ್ ಹತ್ಯೆಗೆ ಗ್ರೌಂಡ್ ವರ್ಕ್ ಮಾಡಲಾಯಿತು. ಆದರೆ, ಸಿಬ್ಬಂದಿ ಸಿಧು ಹತ್ಯೆಗೆ ಹೆಚ್ಚಿನ ಪ್ರಯತ್ನ ನಡೆಸಿದ್ದರಿಂದ ಮೇ 29 ರಂದು ಆತನ ಹತ್ಯೆಯಾಯಿತು ಎಂದು ಅಧಿಕಾರಿ ತಿಳಿಸಿದರು.  

ಕಪಿಲ್ ಪಂಡಿತ್ ಗೋಲ್ಡಿ-ಬಿಷ್ಣೋಯ್ ಗ್ಯಾಂಗ್‌ನ ಶಾರ್ಪ್‌ಶೂಟರ್ ಆಗಿದ್ದು, ಇತ್ತೀಚೆಗೆ ಭಾರತ-ಪಾಕ್ ಗಡಿಯಲ್ಲಿ ದೆಹಲಿ ಪೊಲೀಸ್ ಮತ್ತು ಪಂಜಾಬ್ ಪೊಲೀಸರ ವಿಶೇಷ ಸೆಲ್ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಲಾಯಿತು. ಈ ಮಧ್ಯೆ ಸಲ್ಮಾನ್ ಖಾನ್ ಬೆದರಿಕೆ ಪ್ರಕರಣದ ತನಿಖೆಯನ್ನು ಕ್ರೈಂ ಬ್ರಾಂಚ್‌ಗೆ ವರ್ಗಾಯಿಸಲಾಗಿದೆ. ಮೊದಲಿಗೆ ಪ್ರಕರಣವನ್ನು ಬಾಂದ್ರಾ ಪೊಲೀಸರು ತನಿಖೆ ನಡೆಸುತ್ತಿದ್ದರು. ಮುಂಬೈ ಅಪರಾಧ ವಿಭಾಗದ ಅಧಿಕಾರಿಗಳು ಈ ಪ್ರಕರಣದಲ್ಲಿ ಬಂಧಿತ ಆರೋಪಿಗಳನ್ನು ವಿಚಾರಣೆ ಮಾಡಲು ದೆಹಲಿಗೆ ತೆರಳುವ ನಿರೀಕ್ಷೆಯಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com