'ಪಠಾಣ್' ಸಿನಿಮಾದ ಬೇಷರಮ್ ರಂಗ್ ಹಾಡಿನಲ್ಲಿ ಮೈ ಚಳಿ ಬಿಟ್ಟು ಕುಣಿದ ದೀಪಿಕಾ-ಶಾರುಖ್!
ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಟನೆಯ ಬಹು ನಿರೀಕ್ಷಿತ ಪಠಾಣ್ ಸಿನಿಮಾದ ಬೇಷರಮ್ ರಂಗ್ ಹಾಡು ರಿಲೀಸ್ ಆಗಿದೆ. ಬೇಷರಮ್ ರಂಗ್.. ಹಾಡು ಸೋಮವಾರ ಬಿಡುಗಡೆ ಆಗಿದೆ. ದೀಪಿಕಾ ಪಡುಕೋಣೆ ಮೈಚಳಿ ಬಿಟ್ಟು ಸೊಂಟ ಬಳುಕಿಸಿದ್ದಾರೆ
Published: 13th December 2022 03:11 PM | Last Updated: 13th December 2022 04:08 PM | A+A A-

ಪಠಾಣ್ ಸಿನಿಮಾ ಸ್ಟಿಲ್
ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಟನೆಯ ಬಹು ನಿರೀಕ್ಷಿತ ಪಠಾಣ್ ಸಿನಿಮಾದ ಬೇಷರಮ್ ರಂಗ್ ಹಾಡು ರಿಲೀಸ್ ಆಗಿದೆ. ಬೇಷರಮ್ ರಂಗ್.. ಹಾಡು ಸೋಮವಾರ ಬಿಡುಗಡೆ ಆಗಿದೆ. ದೀಪಿಕಾ ಪಡುಕೋಣೆ ಮೈಚಳಿ ಬಿಟ್ಟು ಸೊಂಟ ಬಳುಕಿಸಿದ್ದಾರೆ. ಬೇಷರಮ್ ಹಾಡು ಸಿನಿಮಾ ಬಗ್ಗೆ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ.
‘ಪಠಾಣ್’ ಸಿನಿಮಾದ ಮೊದಲ ಹಾಡು ‘ಬೇಷರಂ ರಂಗ್..’ ಬಿಡುಗಡೆ ಆಗಿದೆ. ಈ ಗೀತೆಯನ್ನು ಗ್ಲಾಮರಸ್ ಆಗಿ ಚಿತ್ರಿಸಲಾಗಿದೆ. ದೀಪಿಕಾ ಪಡುಕೋಣೆ ಅವರು ತುಂಬ ಹಾಟ್ ಆಗಿ ಕಾಣಿಸಿಕೊಂಡು ಪಡ್ಡೆಗಳ ನಿದ್ದೆ ಕದ್ದಿದ್ದಾರೆ.ಶಾರುಖ್ ಖಾನ್ ಅವರು ಈ ಚಿತ್ರಕ್ಕಾಗಿ ತುಂಬ ಶ್ರಮಪಟ್ಟಿದ್ದಾರೆ. ದೇಹ ಹುರಿಗೊಳಿಸಿಕೊಂಡು ಸಿಕ್ಸ್ ಪ್ಯಾಕ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಸಿದ್ದಾರ್ಥ್ ಆನಂದ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಜೊತೆ ಜಾನ್ ಅಬ್ರಾಹಂ ಕೂಡ ಪ್ರಮುಖ ಪಾತ್ರವೊಂದನ್ನು ಮಾಡಿದ್ದಾರೆ.
ಹಾಡಿಗೆ ಶಿಲ್ಪಾರಾವ್ ಹಿನ್ನೆಲೆ ಗಾಯನವಿದೆ, ಸ್ಪೇನ್ ನಲ್ಲಿ ಹಾಡಿನ ಚಿತ್ರೀಕರಣ ಮಾಡಲಾಗಿದೆ. ಹಾಡಿನ ಶೈಲಿ ಮತ್ತು ಸೌಂದರ್ಯವು ರೇಸ್ -2 ನಲ್ಲಿ ಸಾಂಗ್ ನೆನಪಿಸುತ್ತದೆ, ಬ್ಯಾಂಗ್ ಬ್ಯಾಂಗ್ ಮತ್ತು ವಾರ್ ಎರಡು ಸಿನಿಮಾವನ್ನು ಆನಂದ್ ಸಿದ್ದಾರ್ಥ್ ನಿರ್ದೇಶಿಸಿದ್ದಾರೆ.
ಇನ್ನೂ ದಕ್ಷಿಣ ಭಾರತದ ಅಭಿಮಾನಿಗಳನ್ನು ಗಣನೆಗೆ ತೆಗೆದುಕೊಂಡಿರುವ ಪಠಾಣ್ ಮಾರ್ಕೆಟಿಂಗ್ ತಂಡ ತಮಿಳು ಮತ್ತು ತೆಲುಗು ಭಾಷೆಯಲ್ಲಿಯೂ ಸಾಂಗ್ ರಿಲೀಸ್ ಮಾಡಲು ನಿರ್ಧರಿಸಿದೆ. ಇದನ್ನು ಸ್ವತಃ ಶಾರುಖ್ ಖಾನ್ ಟ್ವೀಟ್ ಮಾಡಿ ತಿಳಿಸಿದ್ದಾರೆ.
ಇದನ್ನೂ ಓದಿ: ದೀಪಿಕಾ ಪಡುಕೋಣೆಯನ್ನು ಅತ್ಯಂತ ಗ್ಲಾಮರಸ್ ಆಗಿ ತೋರಿಸಲು ಬಯಸಿದ್ದೆ: 'ಪಠಾಣ್' ನಿರ್ದೇಶಕ ಸಿದ್ಧಾರ್ಥ್ ಆನಂದ್
ಪಠಾಣ್ ಸಿನಿಮಾದಲ್ಲಿ ದೀಪಿಕಾ ಮತ್ತು ಶಾರುಖ್ ಸ್ಪೈ ಗಳಾಗಿ ಕಾಣಿಸಿಕೊಂಡಿದ್ದಾರೆ. ಹಾಡಿನಲ್ಲಿ ದೀಪಿಕಾ ಅವರನ್ನು ಅತ್ಯಂತ ಗ್ಲಾಮರಸ್ ಆಗಿ ಕಾಣಿಸಿದ್ದಾರೆ. ಯುರೋಪ್ ನ ಕರಾವಳಿ ತೀರದಲ್ಲಿ ದೀಪಿಕಾ ಅವರನ್ನು ನೋಡಿದಾಗ ಬೆರಗುಗೊಂಡಿದ್ದಾಗಿ ಮ್ಯಾಕ್ಸಿಮಮ್ ಗ್ಲಾಮರಸ್ ಆಗಿ ತೋರಿಸಿರುವುದಾಗಿ ನಿರ್ದೇಶಕ ಸಿದ್ದಾರ್ಥ್ ಆನಂದ್ ತಿಳಿಸಿದ್ದಾರೆ. 57 ವರ್ಷದ ಶಾರುಖ್ ಖಾನ್ ಕೂಡ ಸಿಕ್ಸ್ ಪ್ಯಾಕ್ ನಲ್ಲಿ ಎಲ್ಲರ ಮನಸೂರೆಗೊಂಡಿದ್ದಾರೆ.