'ಪಠಾಣ್' ಚಿತ್ರದ ಕೇಸರಿ ಬಣ್ಣ ವಿವಾದ: ಜಿಹಾದ್ ಶಾರೂಕ್ ನನ್ನು ಜೀವಂತ ಸುಡುತ್ತೇನೆ ಎಂದ ಅಯೋಧ್ಯೆಯ ಸ್ವಾಮೀಜಿ

ಪಠಾಣ್ ಚಿತ್ರದ ಬೇಷರಂ ರಂಗ್ ಹಾಡು ಬಿಡುಗಡೆಯಾದಾಗಿನಿಂದ ಶಾರೂಕ್ ಖಾನ್ ವಿರುದ್ಧ ವಿವಾದ ಬೆನ್ನತ್ತಿ ಹೋಗುತ್ತಲೇ ಇದೆ. ಶಾರೂಕ್ ಖಾನ್ ವಿರುದ್ಧ ಮುಸ್ಲಿಂ ಸಂಘಟನೆಗಳು ಸಹ ಅಪಸ್ವರ ಎತ್ತಿವೆ.
ಬೇಷರಂ ರಂಗ್ ಹಾಡಿನಲ್ಲಿ ಶಾರೂಕ್ ಖಾನ್-ದೀಪಿಕಾ ಪಡುಕೋಣೆ
ಬೇಷರಂ ರಂಗ್ ಹಾಡಿನಲ್ಲಿ ಶಾರೂಕ್ ಖಾನ್-ದೀಪಿಕಾ ಪಡುಕೋಣೆ

ಅಯೋಧ್ಯೆ: ಪಠಾಣ್ ಚಿತ್ರದ ಬೇಷರಂ ರಂಗ್ ಹಾಡು ಬಿಡುಗಡೆಯಾದಾಗಿನಿಂದ ಶಾರೂಕ್ ಖಾನ್ ವಿರುದ್ಧ ವಿವಾದ ಬೆನ್ನತ್ತಿ ಹೋಗುತ್ತಲೇ ಇದೆ. ಶಾರೂಕ್ ಖಾನ್ ವಿರುದ್ಧ ಮುಸ್ಲಿಂ ಸಂಘಟನೆಗಳು ಸಹ ಅಪಸ್ವರ ಎತ್ತಿವೆ.

ಶಾರುಖ್ ಖಾನ್ ಅವರನ್ನು ಭೇಟಿಯಾದರೆ ಅವರನ್ನು ಜೀವಂತವಾಗಿ ಸುಡುವ ಹಂತಕ್ಕೂ ಹೋಗುತ್ತೇನೆ ಎಂದು ತಪಸ್ವಿ ಚಾವ್ನಿಯ ಮಹಂತ್ ಪರಮಹಂಸ ಆಚಾರ್ಯ ಹೇಳಿದ್ದಾರೆ.

‘ಬೇಷರಂ ರಂಗ್’ ಹಾಡಿನಲ್ಲಿ ಕೇಸರಿ ಬಣ್ಣವನ್ನು ಅವಮಾನಿಸಲಾಗಿದೆ ಎಂದು ಪರಮಹಂಸ ಆಚಾರ್ಯ ಅವರ ಆಕ್ಷೇಪವಾಗಿದೆ. ಈ ಬಗ್ಗೆ ನಮ್ಮ ಸನಾತನ ಧರ್ಮದ ಜನರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ನಾವು ಶಾರುಖ್ ಖಾನ್ ಅವರ ಪೋಸ್ಟರ್ ನ್ನು ಸುಟ್ಟು ಹಾಕಿದ್ದೇವೆ. ನಾನು ಶಾರುಖ್ ಖಾನ್ ಅವರನ್ನು ಭೇಟಿಯಾದರೆ, ಜೀವಂತವಾಗಿ ಸುಡುತ್ತೇನೆ ಎಂದಿದ್ದಾರೆ.

‘ನಮ್ಮ ಸನಾತನ ಧರ್ಮದ ಜನರು ಈ ವಿಚಾರದ ಬಗ್ಗೆ ನಿರಂತರವಾಗಿ ಪ್ರತಿಭಟಿಸುತ್ತಿದ್ದಾರೆ. ಇಂದು ನಾವು ಶಾರುಖ್ ಖಾನ್ ಅವರ ಪೋಸ್ಟರ್ ಅನ್ನು ಸುಟ್ಟು ಹಾಕಿದ್ದೇವೆ. ಜಿಹಾದಿ ಶಾರುಖ್ ಖಾನ್ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕರೆ ನಾನು ಅವರನ್ನು ಜೀವಂತವಾಗಿ ಸುಡುತ್ತೇನೆ’ ಎಂದು ಪರಮಹಂಸ ಆಚಾರ್ಯ ಎಚ್ಚರಿಸಿದ್ದಾರೆ. ‘ಪಠಾಣ’ ಚಿತ್ರ ಥಿಯೇಟರ್‌ಗಳಲ್ಲಿ ಬಿಡುಗಡೆಯಾದರೆ ಬೆಂಕಿ ಹಚ್ಚುತ್ತೇನೆ ಎಂದು ಕೂಡ ಎಚ್ಚರಿಕೆ ನೀಡಿದ್ದಾರೆ. ‘ಪಠಾಣ್’ ಬಹಿಷ್ಕರಿಸುವಂತೆ ಅವರು ಜನರಿಗೆ ಮನವಿ ಮಾಡಿದರು.

‘ಪಠಾಣ್ ಚಿತ್ರ ಥಿಯೇಟರ್​ನಲ್ಲಿ ರಿಲೀಸ್ ಆದರೆ ನಾನು ಆ ಸಿನಿಮಾ ಮಂದಿರಕ್ಕೆ ಬೆಂಕಿ ಇಡುತ್ತೇನೆ’ ಎಂದು ಕೂಡ ಪರಮಹಂಸ ಆಚಾರ್ಯ ಹೇಳಿದ್ದಾರೆ. ಅವರ ಹೇಳಿಕೆಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ಸ್ವಾಮೀಜಿ ಆಗಿ ಈ ಮಾತನ್ನು ಅವರು ಹೇಳಬಾರದಿತ್ತು ಎನ್ನುವ ಅಭಿಪ್ರಾಯ ಕೆಲವರಿಂದ ವ್ಯಕ್ತವಾಗಿದೆ.

ಈ ಹಿಂದೆ ಹನುಮಾನ್ ಗರ್ಹಿಯ ಅರ್ಚಕ ಮಹಂತ್ ರಾಜು ದಾಸ್ ಕೂಡ ಚಿತ್ರದ ವಿರುದ್ಧ ಪ್ರತಿಭಟನೆ ನಡೆಸಿದ್ದರು.ರಾಜಕಾರಣಿಗಳು ಮತ್ತು ಬಲಪಂಥೀಯ ಬೆಂಬಲಿಗರು ಚಿತ್ರದ 'ಬೇಷರಂ ರಂಗ್' ಹಾಡಿನಲ್ಲಿ ಕೇಸರಿ ಬಣ್ಣದ ಬಟ್ಟೆಗಳನ್ನು ವಿರೋಧಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com