ನನಗೆ ಮಕ್ಕಳು ಬೇಕು, ಆದರೆ ತಾಯಿ ಬೇಡ - ಮಕ್ಕಳನ್ನು ನೋಡಿಕೊಳ್ಳಲು ನನ್ನ ಜೊತೆ ಇಡೀ ಹಳ್ಳಿಯಿದೆ: ಸಲ್ಮಾನ್ ಖಾನ್
'ನನಗೆ ಮಕ್ಕಳು ಬೇಕು, ಆದರೆ ಮಕ್ಕಳೊಂದಿಗೆ ತಾಯಿ ಕೂಡ ಬರ್ತಾರೆ. ನನಗೆ ತಾಯಿ ಬೇಡ, ಆದರೆ ಮಕ್ಕಳಿಗೆ ತಾಯಿ ಬೇಕು. ಅವರನ್ನು ನೋಡಿಕೊಳ್ಳಲು ನನ್ನ ಜೊತೆ ಇಡೀ ಹಳ್ಳಿಯಿದೆ.
Published: 27th December 2022 12:51 PM | Last Updated: 27th December 2022 12:51 PM | A+A A-

ಸಲ್ಮಾನ್ ಖಾನ್
ಬಾಲಿವುಡ್ ನಟ ಸಲ್ಮಾನ್ ಖಾನ್ 57ನೇ ವರ್ಷದ ಹುಟ್ಟುಹಬ್ಬದ ಆಚರಿಸಿಕೊಳ್ಳುತ್ತಿ್ದಾರೆ. ಈ ವೇಳೆ ಸಲ್ಮಾನ್ ಖಾನ್‌ಗೆ ಅಭಿಮಾನಿಗಳು, ಸಿನಿ ಗಣ್ಯರು ಪ್ರೀತಿಯ ಶುಭಾಶಯ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಲ್ಮಾನ್ ಖಾನ್ ಫೋಟೋ ಶೇರ್ ಮಾಡಿ ವಿಶ್ ಮಾಡಿ ಪ್ರೀತಿ ತೋರಿಸುತ್ತಿದ್ದಾರೆ.
ಗೆಳೆಯ ಸಲ್ಮಾನ್ ಅವರನ್ನು ಹಗ್ ಮಾಡಿ ಕೈ ಕೈ ಹಿಡಿದು ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಇಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅಭಿಮಾನಿಗಳು ಮೆಚ್ಚುಗೆಯ ಕಾಮೆಂಟ್ ಮಾಡುತ್ತಿದ್ದಾರೆ. ಸಲ್ಮಾನ್ ಖಾನ್ ಹುಟ್ಟುಹಬ್ಬದ ದಿನ ಅವರ ಹಳೇಯ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಸಲ್ಮಾನ್ ಖಾನ್ ಬಾಲಿವುಡ್‌ನ ಮೋಸ್ಟ್ ಎಲಿಜೆಬೆಲ್ ಬ್ಯಾಚುಲರ್. ಮದುವೆ ಬಗ್ಗೆ ಮಾತನಾಡದ ಸಲ್ಮಾನ್ ಖಾನ್ ಈ ಹಿಂದೆ ಮಕ್ಕಳ ಬಗ್ಗೆ ಮಾತನಾಡಿದ್ದ ಹೇಳಿಕೆ ಈಗ ಮತ್ತೆ ವೈರಲ್ ಆಗಿದೆ. ಮಕ್ಕಳು ಬೇಕು ಆದರೆ ಅವರ ತಾಯಿ ಬೇಡ ಎಂದು ಸಲ್ಮಾನ್ ಖಾನ್ ಒಮ್ಮೆ ಹೇಳಿದ್ದರು.
2019ರಲ್ಲಿ ಮುಂಬೈ ಮಿರರ್ ಜೊತೆ ಮಾತನಾಡಿದ ಸಲ್ಮಾನ್, ನಾನು ಮಕ್ಕಳನ್ನು ಪ್ರೀತಿಸುತ್ತೇನೆ ಎಂದು ಹೇಳಿದ್ದರು. 'ನನಗೆ ಮಕ್ಕಳು ಬೇಕು, ಆದರೆ ಮಕ್ಕಳೊಂದಿಗೆ ತಾಯಿ ಕೂಡ ಬರ್ತಾರೆ. ನನಗೆ ತಾಯಿ ಬೇಡ, ಆದರೆ ಮಕ್ಕಳಿಗೆ ತಾಯಿ ಬೇಕು. ಅವರನ್ನು ನೋಡಿಕೊಳ್ಳಲು ನನ್ನ ಜೊತೆ ಇಡೀ ಹಳ್ಳಿಯಿದೆ' ಎಂದು ಹೇಳಿದ್ದರು. ಸಲ್ಮಾನ್ ಖಾನ್ ಹಳೆಯ ಹೇಳಿಕೆ ಈಗ ಮತ್ತೆ ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.