'ಕಾಫಿ ವಿತ್ ಕರಣ್ ಸೀಸನ್ 7': ಆರಂಭ ದಿನ ಪ್ರಕಟಿಸಿದ ನಿರ್ದೇಶಕ ಕರಣ್ ಜೋಹರ್
ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರು ನಿರೂಪಿಸಿಕೊಂಡು ಬಂದಿರುವ ಸೆಲೆಬ್ರಿಟಿ ಚಾಟ್ ಶೋ "ಕಾಫಿ ವಿತ್ ಕರಣ್" ನ ಏಳನೇ ಆವೃತ್ತಿ ಜುಲೈ 7 ರಂದು ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಆರಂಭವಾಗಲಿದೆ.
Published: 19th June 2022 03:28 PM | Last Updated: 26th December 2022 02:43 PM | A+A A-

ಕಾಪಿ ವಿತ್ ಕರಣ್ ನಲ್ಲಿ ಕರಣ್ ಜೋಹರ್
ಮುಂಬೈ: ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರು ನಿರೂಪಿಸಿಕೊಂಡು ಬಂದಿರುವ ಸೆಲೆಬ್ರಿಟಿ ಚಾಟ್ ಶೋ "ಕಾಫಿ ವಿತ್ ಕರಣ್" ನ ಏಳನೇ ಆವೃತ್ತಿ ಜುಲೈ 7 ರಂದು ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಆರಂಭವಾಗಲಿದೆ.
ಯಾರು ಮತ್ತೆ ಬಂದಿದ್ದಾರೆ ನೋಡಿ, ವಿಭಿನ್ನ ಶೈಲಿಯೊಂದಿಗೆ ಮತ್ತೆ ಬರುತ್ತೇನೆ ಎಂದು ಟ್ವಿಟ್ಟರ್ ನಲ್ಲಿ ಕರಣ್ ಬರೆದುಕೊಂಡಿದ್ದಾರೆ. ಹಿಂದಿನ ಸೀಸನ್ ಗಳ ವಿಡಿಯೊವನ್ನು ಕೂಡ ಹಂಚಿಕೊಂಡಿದ್ದಾರೆ.
ಕಾಫಿ ವಿತ್ ಕರಣ್ ಶೋ 2004ರಲ್ಲಿ ಸ್ಟಾರ್ ವರ್ಲ್ಡ್ ಚಾನೆಲ್ ನಲ್ಲಿ ಮೊದಲ ಬಾರಿಗೆ ಪ್ರಸಾರಗೊಂಡಿತು. 2019 ರವರೆಗೆ ಸಣ್ಣ ಪರದೆಯಲ್ಲಿ ಆರು ಸೀಸನ್‌ಗಳಲ್ಲಿ ಮುಂದುವರಿಯಿತು, ಇನ್ನು ಕರಣ್ ಜೋಹರ್ ನಿರ್ದೇಶನದ "ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ" ಬರುವ ವರ್ಷ ಫೆಬ್ರವರಿ 10 ರಂದು ಬಿಡುಗಡೆ ಕಾಣಲಿದೆ. ಅವರ ಮುಂದಿನ ಚಿತ್ರ ಆಕ್ಷನ್ ಆಧಾರಿತವಾಗಿರುತ್ತದೆ.