'ನಿಮಗಿಂತ ರಿಚಾ ಚಡ್ಡಾ ಅವರೇ ಇಂದು ನಮ್ಮ ದೇಶಕ್ಕೆ ಹೆಚ್ಚು ಪ್ರಸ್ತುತ': ಅಕ್ಷಯ್ ಕುಮಾರ್‌ಗೆ ಪ್ರಕಾಶ್ ರಾಜ್ ಪ್ರತಿಕ್ರಿಯೆ

ಬಾಲಿವುಡ್ ನಟಿ ರಿಚಾ ಚಡ್ಡಾ ಅವರ 'ಗಲ್ವಾನ್ ಸೇಸ್ ಹಾಯ್' ಟ್ವೀಟ್ ಕುರಿತು ಅಕ್ಷಯ್ ಕುಮಾರ್ ಅವರ ಪ್ರತಿಕ್ರಿಯೆಗೆ ಬಹುಭಾಷಾ ನಟ ಪ್ರಕಾಶ್ ರಾಜ್ ಪ್ರತಿಕ್ರಿಯಿಸಿದ್ದಾರೆ, ಇದು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆ, ಟ್ರೋಲ್ ಗೆ ಕಾರಣವಾಗಿದೆ.
ಪ್ರಕಾಶ್ ರಾಜ್
ಪ್ರಕಾಶ್ ರಾಜ್

ಬಾಲಿವುಡ್ ನಟಿ ರಿಚಾ ಚಡ್ಡಾ ಅವರ 'ಗಲ್ವಾನ್ ಸೇಸ್ ಹಾಯ್' ಟ್ವೀಟ್ ಕುರಿತು ಅಕ್ಷಯ್ ಕುಮಾರ್ ಅವರ ಪ್ರತಿಕ್ರಿಯೆಗೆ ಬಹುಭಾಷಾ ನಟ ಪ್ರಕಾಶ್ ರಾಜ್ ಪ್ರತಿಕ್ರಿಯಿಸಿದ್ದಾರೆ, ಇದು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆ, ಟ್ರೋಲ್ ಗೆ ಕಾರಣವಾಗಿದೆ.

ಪಾಕಿಸ್ತಾನದಿಂದ ಆಕ್ರಮಿತ ಕಾಶ್ಮೀರದ ಕೆಲವು ಭಾಗಗಳನ್ನು ಹಿಂಪಡೆಯುವ ಯಾವುದೇ ಆದೇಶಕ್ಕೆ ಸೇನೆಯು 'ಸದಾ ಸಿದ್ಧವಾಗಿದೆ' ಮತ್ತು "ಪಾಕಿಸ್ತಾನಕ್ಕೆ ತಕ್ಕ ಉತ್ತರವನ್ನು ನೀಡುತ್ತದೆ" ಎಂಬ ಉತ್ತರ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರ ಹೇಳಿಕೆಗೆ ನಟಿ ರಿಚಾ ಚಡ್ಡಾ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿ, "ಗಾಲ್ವಾನ್ ಹಾಯ್ ಹೇಳುತ್ತಿದೆ, ಹೋಗಿ ಹೋರಾಡಿ ಎಂಬ ಅರ್ಥದಲ್ಲಿ ಟ್ವೀಟ್ ಮಾಡಿದ್ದರು. 

ಗಾಲ್ವಾನ್ ಕಣಿವೆಯ ಗಡಿಯಲ್ಲಿ ಭಾರತ ಮತ್ತು ಚೀನಾ ನಡುವಿನ 2020 ರ ಮಿಲಿಟರಿ ಘರ್ಷಣೆಯನ್ನು ಈ ಹೇಳಿಕೆ ಉಲ್ಲೇಖಿಸಿದೆ. ಟ್ವೀಟ್ ಮಾಡಿದ್ದೇ ತಡ ಕಟು ಟೀಕೆಗಳು ವ್ಯಕ್ತವಾದ ಕೂಡಲೇ ರಿಚಾ ಚಡ್ಡಾ ಟ್ವೀಟ್ ನ್ನು ಅಳಿಸಿಹಾಕಿದರು. ನಟಿ ವಿರುದ್ಧ ದೆಹಲಿ ಪೊಲೀಸರಿಗೆ ದೂರು ಕೂಡ ದಾಖಲಾಗಿತ್ತು.

ರಿಚಾ ಚಡ್ಡಾ ಅವರ ಟ್ವೀಟ್‌ನ ಸ್ಕ್ರೀನ್‌ಶಾಟ್ ನ್ನು ಪೋಸ್ಟ್ ಮಾಡಿದ್ದ ನಟ ಅಕ್ಷಯ್ ಕುಮಾರ್, ಇಂತಹ ಹೇಳಿಕೆಗಳು, ಮಾತು-ಬರಹಗಳು ಮನಸ್ಸಿಗೆ ತುಂಬಾ ನೋವುಂಟುಮಾಡುತ್ತದೆ. ಭಾರತೀಯ ಸೇನೆ, ಸೈನಿಕರಿಗೆ ನಾವು ಯಾವತ್ತೂ ಕೃತಜ್ಞರಾಗಿರಬಾರದು. ವೋ ಹೈ ತೋ ಆಜ್ ಹಮ್ ಹೇ ಎಂದು ಟ್ವೀಟ್ ಮಾಡಿದ್ದರು. 

ಅಕ್ಷಯ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ನಟ ಪ್ರಕಾಶ್ ರಾಜ್, ಅಕ್ಷಯ್ ಕುಮಾರ್ ಗಿಂತ ರಿಚಾ ಇಂದು ಹೆಚ್ಚು ಪ್ರಸ್ತುತವಾಗುತ್ತಾರೆ, ನಿಮ್ಮಿಂದ ಇದನ್ನು ನಿರೀಕ್ಷಿಸಿರಲಿಲ್ಲ, ನಿಮಗಿಂತ ರಿಚಾರೇ ಇಂದು ನಮ್ಮ ದೇಶಕ್ಕೆ ಹೆಚ್ಚು ಪ್ರಸ್ತುತವಾಗುತ್ತಾರೆ ಎಂದು ಟ್ವೀಟ್ ಮಾಡಿದ್ದರು.  

ಈ ಹಿಂದೆ ನಟರಾದ ಅನುಪಮ್ ಖೇರ್ ಮತ್ತು ಕೇ ಕೇ ಮೆನನ್ ಕೂಡ ರಿಚಾ ಟ್ವೀಟ್‌ಗೆ ಟೀಕೆ ಮಾಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com