'ರಿಷಬ್ ಶೆಟ್ಟಿ ಎಂಬ ದೈವಕ್ಕೆ ಧನ್ಯವಾದಗಳು': ಕೋಟಿಗಟ್ಟಲೆ ಹಣ ಸುರಿದು ಚಿತ್ರ ನಿರ್ಮಿಸುವವರಿಗೆ 'ಕಾಂತಾರ' ವೀಕ್ಷಿಸಿ ರಾಮ್ ಗೋಪಾಲ್ ವರ್ಮ ಹೇಳಿದ್ದೇನು?

ಸಿನಿಮಾಗಳ ಬಗ್ಗೆ, ಸಮಾಜದ ಆಗುಹೋಗುಗಳ ಬಗ್ಗೆ ವಿಲಕ್ಷಣವಾಗಿ, ವಿಚಿತ್ರವಾಗಿ, ಹಲವು ಬಾರಿ ವಿವಾದಾತ್ಮಕವಾಗಿ ಟ್ವೀಟ್ ಮಾಡಿ ಸುದ್ದಿಯಾಗುತ್ತಾರೆ ನಿರ್ದೇಶಕ ರಾಮ್ ಗೋಪಾಲ್ ವರ್ಮ. 
ಕಾಂತಾರ ಚಿತ್ರದ ಪೋಸ್ಟರ್
ಕಾಂತಾರ ಚಿತ್ರದ ಪೋಸ್ಟರ್

ಮುಂಬೈ: ಸಿನಿಮಾಗಳ ಬಗ್ಗೆ, ಸಮಾಜದ ಆಗುಹೋಗುಗಳ ಬಗ್ಗೆ ವಿಲಕ್ಷಣವಾಗಿ, ವಿಚಿತ್ರವಾಗಿ, ಹಲವು ಬಾರಿ ವಿವಾದಾತ್ಮಕವಾಗಿ ಟ್ವೀಟ್ ಮಾಡಿ ಸುದ್ದಿಯಾಗುತ್ತಾರೆ ನಿರ್ದೇಶಕ ರಾಮ್ ಗೋಪಾಲ್ ವರ್ಮ. 

ಈಗ ಎಲ್ಲಿ ನೋಡಿದರಲ್ಲಿ ಅಪ್ಪಟ ಕನ್ನಡದಲ್ಲಿ ತೆರೆಕಂಡು ನಂತರ ಪ್ಯಾನ್ ಇಂಡಿಯಾದಲ್ಲಿ ಡಬ್ ಆಗಿ ಅಲ್ಲಿ ಕೂಡ ಜನಪ್ರಿಯತೆ ಕಂಡು ಭರ್ಜರಿ ಪ್ರದರ್ಶನ ನೀಡಿ ಯಶಸ್ಸಿನಲ್ಲಿ ಬೀಗುತ್ತಿರುವ ಕರಾವಳಿ ಮೂಲದ ಕಥೆ ಕಾಂತಾರ ಚಿತ್ರದ್ದೇ(Kantara movie) ಸದ್ದು, ಸುದ್ದಿ. ಈ ಚಿತ್ರವನ್ನು ಜನಸಾಮಾನ್ಯರು ಮಾತ್ರವಲ್ಲದೆ ಭಾಷೆ, ಗಡಿಯನ್ನು ಮೀರಿ ಸಿನಿಮಾ ಕಲಾವಿದರು, ನಿರ್ದೇಶಕರು ನೋಡಿ ಮೆಚ್ಚಿದ್ದಾರೆ. ನಾಲ್ಕು ಮೆಚ್ಚುಗೆಯ ನುಡಿಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಚಿತ್ರವನ್ನು ವೀಕ್ಷಿಸಿದ ನಿರ್ದೇಶಕ ರಾಮ್ ಗೋಪಾಲ್ ವರ್ಮ, ಚಿತ್ರರಂಗದ ನಿರ್ದೇಶಕರು, ನಿರ್ಮಾಪಕರುಗಳ ಮುಖಕ್ಕೆ ಹೊಡೆಯುವಂತೆ ಬರೆದಿದ್ದಾರೆ ಎಂದರೆ ತಪ್ಪಾಗಲಾರದು. ಆರಂಭದಲ್ಲಿ ಡೆವಿಲ್ , ಭೂತ ಎಂದೇ ಆರಂಭಿಸಿದ ವರ್ಮ ರಿಷಬ್ ಶೆಟ್ಟಿ ಎಂಬ ಭೂತಕ್ಕೆ ಧನ್ಯವಾದಗಳು, ಕಾಂತಾರದಲ್ಲಿ ಶಿವ ಗುಳಿಗ ದೈವದ ಸ್ವಪ್ನದಿಂದ ಬೆಚ್ಚಿ ಎಚ್ಚರಗೊಂಡು ಎದ್ದು ಕುಳಿತುಕೊಳ್ಳುವಂತೆ ಎಲ್ಲಾ ದೊಡ್ಡ ದೊಡ್ಡ ಬಜೆಟ್ ಹಾಕಿ ಚಿತ್ರ ತೆಗೆಯುವ ನಿರ್ಮಾಪಕರು, ನಿರ್ದೇಶಕರು ಕಾಂತಾರ ಚಿತ್ರ ಗಳಿಕೆಯಿಂದ ರಾತ್ರಿ ಕೆಟ್ಟ ಕನಸು ಕಂಡು ಎಚ್ಚರಗೊಂಡು ಬೆಚ್ಚಿಬೀಳುವುದು ಖಂಡಿತ. 

ಈಗ ಚಿತ್ರರಂಗದಲ್ಲಿ ರಿಷಬ್ ಶೆಟ್ಟಿಯವರು ಶಿವನನ್ನು ಗುಳಿಗ ದೈವದಿಂದ ಗುಣಿಸಿದಾಗ ಮತ್ತು ವಿಲನ್ ಗಳು ಯಾರೆಂದರೆ 300 ಕೋಟಿ, 400 ಕೋಟಿ, 500 ಕೋಟಿ ಬಜೆಟ್ ಹಾಕಿ ಚಿತ್ರ ತಯಾರಿಸುವ ನಿರ್ಮಾಪಕರು ಕಾಂತಾರ ಚಿತ್ರದ ಗಳಿಕೆಯನ್ನು ನೋಡಿ ಹಾರ್ಟ್ ಅಟ್ಯಾಕ್ ಆಗೋದಂತೂ ಗ್ಯಾರಂಟಿ. 

ಮೆಗಾ ಬಜೆಟ್ ಚಿತ್ರಗಳು ಮಾತ್ರ ಜನರನ್ನು ಥಿಯೇಟರ್ ಗಳತ್ತ ಸೆಳೆಯುತ್ತದೆ ಎಂಬ ನಂಬಿಕೆಯನ್ನು ರಿಷಬ್ ಶೆಟ್ಟಿಯವರು ಹುಸಿಗೊಳಿಸಿದ್ದಾರೆ. ಕಾಂತಾರ ಚಿತ್ರ ಮುಂದಿನ ಹಲವು ದಶಕಗಳಿಗೆ ಚಿತ್ರರಂಗದವರಿಗೆ ಒಂದು ಪಾಠ ಎಂದು ವರ್ಮ ಬರೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com