'ದೇವಿ' ಹುಟ್ಟಿದಾಗ ಇದ್ದ ಖುಷಿ, ಮುಂದಿನ 2 ದಿನಗಳಲ್ಲಿ ಇರಲಿಲ್ಲ: 3 ತಿಂಗಳ ಮಗುವಿಗೆ ಸರ್ಜರಿಯಾಯ್ತ; ಬಿಪಾಶಾ ಬಸು

ಮಗು ಬಂದ ಹಿನ್ನೆಲೆಯಲ್ಲಿ ಅವರ ಇಡೀ ಕುಟುಂಬ, ಆಪ್ತ ವಲಯ ಸಂಭ್ರಮದಲ್ಲಿ ಮುಳುಗಿತ್ತು. ಆದರೆ, ಬಿಪಾಶಾ ಮತ್ತು ಕರಣ್‌ ಮಾತ್ರ ನೋವಿನಲ್ಲಿದ್ದರು. ಮಗು ಹುಟ್ಟಿದಾಗ ಇದ್ದ ಖುಷಿ, ಮುಂದಿನ ಎರಡು ದಿನಗಳಿಗೆ ಇರಲಿಲ್ಲ.
ಪತಿ ಮತ್ತು ಮಗಳೊಂದಿಗೆ ಬಿಪಾಶಾ ಬಸು
ಪತಿ ಮತ್ತು ಮಗಳೊಂದಿಗೆ ಬಿಪಾಶಾ ಬಸು

ಬಾಲಿವುಡ್‌ ನಟಿ ಬಿಪಾಶಾ ಬಸು ಮತ್ತು ಪತಿ ಕರಣ್‌ ಸಿಂಗ್‌ ಗ್ರೋವರ್‌ ಕಳೆದ ವರ್ಷದ ನವೆಂಬರ್‌ 12ರಂದು ಮಗಳನ್ನು ಬರಮಾಡಿಕೊಂಡರು. ಆ ಮುದ್ದು ಮಗಳಿಗೆ ದೇವಿ ಎಂದೂ ನಾಮಕರಣ ಮಾಡಿದ್ದಾರೆ.

ಮಗು ಬಂದ ಹಿನ್ನೆಲೆಯಲ್ಲಿ ಅವರ ಇಡೀ ಕುಟುಂಬ, ಆಪ್ತ ವಲಯ ಸಂಭ್ರಮದಲ್ಲಿ ಮುಳುಗಿತ್ತು. ಆದರೆ, ಬಿಪಾಶಾ ಮತ್ತು ಕರಣ್‌ ಮಾತ್ರ ನೋವಿನಲ್ಲಿದ್ದರು. ಮಗು ಹುಟ್ಟಿದಾಗ ಇದ್ದ ಖುಷಿ, ಮುಂದಿನ ಎರಡು ದಿನಗಳಿಗೆ ಇರಲಿಲ್ಲ. ನನ್ನ ಮಗಳು ದೇವಿಗೆ ಆಗಲೇ ಹೃದಯದಲ್ಲಿ ಎರಡು ರಂಧ್ರಗಳಿದ್ದವು. ನಮ್ಮ ಆ ನೋವು ಯಾವ ಪೋಷಕರಿಗೂ ಬರುವುದು ಬೇಡ. ಎಂದು ಸೋಷಿಯಲ್‌ ಮೀಡಿಯಾದಲ್ಲಿ ಅಂದಿನ ಸ್ಥಿತಿಯನ್ನು ನಟಿ ಬಿಪಾಶಾ ಬಸು ವಿವರಿಸಿದ್ದಾರೆ.

ಪುಟಾಣಿ ದೇವಿ ಇದೀಗ 9 ತಿಂಗಳ ಮಗು. ಇದೇ ದೇವಿ ಹುಟ್ಟಿದ ಮೂರು ದಿನದವಳಿದ್ದಾಗ, ಮಗುವಿನ  ಹೃದಯದಲ್ಲಿ ಎರಡು ರಂಧ್ರಗಳಿರುವುದು ಪತ್ತೆಯಾಗಿತ್ತು. ಹಿರಿ ಹಿರಿ ಹಿಗ್ಗಿದ್ದ ಈ ಕುಟುಂಬ ಧುತ್ತೆಂದು ಕುಸಿದು ಬಿದ್ದಿತ್ತು. ಇದೀಗ ಅಂದಿನ ಈ ವಿಚಾರವನ್ನು ತಾಯಿ ಬಿಪಾಶಾ ಬಸು ಇನ್‌ಸ್ಟಾಗ್ರಾಂನಲ್ಲಿ ಲೈವ್‌ ಬಂದು ಹೇಳಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ನಮ್ಮ ಈ ಪ್ರಯಾಣವು ಸಾಮಾನ್ಯ ಪೋಷಕರಂತೆ ಇರಲಿಲ್ಲ ತುಂಬ ವಿಭಿನ್ನವಾಗಿತ್ತು. ಈ ರೀತಿ ಸಂಕಷ್ಟ ಯಾವ ತಾಯಿಗೂ ಬರಬಾರದು. ಹುಟ್ಟಿದ ಮೂರನೇ ದಿನ ನಮ್ಮ ಮಗುವಿನ ಹೃದಯದಲ್ಲಿ ಎರಡು ರಂಧ್ರಗಳಿವೆ ಎಂದು ನನಗೆ ತಿಳಿಯಿತು. ಆವತ್ತು ಈ ವಿಚಾರವನ್ನು ನಾನು ಹೇಳಿಕೊಳ್ಳಬಾರದು ಎಂದೇ ಭಾವಿಸಿದ್ದೆ. ಆದರೆ, ಅದು ಸಾಧ್ಯವಾಗಲಿಲ್ಲ. ಆದರೆ ಈ ರೀತಿ ನೋವು ಅನುಭವಿಸಿದ ಸಾಕಷ್ಟು ತಾಯಂದಿರು ಇರುತ್ತಾರೆ ಎಂದು ನಾನು ಭಾವಿಸಿದ್ದೇನೆ"

"ಆರಂಭದಲ್ಲಿ ನಮಗೆ ಈ ವಿಎಸ್‌ಡಿ (VSD - ventricular septal defect) ಎಂದರೇನು ಎಂದು ನಮಗೆ ಅರ್ಥವಾಗಲಿಲ್ಲ. ಆದರೆ, ಈ ವಿಚಾರವನ್ನು ನಾವು ನಮ್ಮ ಕುಟುಂಬದ ಜತೆಗೆ ಶೇರ್‌ ಮಾಡಲಿಲ್ಲ. ನಾವಿಬ್ಬರೂ ಕೊಂಚ ಶಾಕ್‌ನಲ್ಲಿಯೇ ಇದ್ದೆವು, ಚಿಕಿತ್ಸೆಯೂ ಮುಂದುವರಿಯಿತು. ಮೊದಲ ಐದು ತಿಂಗಳು ನಾವು ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ" ಎಂದಿದ್ದಾರೆ.

ಇಷ್ಟು ಚಿಕ್ಕ ಮಗುವನ್ನು ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಪಡಿಸುವುದು ಹೇಗೆ ಎಂದು ನಮಗೆ ತುಂಬಾ ದುಃಖ, ಭಾರ ಮತ್ತು ಅಸಮಾಧಾನವಿದೆ ಎಂದು ಬಿಪಾಶಾ ಬಸು ಹೇಳಿದ್ದಾರೆ. ಅದು ತಾನಾಗಿಯೇ ಗುಣವಾಗುತ್ತದೆ ಎಂದು ನಾವು ಭಾವಿಸುತ್ತಿದ್ದೆವು. ಮೊದಲ ಸಲ ಸ್ಕ್ಯಾನ್ ಮಾಡಲು ಹೋದಾಗ ಆಗಲಿಲ್ಲ, ಎರಡನೇ ಸಲ ಹೋದಾಗಲೂ ಆಗಲಿಲ್ಲ. ಮೂರನೇ ತಿಂಗಳಲ್ಲಿ, ನಾನು ಸಾಕಷ್ಟು ಸಂಶೋಧನೆ ಮಾಡಿದ್ದೇನೆ. ಶಸ್ತ್ರಚಿಕಿತ್ಸಕರು, ವೈದ್ಯರು ಮತ್ತು ಆಸ್ಪತ್ರೆಗಳೊಂದಿಗೆ ಮಾತನಾಡಿದೆ. ಪತಿ ಕರಣ್ ಸಿಂಗ್ ಗ್ರೋವರ್ ಶಸ್ತ್ರ ಚಿಕಿತ್ಸೆಗೆ ಸಿದ್ಧರಿಲ್ಲ ಆದರೆ ಮಗಳನ್ನು ಗುಣಪಡಿಸಲೇಬೇಕು ಎಂದು ನಿರ್ಧರಿಸಿದ್ದರು ಎಂದು ಬಿಪಾಶಾ ಹೇಳಿದ್ದಾರೆ.

ಮೂರು ತಿಂಗಳ ಮಗುವಿನ ಓಪನ್‌ ಹಾರ್ಟ್‌ ಶಸ್ತ್ರಚಿಕಿತ್ಸೆ ಹೇಗೆ ಮಾಡಲು ಸಾಧ್ಯ? ಕೊಂಚ ಭಯವಾಯಿತು. ಆದರೂ ಸುದೀರ್ಘ ಆರು ಗಂಟೆಗಳ ಕಾಲ ಚಿಕಿತ್ಸೆ ನಡೆಯಿತು. ದೇವಿ ಆಪರೇಷನ್‌ ಥಿಯೇಟರ್‌ನ ಒಳಗಿದ್ದಾಗ ನಮ್ಮಿಬ್ಬರ ಕೈಕಾಲು ಆಡುತ್ತಿರಲಿಲ್ಲ. ಆಪರೇಷನ್‌ ಯಶಸ್ವಿಯಾದಾಗ ಇಬ್ಬರಿಗೂ ಸಮಾಧಾನವಾಯಿತು. ಈಗ ದೇವಿ ಚೆನ್ನಾಗಿದ್ದಾಳೆ. ಸಾಮಾನ್ಯ ಮಗುವಿನಂತೆ ಆರೋಗ್ಯವಾಗಿದ್ದಾಳೆ" ಎಂದು ಹೇಳಿಕೊಂಡಿದ್ದಾರೆ ಬಿಪಾಶಾ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com