ಎರಡು ವರ್ಷಗಳ ವಿರಾಮ ನಂತರ ಇಂದಿರಾ ಗಾಂಧಿ ಪಾತ್ರಕ್ಕಾಗಿ ಕಂಗನಾ ಹೇಗೆ ವರ್ಕೌಟ್ ಮಾಡ್ತಾರೆ ನೋಡಿ...

ವಿವಾದಾತ್ಮಕ ಹೇಳಿಕೆಗಳು, ಚಿತ್ರಗಳಲ್ಲಿನ ನಟನೆ, ಪ್ರೊಡಕ್ಷನ್ ಗೆ ಸಂಬಂಧಪಟ್ಟಂತೆ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ತಮ್ಮ ಮುಂಬರುವ ಬಹು ನಿರೀಕ್ಷಿತ ಚಿತ್ರ 'ಎಮರ್ಜೆನ್ಸಿ' ಯ ಪೋಸ್ಟ್-ಪ್ರೊಡಕ್ಷನ್‌ನಲ್ಲಿ ನಿರತರಾಗಿದ್ದಾರೆ.
ಕಂಗನಾ ರಾನಾವತ್
ಕಂಗನಾ ರಾನಾವತ್
Updated on

ಮುಂಬೈ: ವಿವಾದಾತ್ಮಕ ಹೇಳಿಕೆಗಳು, ಚಿತ್ರಗಳಲ್ಲಿನ ನಟನೆ, ಪ್ರೊಡಕ್ಷನ್ ಗೆ ಸಂಬಂಧಪಟ್ಟಂತೆ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ತಮ್ಮ ಮುಂಬರುವ ಬಹು ನಿರೀಕ್ಷಿತ ಚಿತ್ರ 'ಎಮರ್ಜೆನ್ಸಿ' ಯ ಪೋಸ್ಟ್-ಪ್ರೊಡಕ್ಷನ್‌ನಲ್ಲಿ ನಿರತರಾಗಿದ್ದಾರೆ.

ಯಾವುದೇ ಚಿತ್ರವಾದರೂ ನಟನೆಗೆ 100 ಪರ್ಸೆಂಟ್ ಬದ್ಧತೆ ತೋರಿಸುವ ನಟಿ ಕಂಗನಾ ಇಂದಿರಾ ಗಾಂಧಿ ವ್ಯಕ್ತಿತ್ವದ ಪಾತ್ರಕ್ಕೆ 2 ವರ್ಷಗಳ ಸಮಯ ಮೀಸಲಿರಿಸಿದ್ದರು. ಇದೀಗ ಮುಂದಿನ ಚಿತ್ರಕ್ಕೆ ಅವರು ಸಜ್ಜಾಗುತ್ತಿದ್ದು ಬರೋಬ್ಬರಿ ಎರಡು ವರ್ಷಗಳ ನಂತರ ಫಿಟ್ ನೆಸ್, ವ್ಯಾಯಾಮದ ದಿನಚರಿಗೆ ಮರಳಿದ್ದಾರಂತೆ. 

ಈ ಬಗ್ಗೆ ಅವರೇ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಸೆಲೆಬ್ರಿಟಿಗಳ ಬದುಕು ಎಂದರೆ ಸಾಮಾನ್ಯರಂತಲ್ಲ. ಸದಾ ಫಿಟ್ನೆಸ್ ಗೆ ಗಮನ ನೀಡುತ್ತಿರಬೇಕು. ಅದೇ ರೀತಿ ಕಂಗನಾ ಕೂಡ ದೇಹದಾರ್ಢ್ಯಕ್ಕೆ ಮರಳಿದ್ದಾರೆ. 

ತನ್ನ ತಾಲೀಮು ಅವಧಿಯ ವೀಡಿಯೊವನ್ನು ನಟಿ ಹಂಚಿಕೊಂಡಿದ್ದು ಅದರಲ್ಲಿ ಅವರು ಜಂಪಿಂಗ್ ಜ್ಯಾಕ್‌ಗಳು, ಮೌಂಟೇನ್ ಕ್ಲೈಂಬಿಂಗ್, ರೋಪ್ ಸ್ಕಿಪ್ಪಿಂಗ್ ಮತ್ತು ಸ್ಪಾಟ್ ಜಾಗಿಂಗ್‌ನಂತಹ ಕ್ರಿಯಾಶೀಲ ವ್ಯಾಯಾಮವನ್ನು ಮಾಡುತ್ತಿದ್ದಾರೆ. 

ಎರಡು ವರ್ಷಗಳ ನಂತರ ಶ್ರೀಮತಿ ಇಂದಿರಾ ಗಾಂಧಿ ಪಾತ್ರಕ್ಕೆ ವಿರಾಮ ಹೇಳುತ್ತಿದ್ದೇನೆ. ಈಗ ನಾನು ನನ್ನ ಫಿಟ್‌ನೆಸ್ ದಿನಚರಿಗೆ ಮರಳಿದ್ದೇನೆ, ಮುಂಬರುವ ಆಕ್ಷನ್ ಚಿತ್ರಕ್ಕಾಗಿ ದೇಹದ ರೂಪಾಂತರದಲ್ಲಿ ತೊಡಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

'ಎಮರ್ಜೆನ್ಸಿ' ಕಂಗನಾಗೆ ನಿರ್ದೇಶಕಿಯಾಗಿ ಎರಡನೇ ಚಿತ್ರವಾಗಿದೆ. ಇದರಲ್ಲಿ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಚಹರೆಯನ್ನೇ ಹೋಲುತ್ತಿದ್ದಾರೆ. 

'ತೇಜಸ್', 'ಚಂದ್ರಮುಖಿ 2', 'ಮಣಿಕರ್ಣಿಕಾ ರಿಟರ್ನ್ಸ್: ದಿ ಲೆಜೆಂಡ್ ಆಫ್ ದಿಡ್ಡಾ' ಮತ್ತು 'ದಿ ಇನ್ಕಾರ್ನೇಷನ್: ಸೀತಾ' ನಂತಹ ಚಿತ್ರಗಳ ಬಿಡುಗಡೆಗೆ ಕಾಯುತ್ತಿದ್ದಾರೆ. ನವಾಜುದ್ದೀನ್ ಸಿದ್ದಿಕಿ ಅಭಿನಯದ 'ಟಿಕು ವೆಡ್ಸ್ ಶೇರು' ಬಿಡುಗಡೆ ಸಹ ಹೊಂದಿದ್ದು, ಅದರ ನಿರ್ಮಾಪಕಿಯಾಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com