ಅನುಷ್ಕಾ ಶರ್ಮ
ಅನುಷ್ಕಾ ಶರ್ಮ

ತೆರಿಗೆ ಬಾಕಿ ಪಾವತಿ: ಅನುಷ್ಕಾ ಶರ್ಮಗೆ ರಿಲೀಫ್ ಇಲ್ಲ; ಅರ್ಜಿ ವಜಾಗೊಳಿಸಿದ ಬಾಂಬೆ ಹೈಕೋರ್ಟ್!

ಮಹಾರಾಷ್ಟ್ರ ಮೌಲ್ಯವರ್ಧಿತ ತೆರಿಗೆ ಕಾಯ್ದೆಯಡಿ 2012 ರಿಂದ 2016ರವರೆಗಿನ ಬಾಕಿ ತೆರಿಗೆಯನ್ನು ಪಾವತಿಸುವಂತೆ ರಾಜ್ಯ ಮಾರಾಟ ತೆರಿಗೆ ಇಲಾಖೆ ನೀಡಿರುವ ಆದೇಶ ವಿರುದ್ಧ ಬಾಲಿವುಡ್ ನಟಿ ಅನುಷ್ಕಾ ಶರ್ಮ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ.
Published on

ಮುಂಬೈ: ಮಹಾರಾಷ್ಟ್ರ ಮೌಲ್ಯವರ್ಧಿತ ತೆರಿಗೆ ಕಾಯ್ದೆಯಡಿ 2012 ರಿಂದ 2016ರವರೆಗಿನ ಬಾಕಿ ತೆರಿಗೆಯನ್ನು ಪಾವತಿಸುವಂತೆ ರಾಜ್ಯ ಮಾರಾಟ ತೆರಿಗೆ ಇಲಾಖೆ ನೀಡಿರುವ ಆದೇಶ ವಿರುದ್ಧ ಬಾಲಿವುಡ್ ನಟಿ ಅನುಷ್ಕಾ ಶರ್ಮ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ. ಈ ಪ್ರಕರಣದಲ್ಲಿ ಅನುಷ್ಕಾ ಅವರಿಗೆ ವಿನಾಯಿತಿ ನೀಡಲೂ ಹೈಕೋರ್ಟ್ ನಿರಾಕರಿಸಿತು.

ತೆರಿಗೆ ಇಲಾಖೆಯ ಆದೇಶದ ವಿರುದ್ಧ ಅರ್ಜಿ ಸಲ್ಲಿಸಲು ಅನುಷ್ಕಾ ಅವರಿಗೆ ಎಂವಿಎಟಿ ಅಡಿ ಬದಲಿ ಮಾರ್ಗವಿದೆ ಎಂದು ನ್ಯಾಯಮೂರ್ತಿಗಳಾದ ನಿತಿನ್ ಜಾಮ್ದಾರ್ ಮತ್ತು ಅಭಯ್ ಅಹುಜಾ ಅವರಿದ್ದ ಪೀಠ ಹೇಳಿತು. ಎಂವಿಎಟಿ ಅಡಿ ಮಾರಾಟ ತೆರಿಗೆಯ ಉಪ ಆಯುಕ್ತರಿಗೆ ನಾಲ್ಕು ವಾರಗಳ ಒಳಗೆ ಅರ್ಜಿ ಸಲ್ಲಿಸಲು ಕೋರ್ಟ್ ಅನುಷ್ಕಾಗೆ ಸೂಚನೆ ನೀಡಿತು. ಇದಕ್ಕಾಗಿ ಇಲಾಖೆ ವಿಧಿಸಿರುವ ತೆರಿಗೆ ಮೊತ್ತದಲ್ಲಿ ಶೇ.10 ರಷ್ಟು ಠೇವಣಿ ಇಡಬೇಕಾಗುತ್ತದೆ ಎಂದು ಹೇಳಿತು.

ಅನುಷ್ಕಾ ಅವರು ನಡೆಸಿಕೊಡುವ ಕಾರ್ಯಕ್ರಮಗಳು, ನೃತ್ಯ ಪ್ರದರ್ಶನಗಳ ಕೃತಿಸ್ವಾಮದ ಮೊದಲ ಮಾಲೀಕರು ಅವರೇ ಆಗಿರುವುದರಿಂದ ಈ ಪ್ರದರ್ಶನಗಳಿಂದ ಪಡೆಯುವ ಆದಾಯಕ್ಕೆ ಅವರು ತೆರಿಗೆ ಕಟ್ಟಬೇಕಾಗುತ್ತದೆ ಎಂದು ಇಲಾಖೆ ಹೇಳಿತ್ತು. ಈ ಕುರಿತು 2021-22ರ ಅವಧಿಯಲ್ಲಿ ಅನುಷ್ಕಾ ಅವರಿಗೆ ಬಾಕಿ ಪಾವತಿಸುವಂತೆ ಆದೇಶ ನೀಡಿತ್ತು.

ಇಲಾಖೆ ಪ್ರಕಾರ, 2012-13ರ ಅವಧಿಯಲ್ಲಿ ಅವರ ಆದಾಯವನ್ನು 12.3 ಕೋಟಿ ರೂ ಎಂದು ಪರಿಗಣಿಸಲಾಗಿದೆ. ಈ ಮೊತ್ತದ ತೆರಿಗೆಯು ಬಡ್ಡಿ ಸೇರಿ ರೂ. 1.2 ಕೋಟಿ. 2013-14ರ ಅವಧಿಯ ತೆರಿಗೆ ರೂ. 1.6 ಕೋಟಿ ಎನ್ನಲಾಗಿದೆ. ಮಾರಾಟ ತೆರಿಗೆ ಇಲಾಖೆಯು 2021 ಮತ್ತು 2022 ರ ನಡುವೆ ಆದೇಶಗಳನ್ನು ಜಾರಿಗೊಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com