‘ಕಾಸ್ಟ್ಯೂಮ್​ ಗುಲಾಮರು’ ಎಂಬ ಪದ ಕೇಳಿದ್ದೀರಾ? ಐಶ್ವರ್ಯಾ ರೈ ಫೋಟೋ ಶೇರ್ ಮಾಡಿ ಅಗ್ನಿಹೋತ್ರಿ ಅಸಮಾಧಾನ!

ಖ್ಯಾತ ನಟಿ ಐಶ್ವರ್ಯಾ ರೈ ಬಚ್ಚನ್ ಅವರು 2023ರ ಕ್ಯಾನೆ ​ ಚಿತ್ರೋತ್ಸವಲ್ಲಿ ಪಾಲ್ಗೊಂಡಿದ್ದಾರೆ. ಮೇ 16ರಿಂದ ಮೇ 27ರವರೆಗೆ ನಡೆಯುವ ಈ ಸಿನಿಮೋತ್ಸವದಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗವಹಿಸುತ್ತಿದ್ದಾರೆ
ಕ್ಯಾನೆ ಉತ್ಸವದಲ್ಲಿ ಐಶ್ವರ್ಯಾ ರೈ
ಕ್ಯಾನೆ ಉತ್ಸವದಲ್ಲಿ ಐಶ್ವರ್ಯಾ ರೈ
Updated on

ಖ್ಯಾತ ನಟಿ ಐಶ್ವರ್ಯಾ ರೈ ಬಚ್ಚನ್ ಅವರು 2023ರ ಕ್ಯಾನೆ ಚಿತ್ರೋತ್ಸವಲ್ಲಿ ಪಾಲ್ಗೊಂಡಿದ್ದಾರೆ. ಮೇ 16ರಿಂದ ಮೇ 27ರವರೆಗೆ ನಡೆಯುವ ಈ ಸಿನಿಮೋತ್ಸವದಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗವಹಿಸುತ್ತಿದ್ದಾರೆ. ಇದರಲ್ಲಿನ ರೆಡ್​ ಕಾರ್ಪೆಟ್​ ಪ್ರಮುಖ ಆಕರ್ಷಣೆ. ವಿವಿಧ ದೇಶದ ಸೆಲೆಬ್ರಿಟಿಗಳು ಬಣ್ಣ ಬಣ್ಣದ ಉಡುಗೆ ಧರಿಸಿ ರೆಡ್​ ಕಾರ್ಪೆಟ್​ ಮೇಲೆ ಹೆಜ್ಜೆ ಹಾಕುತ್ತಾರೆ. ಅದೇ ರೀತಿ ಐಶ್ವರ್ಯಾ ರೈ ಬಚ್ಚನ್​ ಕೂಡ ತಮ್ಮಿಷ್ಟದ ಕಾಸ್ಟ್ಯೂಮ್​ ಧರಿಸಿ ಪೋಸ್​ ನೀಡಿದ್ದಾರೆ.

ಐಶ್ವರ್ಯಾ ಕಾಸ್ಟ್ಯೂಮ್ ಸಹಾಯಕರಿಗೆ 'ಗುಲಾಮರು' ಎಂದು ಅಗ್ನಿಹೋತ್ರಿ ಕಿಡಿ ಕಾರಿದ್ದಾರೆ. ನಿರ್ದೇಶಕರ ವಿರುದ್ಧ ಫ್ಯಾನ್ಸ್ ಗರಂ ಆಗಿದ್ದಾರೆ.  ಬಾಲಿವುಡ್ ಸ್ಟಾರ್ ನಟಿ, ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಸದ್ಯ ಕ್ಯಾನೆ ಫಿಲ್ಮ್ ಫೆಸ್ಟಿವಲ್‌ನಲ್ಲಿದ್ದಾರೆ. ಐಶ್ವರ್ಯಾ ಪ್ರತಿ ಬಾರಿ ಕೂಡ ತನ್ನ ಸ್ಟೈಲಿಶ್ ಲುಕ್ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ. ಈ ಬಾರಿ ಕೂಡ ಐಶ್ವರ್ಯಾ ಕ್ಯಾನೆ ಫೆಸ್ಟಿವಲ್‌ನಲ್ಲಿ ವಿಭಿನ್ನ ಲುಕ್ ಮೂಲಕ ಅಭಿಮಾನಿಗಳ ಹೃದಯ ಗೆದಿದ್ದಾರೆ.

ಐಶ್ವರ್ಯಾ ರೈ ಸಿಲ್ವರ್ ಮತ್ತು ಬ್ಲ್ಯಾಕ್ ಗೌನ್ ಧರಿಸಿ ಐಶ್ವರ್ಯಾ ಮಿಂಚಿದ್ದಾರೆ. ಉದ್ದವಾದ ಗೌನ್ ಇದಾಗಿದ್ದು ಸಂಪೂರ್ಣವಾಗಿ ಬಾಡಿ ಕವರ್ ಆಗಿತ್ತು, ಐಶ್ವರ್ಯಾ ಮುಖ ಮಾತ್ರ ಕಾಣುತ್ತಿತ್ತು. ಐಶ್ವರ್ಯಾ ಅವರ ರೆಡ್ ಕಾರ್ಪೆಟ್ ವಾಕ್ ಅನ್ನು ಬಾಲಿವುಡ್ ಖ್ಯಾತ ನಿರ್ದೇಶಕ ವಿವೇಕ ಅಗ್ನಿಹೋತ್ರಿ ಅಣಕಿಸಿದ್ದಾರೆ. ಸಾಮಾನ್ಯವಾಗಿ ಉದ್ದವಾದ ಗೌನ್ ಹಾಕಿದ್ರೆ ವಾಕ್ ಮಾಡಲು ಕಷ್ಟವಾಗುತ್ತದೆ. ಹಾಗಾಗಿ ಕಾಸ್ಟ್ಯೂಮ್ ಡಿಸೈನರ್ ಪಕ್ಕದಲ್ಲೇ ಇದ್ದು ಸಹಾಯ ಮಾಡುತ್ತಾರೆ. ಇದನ್ನು ನೋಡಿ ವಿವೇಕ್ ಅಗ್ನಿಹೋತ್ರಿ ಗುಲಾಮರು ಎಂದು ಹೇಳಿದ್ದಾರೆ.

ಐಶ್ವರ್ಯಾ ರೈ ಅವರ ಫೋಟೋ ಶೇರ್ ಮಾಡಿ ಅಗ್ನಿಹೋತ್ರಿ, ಕಾಸ್ಟ್ಯೂಮ್ ಗುಲಾಮರು ಎಂದು ಹೇಳಿದ್ದಾರೆ. 'ನೀವು ಕಾಸ್ಟ್ಯೂಮ್ ಗುಲಾಮರು ಎನ್ನುವ ಪದ ಕೇಳಿದ್ದೀರಾ? ಅದರಲ್ಲೂ ಹೆಚ್ಚಾಗಿ ಹುಡುಗಿಯರು. ನೀವು ಈಗ ಅವರನ್ನು ಭಾರತದಲ್ಲಿಯೂ ಸಹ ಪ್ರತಿಯೊಬ್ಬ ಮಹಿಳಾ ಸೆಲೆಬ್ರಿಟಿಗಳೊಂದಿಗೆ ನೋಡಬಹುದು. ಇಂತಹ ಅಹಿತಕರ ಫ್ಯಾಷನ್‌ಗಾಗಿ ನಾವು ಏಕೆ ಮೂರ್ಖರಾಗುತ್ತಿದ್ದೇವೆ ಮತ್ತು ದಬ್ಬಾಳಿಕೆ ಮಾಡುತ್ತಿದ್ದೇವೆ?' ಎಂದು ಅಗ್ನಿಹೋತ್ರಿ ಪ್ರಶ್ನೆ ಮಾಡಿದ್ದಾರೆ.

ಆದರೆ ಅವರ ಉದ್ದದ ಬಟ್ಟೆಯನ್ನು ನಿಭಾಯಿಸಲು ಓರ್ವ ವ್ಯಕ್ತಿಯನ್ನು ಅವರು ನೇಮಿಸಿಕೊಂಡಿದ್ದರು. ಆ ರೀತಿಯ ಸಹಾಯಕರಿಗೆ ‘ಕಾಸ್ಟ್ಯೂಮ್ ಸ್ಲೇವ್ಸ್’ ಎಂದು ಕರೆಯಲಾಗುತ್ತದೆ. ಇಂಥ ಪದ್ಧತಿ ಸರಿಯಲ್ಲ ಎಂದು ವಿವೇಕ್​ ಅಗ್ನಿಹೋತ್ರಿ  ಅವರು ಟೀಕೆ ಮಾಡಿದ್ದಾರೆ. ಅಲ್ಲದೇ ಇದನ್ನು ಮೂರ್ಖತನ ಎಂದು ಅವರು ಕರೆದಿದ್ದಾರೆ. ಇದು ಐಶ್ವರ್ಯಾ ರೈ ಬಚ್ಚನ್​ ಅವರ ಅಭಿಮಾನಿಗಳ ಕೋಪಕ್ಕೆ ಕಾರಣ ಆಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com