'ನನ್ನ ಡಾರ್ಲಿಂಗ್, ನನ್ನ ಜೀವ, ನನ್ನ ತಾಯಿ': ಐಶ್ವರ್ಯಾ ಹುಟ್ಟುಹಬ್ಬ ದಿನ ಪುತ್ರಿ ಆರಾಧ್ಯ ಮಾತಿಗೆ ನೆಟ್ಟಿಗರು ಫಿದಾ

ಬಾಲಿವುಡ್ ನಟಿ, ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ ಮೊನ್ನೆ ನವೆಂಬರ್ 1 ಬುಧವಾರ 50 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಬಾಲಿವುಡ್ ದಿವಾ ತನ್ನ ಜನ್ಮದಿನವನ್ನು ತನ್ನ ತಾಯಿ ವೃಂದಾ ರೈ ಮತ್ತು ಮಗಳು ಆರಾಧ್ಯ ಅವರೊಂದಿಗೆ ಚಾರಿಟಬಲ್ ಸಮಾರಂಭದಲ್ಲಿ ಆಚರಿಸಿಕೊಂಡರು. ಐಶ್ವರ್ಯಾ ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸುತ್ತಿರುವ ಕಾರ್ಯಕ್ರಮದ ವಿಡಿಯೊಗಳು ಸಾಮ
ಹುಟ್ಟುಹಬ್ಬ ಆಚರಣೆ ಸಂದರ್ಭದಲ್ಲಿ ತಾಯಿ ವೃಂದಾ ರೈ ಮತ್ತು ಪುತ್ರಿ ಆರಾಧ್ಯ ಜೊತೆ ಐಶ್ವರ್ಯಾ ರೈ ಬಚ್ಚನ್
ಹುಟ್ಟುಹಬ್ಬ ಆಚರಣೆ ಸಂದರ್ಭದಲ್ಲಿ ತಾಯಿ ವೃಂದಾ ರೈ ಮತ್ತು ಪುತ್ರಿ ಆರಾಧ್ಯ ಜೊತೆ ಐಶ್ವರ್ಯಾ ರೈ ಬಚ್ಚನ್
Updated on

ಬಾಲಿವುಡ್ ನಟಿ, ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ ಮೊನ್ನೆ ನವೆಂಬರ್ 1 ಬುಧವಾರ 50 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಬಾಲಿವುಡ್ ದಿವಾ ತನ್ನ ಜನ್ಮದಿನವನ್ನು ತನ್ನ ತಾಯಿ ವೃಂದಾ ರೈ ಮತ್ತು ಮಗಳು ಆರಾಧ್ಯ ಅವರೊಂದಿಗೆ ಚಾರಿಟಬಲ್ ಸಮಾರಂಭದಲ್ಲಿ ಆಚರಿಸಿಕೊಂಡರು. ಐಶ್ವರ್ಯಾ ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸುತ್ತಿರುವ ಕಾರ್ಯಕ್ರಮದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹರಿದಾಡುತ್ತಿವೆ.

ಇಲ್ಲಿ ನೆಟಿಜನ್‌ಗಳ ಗಮನ ಸೆಳೆದಿರುವುದು ಆರಾಧ್ಯ ತನ್ನ ತಾಯಿಯ ಹುಟ್ಟುಹಬ್ಬದ ಸಂದರ್ಭದಲ್ಲಿ ಆಡಿರುವ ಮಾತುಗಳು. "ನನ್ನ ಡಾರ್ಲಿಂಗ್, ನನ್ನ ಜೀವನ, ನನ್ನ ತಾಯಿ ಮಾಡುತ್ತಿರುವುದು ನಿಜಕ್ಕೂ ನಂಬಲಾಗದ ಮತ್ತು ಅದ್ಭುತವಾದ ಕೆಲಸವಾಗಿದೆ. ನಾವು ಇಂದು ನಿಮ್ಮ ಹುಟ್ಟುಹಬ್ಬವನ್ನು ಅರ್ಥವತ್ತಾಗಿ ಉದ್ದೇಶದಿಂದ ಆಚರಿಸುತ್ತಿದ್ದೇವೆ. ಇದು ನಿಜವಾಗಿಯೂ ಸಂಪದ್ಭರಿತವಾಗಿದ್ದು ಉದ್ದೇಶ ಪೂರೈಸುತ್ತದೆ ಎಂದು ಭಾವಿಸುತ್ತೇನೆ. ಇದರಿಂದ ಜಗತ್ತಿಗೆ ಸಹಾಯವಾಗುತ್ತದೆ, ಸುತ್ತಮುತ್ತಲಿರುವವರಿಗೆ ಸಹಾಯ ಮಾಡುತ್ತದೆ, ನಮ್ಮ ಸುತ್ತಲಿನ ಜನರಿಗೆ ನಾನು ಹೇಳಲು ಬಯಸುತ್ತೇನೆ, ನೀವು ಏನು ಮಾಡುತ್ತಿದ್ದೀರಿ ಅದು ನಿಜವಾಗಿಯೂ ನಂಬಲಸಾಧ್ಯವಾಗಿದೆ" ಎಂದು ಆರಾಧ್ಯ ತನ್ನ ತಾಯಿಯ ಬಗ್ಗೆ ಬಹಳ ಆತ್ಮವಿಶ್ವಾಸದಿಂದ ಹೆಮ್ಮೆಯಿಂದ ಮಾತನಾಡಿರುವುದು ಜನರ ಮನಸ್ಸನ್ನು ಸೂರೆಗೊಳಿಸಿದೆ.

12 ವರ್ಷದ ತಾರಾದಂಪತಿಯ ಪುತ್ರಿ ಅಲ್ಲಿ ನೆರೆದಿದ್ದವರ ಮನಸೂರೆಗೊಂಡಳು. ಆರಾಧ್ಯ ತನ್ನ ತಾಯಿಯೊಂದಿಗೆ ಚಿಕ್ಕ ಮಗುವಾಗಿದ್ದಾಗಿನಿಂದ ಹಲವಾರು ಕಾರ್ಯಕ್ರಮಗಳಿಗೆ ನೆರಳಿನಂತೆ ಹಿಂಬಾಲಿಸುತ್ತಾಳೆ. ಆದರೆ ಸಾರ್ವಜನಿಕರ ಮುಂದೆ ಮಾತನಾಡುತ್ತಿರುವುದು ಬಹುಶಃ ಇದೇ ಮೊದಲ ಬಾರಿಗೆ. ನೆಟಿಜನ್‌ಗಳು ಈ ಕ್ಷಣವನ್ನು ನಿಜವಾಗಿಯೂ ಮುದ್ದಾಗಿ ಕಂಡುಕೊಳ್ಳುತ್ತಿದ್ದಾರೆ.

ಆರಾಧ್ಯ ತುಂಬಾ ಚೆನ್ನಾಗಿ ವರ್ತಿಸುತ್ತಾಳೆ. ಐಶ್ವರ್ಯಾ ಮಾತ್ರ ಮಗಳನ್ನು ನಿಯಂತ್ರಣ ಮಾಡುತ್ತಿರುವಂತೆ ಕಾಣುತ್ತಿದೆ. ತನ್ನ ಮಗಳಿಗೆ ಅಡ್ಡಿಪಡಿಸದೆ ಮಾತನಾಡುವುದನ್ನು ಮುಂದುವರಿಸಲು ಅವಕಾಶ ಮಾಡಿಕೊಡಬೇಕು. ಮಗಳನ್ನು ಅವಳಷ್ಟಕ್ಕೆ ಬೆಳೆಯಲು ಬಿಡಬೇಕು ಎಂದು ಒಬ್ಬ ನೆಟಿಜನ್ ವೀಡಿಯೊಗೆ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಅಭಿಮಾನಿ, ಅವಳನ್ನು ತುಂಬಾ ಪ್ರೀತಿ ಮತ್ತು ಮೌಲ್ಯಗಳೊಂದಿಗೆ ಬೆಳೆಸಲಾಗುತ್ತಿದೆ ಅದು ಕಂಡುಬರುತ್ತದೆ ಎಂದು ಹೇಳಿದ್ದಾರೆ.

ಐಶ್ವರ್ಯಾ ಚಾರಿಟಿ ಸಮಾರಂಭದಲ್ಲಿ ಹುಟ್ಟುಹಬ್ಬವನ್ನು ಆಚರಣೆ: ಐಶ್ವರ್ಯಾ ತಮ್ಮ ತಾಯಿ ವೃಂದಾ ರೈ ಮತ್ತು ಮಗಳು ಆರಾಧ್ಯ ಬಚ್ಚನ್ ಅವರೊಂದಿಗೆ ಕ್ಯಾನ್ಸರ್ ರೋಗಿಗಳ ಕಲ್ಯಾಣಕ್ಕಾಗಿ ಆಯೋಜಿಸಲಾದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಬಿಳಿ ಬಟ್ಟೆ ಧರಿಸಿ, ಐಶ್ವರ್ಯಾ ತನ್ನ ಹುಟ್ಟುಹಬ್ಬದ ಕೇಕ್ ಕತ್ತರಿಸಲು ವೇದಿಕೆಯನ್ನು ಹತ್ತಿದಾಗ ಸುಂದರವಾಗಿ ಕಾಣಿಸಿದರು.

ಛಾಯಾಗ್ರಾಹಕರು ಒಂದೇ ಸಮನೆ ಹುಟ್ಟುಹಬ್ಬದ ಹಾಡನ್ನು ಹಾಡುತ್ತಿದ್ದಂತೆ ಮೂವರು ಒಟ್ಟಾಗಿ ಕೇಕ್ ಕತ್ತರಿಸಿದರು. ಕರ್ವಾ ಚೌತ್ ಉಪವಾಸ ಆಚರಿಸುತ್ತಿದ್ದರಿಂದ ಐಶ್ವರ್ಯಾ ಕೇಕ್ ತಿನ್ನಲಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com