ನಿತೇಶ್ ತಿವಾರಿ ರಾಮಾಯಣದಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ: ರಾವಣನ ಪಾತ್ರಕ್ಕೆ ಯಶ್ ಫಿಕ್ಸ್; ಶೂಟಿಂಗ್ ಗೆ 15 ದಿನ ಡೇಟ್ಸ್

ಬಾಲಿವುಡ್‌ನಲ್ಲಿ ರಾಮಾಯಣ ಎಂಬ ಸಿನಿಮಾ ನಿರ್ಮಾಣಗೊಳ್ಳಲಿದೆ ಎಂದು ಬಹು ಹಿಂದೆಯೇ ಸುದ್ದಿಯಾಗಿತ್ತು. ಇದನ್ನು ಭಾರತೀಯ ಸಿನಿಮಾರಂಗದ ಪ್ರಮುಖ ಪ್ರಾಜೆಕ್ಟ್‌ ಎಂದು ಬಿಂಬಿಸಲಾಗುತ್ತಿದೆ.
ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್
ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್

ಮುಂಬಯಿ: ಬಾಲಿವುಡ್‌ನಲ್ಲಿ ರಾಮಾಯಣ ಎಂಬ ಸಿನಿಮಾ ನಿರ್ಮಾಣಗೊಳ್ಳಲಿದೆ ಎಂದು ಬಹು ಹಿಂದೆಯೇ ಸುದ್ದಿಯಾಗಿತ್ತು. ಇದನ್ನು ಭಾರತೀಯ ಸಿನಿಮಾರಂಗದ ಪ್ರಮುಖ ಪ್ರಾಜೆಕ್ಟ್‌ ಎಂದು ಬಿಂಬಿಸಲಾಗುತ್ತಿದೆ.

ಭಾರತೀಯ ಪುರಾಣ ಕತೆಯಾದ ರಾಮಾಯಣದಲ್ಲಿ ಸ್ಯಾಂಡಲ್‌ವುಡ್‌ ನಟ ಯಶ್‌ ನಟಿಸಲಿದ್ದಾರೆ. ರಾಮಾಯಣದ ರಾವಣನಾಗಿ ಯಶ್‌ ಬಣ್ಣ ಹಚ್ಚಲಿದ್ದಾರೆ. ರಾಮಾಯಣದ ಚಿತ್ರೀಕರಣವು 2024ರ ಮೊದಲಲ್ಲಿ ಆರಂಭವಾಗುವ ಸೂಚನೆಯಿದೆ ಎಂದು ಪಿಂಕ್‌ವಿಲ್ಲಾ ವರದಿ ಮಾಡಿದೆ. ರಾಮಾಯಣದ ಪಾರ್ಟ್‌ 1ಗೆ ಹದಿನೈದು ದಿನದ ಕಾಲ್‌ ಶೀಟ್‌ ಅನ್ನು ಯಶ್‌ ನೀಡಿದ್ದಾರೆ ಎನ್ನಲಾಗಿದೆ.

ಈ ಸಿನಿಮಾದಲ್ಲಿ ರಣಬೀರ್‌ ಕಪೂರ್‌, ಸಾಯಿ ಪಲ್ಲವಿ ಮತ್ತು ಯಶ್‌ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ರಾಮನಾಗಿ ರಣಬೀರ್‌ ಕಪೂರ್‌ ನಟಿಸಲಿದ್ದಾರೆ. ಸಾಯಿ ಪಲ್ಲವಿ ಸೀತೆಯಾಗಿ ನಟಿಸಲಿದ್ದಾರೆ. ಕನ್ನಡ ನಟ ಯಶ್‌ ಈ ಸಿನಿಮಾದಲ್ಲಿ ರಾವಣನಾಗಿ ಅಬ್ಬರಿಸಲಿದ್ದಾರೆ.

ನಿತೇಶ್‌ ತಿವಾರಿ ತಿವಾರಿ ಮತ್ತು ತಂಡವು ಫೆಬ್ರವರಿ 2024ರ ಬಳಿಕ ರಾಮಾಯಣದ ಶೂಟಿಂಗ್‌ ಆರಂಭಿಸುವ ನಿರೀಕ್ಷೆಯಿದೆ. "ವಲ್ಡ್‌ ಆಫ್‌ ರಾಮಾಯಣ ಸೃಷ್ಟಿಸಲು ನಿತೇಶ್‌ ತಿವಾರಿ ಮತ್ತು ತಂಡವು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ಸಿನಿಮಾದ ಬ್ಲೂಪ್ರಿಂಟ್‌ ರೆಡಿಯಾಗಿದೆ. ವಿಎಫ್‌ಎಕ್ಸ್‌ ಪ್ಲೇಟ್‌ಗಳನ್ನು ಆಸ್ಕರ್‌ ವಿನ್ನಿಂಗ್‌ ಕಂಪನಿಯಾದ ಡಿಎನ್‌ಇಜಿ ಸಿದ್ಧಪಡಿಸುತ್ತಿದೆ. ಇದು ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ.

ಆದರೆ, ರಾಮಾಯಣ ಎನ್ನುವುದು ಕೇವಲ ವಿಶುಯಲ್‌ ದೃಶ್ಯವಲ್ಲ. ಸರಳವಾಗಿ ಪ್ರೇಕ್ಷಕರಿಗೆ ಕಥೆ ಹೇಳುವ ಪ್ರಯತ್ನವಾಗಲಿದೆ. ಸಿನಿಮಾದಲ್ಲಿ ಕಥೆಯ ಭಾವನೆಗೆ ಒತ್ತು ನೀಡಲಾಗುತ್ತದೆ" ಎಂದು ಮೂಲಗಳನ್ನು ಉದ್ದೇಶಿಸಿ ಪಿಂಕ್‌ವಿಲ್ಲಾ ವರದಿ ಮಾಡಿದೆ.

ರಣಬೀರ್‌ ಕಪೂರ್‌ ಮತ್ತು ಸಾಯಿ ಪಲ್ಲವಿ ಫೆಬ್ರವರಿ ತಿಂಗಳಿನಿಂದ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಮೊದಲು ರಾಮ ಮತ್ತು ಸೀತೆಯ ಕುರಿತು ಹೆಚ್ಚಿನ ಗಮನ ನೀಡುತ್ತೇವೆ. ಸೀತಾ ಅಪಹರಣದ ಬಳಿಕ ಸಿನಿಮಾ ಮುಂದಿನ ಹಂತಕ್ಕೆ ತೆರೆದುಕೊಳ್ಳಲಿದೆ. ಫೆಬ್ರವರಿಯಿಂದ ಆಗಸ್ಟ್‌ವರೆಗೆ ಈ ಶೂಟಿಂಗ್‌ ನಡೆಯಬಹುದು. ರಾವಣನಾಗಿ ಯಶ್‌ ಶೂಟಿಂಗ್‌ ಮುಂದಿನ ವರ್ಷ ಜುಲೈ ತಿಂಗಳಲ್ಲಿ ಆರಂಭವಾಗುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com