ಸಲಿಂಗ ವಿವಾಹದ ಪರ ನಿಲುವು ಪ್ರಕಟಿಸಿದ ವಿವೇಕ್ ಅಗ್ನಿಹೋತ್ರಿ: ಅವರು ಹೇಳಿದ್ದೇನು ಅಂದರೆ...

ತಮ್ಮ ದಿಟ್ಟ ನಿಲುವುಗಳಿಂದಲೇ ಖ್ಯಾತಿ ಪಡೆದಿರುವ ವಿವೇಕ್ ಅಗ್ನಿಹೋತ್ರಿ ಈಗ ಸಲಿಂಗ ವಿವಾಹದ ಬಗ್ಗೆ ಹೇಳಿಕೆ ನೀಡಿದ್ದಾರೆ. 
ವಿವೇಕ್ ಅಗ್ನಿಹೋತ್ರಿ
ವಿವೇಕ್ ಅಗ್ನಿಹೋತ್ರಿ

ಮುಂಬೈ: ತಮ್ಮ ದಿಟ್ಟ ನಿಲುವುಗಳಿಂದಲೇ ಖ್ಯಾತಿ ಪಡೆದಿರುವ ವಿವೇಕ್ ಅಗ್ನಿಹೋತ್ರಿ ಈಗ ಸಲಿಂಗ ವಿವಾಹದ ಬಗ್ಗೆ ಹೇಳಿಕೆ ನೀಡಿದ್ದಾರೆ. ಸಲಿಂಗ ವಿವಾಹದ ಪರ ಮಾತನಾಡಿರುವ ವಿವೇಕ್ ಅಗ್ನಿಹೋತ್ರಿ, ಸಲಿಂಗ ವಿವಾಹ ಎನ್ನುವುದು ಅಪರಾಧವಲ್ಲ ಎಂದು ಹೇಳಿದ್ದಾರೆ. 

ಸಲಿಂಗ ವಿವಾಹ 'ನಗರ ಪರಿಕಲ್ಪನೆ', ಸಾಮಾಜಿಕ ನೀತಿಗೆ ವಿರುದ್ಧವಾದದ್ದು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಹೇಳಿದ ಬೆನ್ನಲ್ಲೇ ಟ್ವೀಟ್ ಮಾಡಿರುವ ಈ ಬಗ್ಗೆ ಟ್ವೀಟ್ ಮಾಡಿರುವ ಅಗ್ನಿಹೋತ್ರಿ,

ಸಲಿಂಗ ವಿವಾಹವು 'ನಗರ ಗಣ್ಯರ' ಪರಿಕಲ್ಪನೆಯಲ್ಲ, ಅದು ಮನುಷ್ಯನ ಅಗತ್ಯವಾಗಿದೆ. ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳಲ್ಲಿ ಎಂದಿಗೂ ಪ್ರಯಾಣಿಸದ ಕೆಲವು ಸರ್ಕಾರಿ ಗಣ್ಯರು ಅಥವಾ ಮುಂಬೈ ಸ್ಥಳೀಯರು ಸಲಿಂಗ ಕಾಮದಿಂದ  ಹೊಸ ಸಾಮಾಜಿಕ ಸಂಸ್ಥೆಯ ರಚನೆಯಾಗುತ್ತದೆ ಎಂದು ಹೇಳುತ್ತಿದ್ದಾರೆ. ಮೊದಲನೆಯದ್ದಾಗಿ ಸಲಿಂಗ ವಿವಾಹ ಎಂಬುದು ಪರಿಕಲ್ಪನೆಯಲ್ಲ ಅದು ಅಗತ್ಯವಾಗಿದೆ. ಅದು ಹಕ್ಕು. ಭಾರತದಂತಹ ಪ್ರಗತಿಶೀಲ, ಉದಾರ ಮತ್ತು ಅಂತರ್ಗತ ನಾಗರಿಕತೆಯಲ್ಲಿ ಸಲಿಂಗ ವಿವಾಹ ಸಾಮಾನ್ಯದ್ದಾಗಿರಬೇಕೇ ಹೊರತು ಅಪರಾಧವಾಗಿರಬಾರದು ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com