ಬೆಡ್ ನಲ್ಲಿ ನೀವು ಏನು ಮಾಡುತ್ತೀರಿ ಎಂಬುದು ಐಡೆಂಟಿಟಿ ಅಲ್ಲ: ನಿಮ್ಮ ಲೈಂಗಿಕ ಆದ್ಯತೆಗಳು ಹಾಸಿಗೆಗೆ ಸೀಮಿತವಾಗಿರಲಿ!

ನೀವು ಈ ಜಗತ್ತಿನಲ್ಲಿ ಏನು ಮಾಡುತ್ತಿದ್ದೀರಿ ಎನ್ನುವುದರ ಆಧಾರದ ಮೇಲೆ ನಿಮ್ಮನ್ನು ಗುರುತಿಸಲಾಗುತ್ತದೆಯೇ ಹೊರತು, ನೀವು ಬೆಡ್​ನಲ್ಲಿ ಏನು ಮಾಡುತ್ತೀರಿ ಎನ್ನುವುದರ ಆಧಾರದ ಮೇಲಲ್ಲ. ನಿಮ್ಮ ಲೈಂಗಿಕ ಆದ್ಯತೆಗಳು ಏನೇ ಇದ್ದರೂ ಅದು ಹಾಸಿಗೆಗೆ ಸೀಮಿತ ಆಗಬೇಕು. ಅವುಗಳನ್ನು ನಿಮ್ಮ ಗುರುತಾಗಿ ಮಾಡಿಕೊಳ್ಳಬೇಡಿ’.
ಕಂಗನಾ ರಣಾವತ್
ಕಂಗನಾ ರಣಾವತ್

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟಿ ಕಂಗನಾ ರಣಾವತ್, ಸೋಷಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ಪೋಸ್ಟ್ ಹಾಕುತ್ತಲೇ ಇರುತ್ತಾರೆ. ಕೆಲವು ವಿಚಾರಗಳಲ್ಲಿ ಕಂಗನಾ ರಣಾವತ್ ನೇರ, ದಿಟ್ಟ. ಯಾರಿಗೆ ತಮ್ಮ ಮಾತು ತಲುಪಬೇಕಿತ್ತೋ ಅದನ್ನು ನೇರವಾಗಿಯೇ ತಲುಪಿಸುತ್ತಾರೆ.

ಈ ಬಾರಿಯೂ ಟ್ವಿಟರ್ ನಲ್ಲಿ ಹಲವು ವಿಚಾರಗಳನ್ನು ಹಂಚಿಕೊಂಡಿರುವ ಅವರು, ಅದನ್ನು ಯಾರಿಗೆ ಹೇಳಿದ್ದಾರೆ ಎನ್ನುವುದನ್ನು ಮಾತ್ರ ಗೌಪ್ಯವಾಗಿ ಇಟ್ಟಿದ್ದಾರೆ.

ಹೆಣ್ಣು ಗಂಡು ತಾರತಮ್ಯದ ಬಗ್ಗೆಯೂ ಮಾತನಾಡಿದ ಅವರು, ನಮ್ಮ ವೃತ್ತಿಯ ಮೇಲೆಯೇ ನಮ್ಮ ಐಡೆಂಟಿಟಿ ನಿರ್ಧಾರವಾಗುತ್ತದೆ. ಆಧುನಿಕ ಜಗತ್ತಿನಲ್ಲಿ ಜನರು ನಟಿಯರು ಮತ್ತು ಮಹಿಳಾ ನಿರ್ದೇಶಕಿ ಎಂಬ ಪದಗಳನ್ನು ಬಳಸುವುದಿಲ್ಲ. ಅದರ ಬದಲು ಕಲಾವಿದರು ಮತ್ತು ನಿರ್ದೇಶಕರು ಎಂದು ಬಳಸುತ್ತಾರೆ. ನೀವು ಈ ಜಗತ್ತಿನಲ್ಲಿ ಏನು ಮಾಡುತ್ತಿದ್ದೀರಿ ಎನ್ನುವುದರ ಆಧಾರದ ಮೇಲೆ ನಿಮ್ಮನ್ನು ಗುರುತಿಸಲಾಗುತ್ತದೆಯೇ ಹೊರತು, ನೀವು ಬೆಡ್​ನಲ್ಲಿ ಏನು ಮಾಡುತ್ತೀರಿ ಎನ್ನುವುದರ ಆಧಾರದ ಮೇಲಲ್ಲ. ನಿಮ್ಮ ಲೈಂಗಿಕ ಆದ್ಯತೆಗಳು ಏನೇ ಇದ್ದರೂ ಅದು ಹಾಸಿಗೆಗೆ ಸೀಮಿತ ಆಗಬೇಕು. ಅವುಗಳನ್ನು ನಿಮ್ಮ ಗುರುತಾಗಿ ಮಾಡಿಕೊಳ್ಳಬೇಡಿ’ ಎಂದು ಕಂಗನಾ ಬರೆದುಕೊಂಡಿದ್ದಾರೆ.

‘ನಾನು ಗ್ರಾಮೀಣ ಹಿನ್ನೆಲೆಯಿಂದ ಬಂದವಳು. ಹಾಗಂತ ನನಗೆ ಯಾವುದೇ ರಿಯಾಯಿತಿ ನೀಡಲಿಲ್ಲ. ಸಿನಿಮಾ ಜಗತ್ತಿನಲ್ಲಿ ನನ್ನದೇ ಆದ ಸ್ಥಾನವನ್ನು ನಾನು ಸೃಷ್ಟಿಮಾಡಿಕೊಳ್ಳಬೇಕಿತ್ತು’ ಎಂದು ಕಂಗನಾ ಹೇಳಿದ್ದಾರೆ.

‘ಈ ಜಗತ್ತಿನಲ್ಲಿ ವೈಯಕ್ತಿಕವಾಗಿ ಎಷ್ಟು ಶಕ್ತಿಶಾಲಿ ಆಗಿದ್ದೇವೆ ಎಂಬುದಷ್ಟೇ ಮುಖ್ಯ. ಪುರುಷ, ಮಹಿಳೆ, ದೈಹಿಕವಾಗಿ ಬಲಶಾಲಿ ಅಥವಾ ದುರ್ಬಲ ಎಂಬುದೆಲ್ಲ ಇಲ್ಲ. ನನ್ನ ಸುತ್ತಲಿರುವ ವ್ಯಕ್ತಿಗಳನ್ನು ಮತ್ತು ನನ್ನನ್ನು ನಾನು ಜಡ್ಜ್ ಮಾಡುತ್ತಾ ಬಂದರೆ ನಾನು ಇಲ್ಲಿಯವರೆಗೆ ಬರುತ್ತಿರಲಿಲ್ಲ’ ಎಂದು ಕಂಗನಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com