ಬಾಹುಬಲಿ ಡ್ಯಾನ್ಸರ್ ಜೊತೆ ಶಾರುಖ್ ಮಗನ ಕುಚ್ ಕುಚ್: ನೋರಾ ಫತೇಹಿ- ಆರ್ಯನ್ ಖಾನ್ ಡೇಟಿಂಗ್; ಪ್ರೀತಿಗಿಲ್ಲ ವಯಸ್ಸಿನ ಅಂತರ!?
ಒಂದೆಡೆ ನಟ ಶಾರುಖ್ ಖಾನ್ ಅವರು ‘ಪಠಾಣ್’ ಸಿನಿಮಾದ ವಿವಾದಗಳ ಕಾರಣದಿಂದ ಸಖತ್ ಸುದ್ದಿ ಆಗುತ್ತಿದ್ದಾರೆ. ಇನ್ನೊಂದೆಡೆ ಅವರ ಪುತ್ರ ಆರ್ಯನ್ ಖಾನ್ ಡೇಟಿಂಗ್ ವಿಚಾರಕ್ಕೆ ಹೈಲೈಟ್ ಆಗುತ್ತಿದ್ದಾರೆ.
Published: 05th January 2023 08:38 AM | Last Updated: 05th January 2023 08:53 AM | A+A A-

ಆರ್ಯನ್ ಖಾನ್ ಮತ್ತು ನೋರಾ ಫತೇಹಿ
ಒಂದೆಡೆ ನಟ ಶಾರುಖ್ ಖಾನ್ ಅವರು ‘ಪಠಾಣ್’ ಸಿನಿಮಾದ ವಿವಾದಗಳ ಕಾರಣದಿಂದ ಸಖತ್ ಸುದ್ದಿ ಆಗುತ್ತಿದ್ದಾರೆ. ಇನ್ನೊಂದೆಡೆ ಅವರ ಪುತ್ರ ಆರ್ಯನ್ ಖಾನ್ ಡೇಟಿಂಗ್ ವಿಚಾರಕ್ಕೆ ಹೈಲೈಟ್ ಆಗುತ್ತಿದ್ದಾರೆ.
ಖ್ಯಾತ ಡ್ಯಾನ್ಸರ್ ಕಮ್ ನಟಿ ನೋರಾ ಫತೇಹಿ ಜೊತೆಗೆ ಆರ್ಯನ್ ಖಾನ್ ಅವರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗಾಸಿಪ್ ಹಬ್ಬಿದೆ. ಆರ್ಯನ್ ಖಾನ್ ಮತ್ತು ನೋರಾ ಫತೇಹಿ ಯಾವುದೇ ಸಿನಿಮಾದಲ್ಲೂ ಜೊತೆಯಾಗಿ ಕೆಲಸ ಮಾಡಿಲ್ಲ. ಹಾಗಿದ್ದರೂ ಕೂಡ ಅವರ ನಡುವೆ ಪ್ರೀತಿ ಚಿಗುರಿರುವುದು ಅಚ್ಚರಿ ಮೂಡಿಸಿದೆ.
ನೋರಾ ಫತೇಹಿ ಬಾಲಿವುಡ್‌ನಲ್ಲಿ ಡ್ಯಾನ್ಸರ್ ಆಗಿ ಹೆಸರು ಮಾಡಿದ್ದಾರೆ. ಅನೇಕ ಐಟಂ ಸಾಂಗ್‌ಗಳಲ್ಲಿ ನೋರಾ ಹೆಜ್ಜೆ ಹಾಕಿದ್ದಾರೆ. ನೋರಾ, ತಮ್ಮ ಡ್ಯಾನ್ಸ್‌ನಿಂದಲೇ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. 'ಬಾಹುಬಲಿ' ಸಿನಿಮಾದ ಮನೋಹರಿ.... ಹಾಡಿನಲ್ಲಿ ನಟಿಸಿರುವ ಮೂವರು ಚೆಲುವೆಯರಲ್ಲಿ ನೋರಾ ಫತೇಹಿ ಕೂಡಾ ಒಬ್ಬರು.
ನೋರಾ, ಆರ್ಯನ್ ಖಾನ್‌ಗಿಂತ 5 ವರ್ಷ ದೊಡ್ಡವರು. ಇದೀಗ ಈ ಜೋಡಿ ಪ್ರೀತಿಯಲ್ಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇಬ್ಬರೂ ಅನೇಕ ಪಾರ್ಟಿಗಳಲ್ಲಿ, ರೆಸ್ಟೋರೆಂಟ್‌ನಲ್ಲಿ ಜೊತೆಯಾಗಿ ಕಾಣಿಸಿಕೊಂಡಿರುವುದು ಪಾಪರಾಜಿಗಳ ಕ್ಯಾಮರಾದಲ್ಲಿ ಸೆರೆಯಾಗಿದೆಯಂತೆ.
4 ದಿನಗಳ ಹಿಂದೆ ಹೊಸ ವರ್ಷವನ್ನು ಆರ್ಯನ್ ಖಾನ್ ತಮ್ಮ ಫ್ರೆಂಡ್ಸ್ ಜೊತೆ ಸೇರಿ ದುಬೈನಲ್ಲಿ ಆಚರಿಸಿದ್ದಾರೆ. ಅವರೊಂದಿಗೆ ಸುಹಾನಾ ಖಾನ್, ಕರಣ್ ಜೋಹರ್, ನೋರಾ ಫತೇಹಿ ಹಾಗೂ ಇನ್ನಿತರರು ಇದ್ದಾರೆ.
ನೋರಾ ಫತೇಹಿ ಹಾಗೂ ಆರ್ಯನ್ ಖಾನ್ ಇಬ್ಬರೂ ಡೇಟಿಂಗ್‌ನಲ್ಲಿದ್ದಾರೆ ಎಂಬ ವಿಚಾರ ತಿಳಿದಾಗಿನಿಂದ ನೆಟಿಜನ್ಸ್ , ಶಾರುಖ್ ಖಾನ್ ಹಾಗೂ ಗೌರಿ ಖಾನ್ ಕಾಲೆಳೆಯುತ್ತಿದ್ದಾರೆ. ನಿಮ್ಮ ಸೊಸೆ ಸಖತ್ ಬ್ಯೂಟಿಯಾಗಿದ್ದಾರೆ, ಮದುವೆ ಯಾವಾಗ? ಎಲ್ಲಿ? ಅಂತೆಲ್ಲಾ ಕಮೆಂಟ್ ಮಾಡುತ್ತಿದ್ದಾರೆ. ಆದರೆ ಇದು ನಿಜವಾದ ಪ್ರೀತೀನಾ? ಕೇವಲ ಸ್ನೇಹಾನಾ? ಟೈಂಪಾಸ್ ಡೇಟಿಂಗ್ ಅಷ್ಟೇನಾ ಯಾರಿಗೂ ಗೊತ್ತಿಲ್ಲ.