ನನ್ನ ತಾಯಿ, ಪತ್ನಿ ಕ್ಯಾನ್ಸರ್ ಗೆ ಬಲಿ; ಒಂದು ವೇಳೆ ಸಾಯುವ ಪರಿಸ್ಥಿತಿ ಬಂದರೆ ಸಾಯುತ್ತೇನೆ, ಆದರೆ...: ಸಂಜಯ್ ದತ್

2020 ರಲ್ಲಿ ಶಂಶೇರಾ ಚಿತ್ರದ ಶೂಟಿಂಗ್ ವೇಳೆ ನಟ ಸಂಜಯ್ ದತ್ ಅವರಿಗೆ ಶ್ವಾಸಕೋಶದ ಕ್ಯಾನ್ಸರ್ ಇರುವುದು ಗೊತ್ತಾಯಿತು. ಆದರೆ ಕ್ಯಾನ್ಸರ್ ಇರುವುದು ಗೊತ್ತಾಗುವ ವೇಳೆಗೆ ಸಂಜಯ್ ದತ್ ಕುಟುಂಬಸ್ಥರು ಯಾರೂ ಇರಲಿಲ್ಲ.
ಸಂಜಯ್ ದತ್
ಸಂಜಯ್ ದತ್

2020 ರಲ್ಲಿ ಶಂಶೇರಾ ಚಿತ್ರದ ಶೂಟಿಂಗ್ ವೇಳೆ ನಟ ಸಂಜಯ್ ದತ್ ಅವರಿಗೆ ಶ್ವಾಸಕೋಶದ ಕ್ಯಾನ್ಸರ್ ಇರುವುದು ಗೊತ್ತಾಯಿತು. ಆದರೆ ಕ್ಯಾನ್ಸರ್ ಇರುವುದು ಗೊತ್ತಾಗುವ ವೇಳೆಗೆ ಸಂಜಯ್ ದತ್ ಕುಟುಂಬಸ್ಥರು ಯಾರೂ ಇರಲಿಲ್ಲ.

ಕ್ಯಾನ್ಸರ್​ ಎಂಬ ಮಾರಣಾಂತಿಕ ರೋಗ ಸ್ಟೇಜ್ 4ರಲ್ಲಿದ್ದರೂ ಅದನ್ನು ಮೆಟ್ಟಿ ನಿಂತವರು ದತ್. ಇಂದು ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಅದೆಷ್ಟೋ ರೋಗಿಗಳಿಗೆ ಸ್ಫೂರ್ತಿಯಾಗಿದ್ದಾರೆ.

ಇತ್ತೀಚೆಗೆ ಆಸ್ಪತ್ರೆ ಒಂದರಲ್ಲಿ ನಡೆದ ಕಾರ್ಯಕ್ರಮಕ್ಕೆ ದತ್​​ ತಮ್ಮ ಸಹೋದರಿ ಪ್ರಿಯಾ ದತ್​ ಜೊತೆ ಬಂದಿದ್ದರು. ಈ ಸಂದರ್ಭದಲ್ಲಿ ಸಂಜಯ್ ದತ್​, ಕ್ಯಾನ್ಸರ್​ ಜೊತೆಗಿನ ತಮ್ಮ ಹೋರಾಟದ ಹಾದಿಯನ್ನು ಎಲ್ಲರ ಮುಂದೆ ಬಿಚ್ಚಿಟ್ಟಿದ್ದಾರೆ. ಮಾತ್ರವಲ್ಲ, ಕೆಲವು ಶಾಕಿಂಗ್ ವಿಚಾರಗಳನ್ನೂ ಹೇಳಿಕೊಂಡಿದ್ದಾರೆ.

ನನಗೆ ಕ್ಯಾನ್ಸರ್ ಎಂಬ ಮಾರಣಾಂತಿಕ ಕಾಯಿಲೆ ಒಕ್ಕರಿಸಿರೋದು ಗೊತ್ತೇ ಇರಲಿಲ್ಲ. ಆಗಾಗ ವಿಪರೀತ ಬೆನ್ನು ನೋವು ಕಾಣಿಸಿಕೊಳ್ಳುತ್ತಿತ್ತು. ಅದಕ್ಕಾಗಿ ನಾನು ಹಾಟ್ ವಾಟರ್ ಬಾಟಲಿ, ನೋವು ನಿರೋಧಕ ಮಾತ್ರೆಗಳನ್ನು ಸೇವಿಸಲು ಶುರುಮಾಡಿದೆ.  ಉಸಿರಾಡೋದಕ್ಕೂ ಸಮಸ್ಯೆ ಆಯಿತು. ಹೀಗಾಗಿ ನನ್ನ ಸಂಬಂಧಿಕರು ಆಸ್ಪತ್ರೆಗೆ ಕರೆದುಕೊಂಡು ಹೋದರು, ಅಲ್ಲಿ ತಪಾಸಣೆ ನಡೆಸಿದಾಗ ಸಂಬಂಧಿಕರಿಗೆ ವಿಚಾರ ತಿಳಿಯಿತು. ಆದರೆ, ನನಗೆ ಆ ಸಂದರ್ಭದಲ್ಲಿ ಕ್ಯಾನ್ಸರ್ ಇರುವ ಬಗ್ಗೆ ಹೇಳಿಯೇ ಇಲ್ಲ.

ನಾನು ಆಸ್ಪತ್ರೆಗೆ ಬಂದಾಗ ಕುಟುಂಬಸ್ಥರು ಯಾರೂ ನನ್ನ ಜೊತೆ ಇರಲಿಲ್ಲ. ನನ್ನ ಪತ್ನಿ, ನನ್ನ ಸಹೋದರಿ ನನ್ನ ಜೊತೆ ಇರಲಿಲ್ಲ. ನಾನೊಬ್ಬನೇ ಆಸ್ಪತ್ರೆಯಲ್ಲಿ ಇದ್ದೆ. ಬೆಡ್​​ ಮೇಲೆ ಮಲಗಿದ್ದಾಗ ಆಸ್ಪತ್ರೆ ಸಿಬ್ಬಂದಿಯೊಬ್ಬ ಇದ್ದಕ್ಕಿದ್ದಂತೆ ನನ್ನ ಬಳಿ ಬಂದು, ಏನೋ ಹೇಳಲು ಪ್ರಯತ್ನಿಸಿದರು. ಕೊನೆಗೆ ಅವರು ನನಗೆ (ದತ್) ಕ್ಯಾನ್ಸರ್​ ಇರುವ ಬಗ್ಗೆ ಹೇಳಿದರು.

ಈ ವೇಳೆ ನನ್ನ ಪತ್ನಿ ದುಬೈನಲ್ಲಿದ್ದಳು. ಹೀಗಾಗಿ ಸಹೋದರಿ ಪ್ರಿಯಾ ದತ್ ಆಸ್ಪತ್ರೆಗೆ ಬರಬೇಕಾಯಿತು. ಅವರು ನನಗೆ ಕ್ಯಾನ್ಸರ್ ಇದೆ ಎಂದಾಗ ನಾನು ದೃತಿಗೆಡಲಿಲ್ಲ.

ಯಾಕಂದ್ರೆ ನನ್ನ ಕುಟುಂಬಕ್ಕೆ ಕ್ಯಾನ್ಸರ್ ಇತಿಹಾಸ ಇದೆ. ನನ್ನ ಅಮ್ಮ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್​ಗೆ ಬಲಿಯಾದರು. ನನ್ನ ಪತ್ನಿ (ರಿಚಾ ಶರ್ಮಾ) ಮೆದುಳು ಕ್ಯಾನ್ಸರ್​​ನಿಂದ ತೀರಿಕೊಂಡರು. ಇದೇ ಕಾರಣಕ್ಕೆ ನಾನು ನಿರ್ಧರಿಸಿಬಿಟ್ಟೆ.. ಏನೆಂದರೆ ಕಿಮೋಥೆರಪಿ ಚಿಕಿತ್ಸೆಯನ್ನು ಪಡೆದುಕೊಳ್ಳಲ್ಲ ಎಂದು. ಒಂದು ವೇಳೆ ನಾನು ಸಾಯುವಂತಹ ಪರಿಸ್ಥಿತಿ ಬಂದರೆ ಸಾಯುತ್ತೇನೆ ಅಷ್ಟೇ..ಆದರೆ ನನಗೆ ಈ ಎಲ್ಲಾ ಚಿಕಿತ್ಸೆಗಳು ಬೇಡ ಅಂದುಬಿಟ್ಟೆ.

ಈ ಸಂದರ್ಭದಲ್ಲಿ ನನ್ನ ಕುಟುಂಬ ನನ್ನನ್ನು ಸುತ್ತುವರಿದು ಕಣ್ಣೀರಿಡುತ್ತಿತ್ತು. ಅದನ್ನು ನಾನು ಗಮನಿಸಿದೆ. ಒಂದು ದಿನ ರಾತ್ರಿ ನಾನು ನಿರ್ಧಾರ ಮಾಡಿದೆ. ಎಲ್ಲರೂ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಮತ್ತೆ ಅದರ ವಿರುದ್ಧ ಹೋರಾಟ ಮಾಡಿ ಗೆಲ್ಲುತ್ತಾರೆ.. ಅಂತೆಯೇ ನಾನು ಕ್ಯಾನ್ಸರ್​ಗೆ ತುತ್ತಾದೆ.. ಈಗ ನಾನು ಅದನ್ನು ಮೆಟ್ಟಿ ನಿಲ್ಲಬೇಕು ಎಂದು ನಿರ್ಧರಿಸಿದೆ. ನಾನು ಚೇತರಿಸಿಕೊಂಡ ಮೇಲೆ ರೋಗ ನಿರ್ಣಯದ ಹೋರಾಟದ ಬಗ್ಗೆ ಹೇಳಿಕೊಳ್ಳಲು ಹಿಂಜರಿಯುವುದಿಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com