ಬರೆಯುವ ಮೊದಲು ಒಮ್ಮೆ ಪರಿಶೀಲಿಸಿ: ಮಲೈಕಾ ಅರೋರಾ ಗರ್ಭಿಣಿ ಎಂಬ ವಿಚಾರಕ್ಕೆ ಅರ್ಜುನ್ ಕಪೂರ್ ಗರಂ
ಅರ್ಜುನ್ ಅವರ ಮಗುವಿಗೆ ಮಲೈಕಾ ತಾಯಿ ಆಗಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಈ ವಿಚಾರವಾಗಿ ನಟ ಅರ್ಜುನ್ ಕಪೂರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Published: 01st June 2023 02:02 PM | Last Updated: 01st June 2023 02:02 PM | A+A A-

ಮಲೈಕಾ ಮತ್ತು ಅರ್ಜುನ್ ಕಪೂರ್
ಬಾಲಿವುಡ್ ಸೆಲೆಬ್ರಿಟಿಗಳಾದ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಅವರು ಲಿವ್-ಇನ್ ರಿಲೇಷನ್ಶಿಪ್ನಲ್ಲಿ ಇದ್ದಾರೆ. ಇಬ್ಬರ ನಡುವೆ ಅನೇಕ ಸುದ್ದಿಗಳು ಹುಟ್ಟಿಕೊಳ್ಳುತ್ತವೆ. ಆದರೆ ಎಲ್ಲದಕ್ಕೂ ಅವರು ಪ್ರತಿಕ್ರಿಯೆ ನೀಡುವುದಿಲ್ಲ.
ಕೆಲವೊಮ್ಮೆ ತೀರಾ ಕೆಳಮಟ್ಟದ ಗಾಸಿಪ್ಗಳು ಹರಡಿದಾಗ ಅದನ್ನು ತಳ್ಳಿಹಾಕುವುದು ಅನಿವಾರ್ಯ ಆಗುತ್ತದೆ. ಕಳೆದ ವರ್ಷ ಮಲೈಕಾ ಅರೋರಾ ಅವರು ಪ್ರೆಗ್ನೆಂಟ್ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು.
ಅರ್ಜುನ್ ಅವರ ಮಗುವಿಗೆ ಮಲೈಕಾ ತಾಯಿ ಆಗಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಈ ವಿಚಾರವಾಗಿ ನಟ ಅರ್ಜುನ್ ಕಪೂರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, “ನೆಗೆಟಿವಿಟಿಯನ್ನು ಹರಡುವುದು ಸುಲಭ. ಎಲ್ಲೆಡೆ ನೆಗೆಟಿವ್ ವಿಚಾರಗಳ ಬಹುಬೇಗನೇ ಹರಡುವುದರಿಂದ ಜನ ಅದರತ್ತ ಹೆಚ್ಚು ಗಮನ ಹರಿಸುತ್ತಾರೆ. ನಾವು ನಟರು, ನಮ್ಮ ವೈಯಕ್ತಿಕ ಜೀವನ ಯಾವಾಗಲೂ ತುಂಬಾ ಖಾಸಗಿಯಾಗಿರುವುದಿಲ್ಲ. ನಾವೆಲ್ಲರೂ ಮನುಷ್ಯರು ಎಂಬ ಕನಿಷ್ಠ ಅರಿವು ನಮಗಿರಬೇಕು. ಆದ್ದರಿಂದ, ನೀವು ಬಹಳ ಮುಖ್ಯವಾದದ್ದನ್ನು ಬರೆಯಲು ಹೊರಟಿದ್ದರೆ ಒಮ್ಮೆ ಪರಿಶೀಲಿಸಿ. ಹಾಗೆ ಮಾಡಿದರೆ ನಮಗೂ ನಾವು ಮಾಡಿದ್ದು ಸರಿ ಎಂದು ಭಾಸವಾಗುತ್ತದೆ. ಸುಮ್ಮನೆ ನೀವು ಊಹಿಸಿ ಎಲ್ಲವನ್ನೂ ಬರೆಯಬೇಡಿ” ಎಂದು ಹೇಳಿದ್ದಾರೆ.
ನಮ್ಮ ಮಾತುಗಳು ಸಾಮಾನ್ಯ ಜನರಿಗೆ ಹೇಗೆ ತಲುಪುತ್ತಿವೆ ಎಂಬುದರ ಕುರಿತು ನಾವು ಮಾಧ್ಯಮಗಳ ಮೇಲೆ ಅವಲಂಬಿತರಾಗಿದ್ದೇವೆ. ನಾವು ಸಹ ಮನುಷ್ಯರು ಎಂದು ನೀವು ಅರ್ಥಮಾಡಿಕೊಳ್ಳಬೇಕೆಂದು ನಾವು ಬಯಸುತ್ತೇವೆ. ಅದಕ್ಕಾಗಿಯೇ ಏನನ್ನಾದರೂ ಬರೆಯುವ ಮೊದಲು, ಒಮ್ಮೆ ನಮ್ಮೊಂದಿಗೆ ದೃಢೀಕರಿಸಿ ಎಂದಿದ್ದಾರೆ.
ಅನೇಕ ಸಂದರ್ಭದಲ್ಲಿ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಮದುವೆ ವಿಚಾರದಲ್ಲಿ ಈ ಜೋಡಿ ಯಾವುದೇ ನಿರ್ಧಾರ ತೆಗೆದುಕೊಂಡಂತಿಲ್ಲ. ಇಬ್ಬರು ನಡುವೆ ವಯಸ್ಸಿನ ಅಂತರ ಇದೆ. ಮಲೈಕಾಗಿಂತ ಅರ್ಜುನ್ ಕಪೂರ್ ಅವರು 12 ವರ್ಷ ಚಿಕ್ಕವರು.