ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್ ನಂತರ ಇದೀಗ ಕಾಜೋಲ್ ಡೀಪ್ ಫೇಕ್ ವಿಡಿಯೋ ವೈರಲ್ !

ನಟಿ ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್ ನಂತರ ಇದೀಗ ಬಾಲಿವುಡ್ ನ ಹಿರಿಯ ನಟಿ ಕಾಜೋಲ್ ಅವರ ಡೀಪ್ ಫೇಕ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ನಟಿ ಕಾಜೋಲ್ ಡೀಪ್ ಫೇಕ್ ವಿಡಿಯೋ
ನಟಿ ಕಾಜೋಲ್ ಡೀಪ್ ಫೇಕ್ ವಿಡಿಯೋ

ಮುಂಬೈ: ನಟಿ ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್ ನಂತರ ಇದೀಗ ಬಾಲಿವುಡ್ ನ ಹಿರಿಯ ನಟಿ ಕಾಜೋಲ್ ಅವರ ಡೀಪ್ ಫೇಕ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವಿಡಿಯೋ ವೈರಲ್ ಆದಾಗ ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಸೇರಿದಂತೆ ಹಲವು ಗಣ್ಯರು ಖಂಡಿಸಿದ್ದರು. 

ಡಿಜಿಟಲ್ ಜಾಗದಲ್ಲಿ ಭಾರತೀಯರಿಗೆ ಸುರಕ್ಷತೆ ಮತ್ತು ವಿಶ್ವಾಸವನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಬದ್ಧವಾಗಿದೆ. ಡೀಪ್‌ಫೇಕ್‌ಗಳ ಸೃಷ್ಟಿ ಮತ್ತು ಚಲಾವಣೆಗೆ ಬಲವಾದ ದಂಡ - ₹ 1 ಲಕ್ಷ ದಂಡ ಮತ್ತು ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ರಾಜೀವ್ ಚಂದ್ರಶೇಖರ್ ಹೇಳಿಕೆಯಲ್ಲಿ ಉಲ್ಲೇಖಿಸಿದ್ದರು. ಆದಾಗ್ಯೂ, ಡೀಪ್ ಫೇಕ್ ವಿಡಿಯೋಗಳ ಹಾವಳಿ ಮಾತ್ರ ನಿಂತಿಲ್ಲ. 

ಇದೀಗ ಕಾಜೋಲ್ ಅವರು ಬಟ್ಟೆ ಬದಲಾಯಿಸುವ ರೀತಿಯ ವಿಡಿಯೋ ವೈರಲ್ ಆಗುತ್ತಿದೆ.  ಕ್ಯಾಮರಾ ಮುಂದೆ ಬಟ್ಟೆ ಬದಲಾಯಿಸುತ್ತಿರುವ ಮಹಿಳೆಯೊಬ್ಬರ ಮುಖಕ್ಕೆ ಕಾಜೋಲ್ ಅವರ  ಮುಖವನ್ನು ಎಡಿಟ್ ಮಾಡಲಾಗಿದೆ. ವೈರಲ್ ಆಗಿರುವ ವಿಡಿಯೋವನ್ನು ಫ್ಯಾಕ್ಟ್ ಚೆಕ್ ಮಾಡಿಸಿದ್ದು,ಅಸಲಿ ಮಹಿಳೆಯನ್ನು ಬ್ರಿಟಿಷ್ ಸೋಶಿಯಲ್ ಮೀಡಿಯಾ ಪ್ರಬಾವಿ ರೋಸಿ ಬ್ರೀನ್ ಎಂದು ಗುರುತಿಸಲಾಗಿದೆ.

ರೋಸಿ ಬ್ರೀನ್ ಅವರ 2023ರ ಜೂನ್ 5 ರಂದು ಗೆಟ್ ರೆಡಿ ವಿತ್ ಮಿ ಟ್ರೆಂಡ್ ನ ಭಾಗವಾಗಿ ಟಿಕ್ ಟಾಕ್ ನಲ್ಲಿ ತಮ್ಮ ವಿಡಿಯೋವನ್ನು ಹಂಚಿಕೊಂಡಿದ್ದರು. ಅದೇ ವಿಡಿಯೋಗೆ ಕೃತಕ ಬುದ್ಧಿಮತ್ತೆ (ಎಐ) ಬಳಸಿ ರೋಸಿಯ ಮುಖಕ್ಕೆ ಕಾಜೋಲ್ ಅವರ ಮುಖವನ್ನು ಎಡಿಟ್ ಮಾಡಲಾಗಿದ್ದು, ಕ್ಯಾಮರಾ ಮುಂದೆ ಬಟ್ಟೆ ಬದಲಾಯಿಸುವಂತೆ ಬಿಂಬಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com