ಕಾಶ್ಮೀರದಲ್ಲಿ 'ಜವಾನ್' ಅಬ್ಬರ; ಕಣಿವೆಯ ಏಕೈಕ ಮಲ್ಟಿಪ್ಲೆಕ್ಸ್ ವಾರಾಂತ್ಯದವರೆಗೂ ಹೌಸ್‌ಫುಲ್!

ಜಮ್ಮು ಮತ್ತು ಕಾಶ್ಮೀರದಲ್ಲಿ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ ಅಭಿಮಾನಿಗಳಿಗೆ "ಜವಾನ್"-ಜ್ವರ ಆವರಿಸಿದ್ದು, ಕಣಿವೆಯ ಏಕಾಂಗಿ ಮಲ್ಟಿಪ್ಲೆಕ್ಸ್ ವಾರಾಂತ್ಯದವರೆಗೂ ಹೌಸ್‌ಫುಲ್ ಆಗುತ್ತಿದೆ.
ಜವಾನ್ ಪೋಸ್ಟರ್ ಜೊತೆ ಅಭಿಮಾನಿ ಪೋಸ್
ಜವಾನ್ ಪೋಸ್ಟರ್ ಜೊತೆ ಅಭಿಮಾನಿ ಪೋಸ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ ಅಭಿಮಾನಿಗಳಿಗೆ "ಜವಾನ್"-ಜ್ವರ ಆವರಿಸಿದ್ದು, ಕಣಿವೆಯ ಏಕಾಂಗಿ ಮಲ್ಟಿಪ್ಲೆಕ್ಸ್ ವಾರಾಂತ್ಯದವರೆಗೂ ಹೌಸ್‌ಫುಲ್ ಆಗುತ್ತಿದೆ.

ಶಾರುಖ್ ಖಾನ್, ದೀಪಿಕಾ ಪಡುಕೋಣೆ, ನಯನತಾರಾ, ವಿಜಯ್ ಸೇತುಪತಿ ಹಾಗೂ ಸಂಜಯ್ ದತ್ ಅಭಿನಯದ ಜವಾನ್ ಚಿತ್ರ ಇಂದು ಅದ್ದೂರಿಯಾಗಿ ರಿಲೀಸ್ ಆಗಿದೆ. ಶಿವಪೋರಾ ಪ್ರದೇಶದ ಐನಾಕ್ಸ್ ಮಲ್ಟಿಪ್ಲೆಕ್ಸ್‌ನಲ್ಲಿ ಬೆಳಗ್ಗೆಯಿಂದಲೇ ಸೂಪರ್‌ಸ್ಟಾರ್ ಅವರ ಅಭಿಮಾನಿಗಳು, ಅವರಲ್ಲಿ ಹೆಚ್ಚಿನವರು ಯುವಕರು ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದರು.

ಮಲ್ಟಿಪ್ಲೆಕ್ಸ್ ಶುಕ್ರವಾರ ಐದು ಪ್ರದರ್ಶನಗಳನ್ನು ಹೊರತುಪಡಿಸಿ ಪ್ರತಿದಿನ ಆರು ಪ್ರದರ್ಶನಗಳನ್ನು ನಡೆಸುತ್ತಿದೆ.

ಶಾರುಖ್ ಖಾನ್ ಚಿತ್ರದ ಬಗ್ಗೆ ಯಾವಾಗಲೂ ಸಾಕಷ್ಟು ಉತ್ಸಾಹ ಇರುತ್ತದೆ. ಆರಂಭಿಕ ಪ್ರತಿಕ್ರಿಯೆ ('ಜವಾನ್' ಗೆ) ತುಂಬಾ ಚೆನ್ನಾಗಿದೆ. ಇದು ನಾಲ್ಕು ದಿನಗಳವರೆಗೆ (ಭಾನುವಾರದವರೆಗೆ) ಹೌಸ್‌ಫುಲ್ ಆಗಿದೆ. ನಂತರ ಅದು ಚಿತ್ರವನ್ನು ಮತ್ತು ಜನ ಅದನ್ನು ಎಷ್ಟು ಇಷ್ಟಪಡುತ್ತಾರೆ ಎಂಬುದನ್ನು ಅವಲಂಬಿಸಿರುತ್ತದೆ” ಎಂದು ಮಲ್ಟಿಪ್ಲೆಕ್ಸ್‌ ಮಾಲೀಕ ವಿಜಯ್ ಧಾರ್ ಅವರು ಹೇಳಿದ್ದಾರೆ.

ಶುಕ್ರವಾರ ಹೊರತುಪಡಿಸಿ ವಾರ ಪೂರ್ತಿ ಆರು ಶೋಗಳಿದ್ದು, ಶುಕ್ರವಾರ ಐದು ಶೋ ಮಾತ್ರ ಇದ್ದು, ಮಲ್ಟಿಪ್ಲೆಕ್ಸ್ ಭಾನುವಾರದವರೆಗೆ ಹೌಸ್ ಫುಲ್ ಆಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

"ಯುವಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ" ಎಂದು ಧಾರ್ ಹೇಳಿದ್ದಾರೆ.

ಮೊದಲ ಪ್ರದರ್ಶನವನ್ನು ವೀಕ್ಷಿಸಿದ ನಂತರ ಮಾತನಾಡಿದ ಪುಲ್ವಾಮಾದ ಫೈಜಾನ್ ಯೂಸುಫ್ ಅವರು, ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಎಲ್ಲಾ ದಾಖಲೆಗಳನ್ನು ಮುರಿಯುತ್ತದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com