ಮುಂಬೈ: ರಾಜ್ ಕುಮಾರ್ ರಾವ್ ಹಾಗೂ ಶ್ರದ್ಧಾ ಕಪೂರ್ ನಟನೆಯ ಹಾರರ್ ಕಾಮಿಡಿ ಸಿನಿಮಾ ಸ್ತ್ರೀ-2 ಬಾಕ್ಸ್ ಆಫೀಸ್ ಸಂಗ್ರಹ 500 ಕೋಟಿ ರೂಪಾಯಿ ದಾಟಿದೆ.
ರಾಜ್ ಕುಮಾರ್ ರಾವ್ ಹಾಗೂ ಶ್ರದ್ಧಾ ಕಪೂರ್ ನಟನೆಯ ಹಾರರ್ ಕಾಮಿಡಿ ಸಿನಿಮಾ ಸ್ತ್ರೀ-2 ಬಾಕ್ಸ್ ಆಫೀಸ್ ಸಂಗ್ರಹ 500 ಕೋಟಿ ರೂಪಾಯಿ ದಾಟಿದೆ.
ಸ್ತ್ರೀ ಸಿನಿಮಾ ಇತಿಹಾಸದಲ್ಲೇ 2 ನೇ ಶನಿವಾರದಂದು ಐತಿಹಾಸಿಕ, ಗರಿಷ್ಠ ಮೊತ್ತದ ಸಂಗ್ರಹ ಕಂಡಿದೆ. ನಿಮ್ಮ ಪ್ರೀತಿ ಹಾಗೂ ಬೆಂಬಲಕ್ಕೆ ಧನ್ಯವಾದಗಳು, ಈಗಲೇ ಟಿಕೆಟ್ ಗಳನ್ನು ಬುಕ್ ಮಾಡಿ ಎಂದು ಸಿನಿಮಾ ತಂಡದ ಪೋಸ್ಟ್ ಹೇಳಿದೆ.
ಮ್ಯಾಡ್ ಡಾಕ್ಸ್ ಸಿನಿಮಾ ಭಾರತದಲ್ಲಿ 426 ಕೋಟಿ ರೂಪಾಯಿ ಗಳಿಸಿದ್ದು, ವಿದೇಶಗಳಲ್ಲಿ ಒಟ್ಟು 78.5 ಕೋಟಿ ಗಳಿಸಿದ್ದು ಒಟ್ಟು 505 ಕೋಟಿ ರೂಪಾಯಿ ಕಲೆಕ್ಷನ್ ಕಂಡಿದೆ ಎಂದು ಹೇಳಿದೆ. ದೇಶೀಯ ನಿವ್ವಳ ಬಾಕ್ಸ್ ಆಫೀಸ್ ಸಂಗ್ರಹಗಳು 361 ಕೋಟಿ ರೂಪಾಯಿಗಳಾಗಿವೆ ಎಂದು ತಯಾರಕರು ಸೇರಿಸಿದ್ದಾರೆ.
ಆಗಸ್ಟ್ 15 ರಂದು ಬಿಡುಗಡೆಯಾದ ಸ್ತ್ರೀ 2, ಶಾರ್ವರಿ ಮತ್ತು ಜಾನ್ ಅಬ್ರಹಾಂ ನಟಿಸಿದ ನಿಖಿಲ್ ಅಡ್ವಾಣಿಯವರ ವೇದಾ ಮತ್ತು ಅಕ್ಷಯ್ ಕುಮಾರ್ ಅವರ ಮುದಸ್ಸರ್ ಅಜೀಜ್ ಅವರ ಖೇಲ್ ಖೇಲ್ ಮೇ ಜೊತೆಗೆ ಗಲ್ಲಾಪೆಟ್ಟಿಗೆಯಲ್ಲಿ ಪೈಪೋಟಿ ಉಂಟಾಯಿತು. ಆದರೆ ಗಲ್ಲಾಪೆಟ್ಟಿಗೆಯಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರವಾಗಿ ಸ್ತ್ರೀ ಹೊರಹೊಮ್ಮಿದೆ.
Advertisement