ಬಾಲಿವುಡ್ ಹಿನ್ನೆಲೆ ಗಾಯಕಿ ಅಲ್ಕಾ ಯಾಗ್ನಿಕ್‌ಗೆ ಹಠಾತ್‌ ಕಿವುಡುತನ; ಅಪರೂಪದ ಶ್ರವಣ ದೋಷ

ಬಾಲಿವುಡ್ ಖ್ಯಾತ ಹಿನ್ನೆಲೆ ಗಾಯಕಿ ಅಲ್ಕಾ ಯಾಗ್ನಿಕ್ ಅವರು ಹಠಾತ್‌ ಕಿವುಡುತನಕ್ಕೆ ಒಳಗಾಗಿದ್ದು, ತಾವು ಅಪರೂಪದ ಶ್ರವಣ ದೋಷದಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಅಲ್ಕಾ ಯಾಗ್ನಿಕ್‌
ಅಲ್ಕಾ ಯಾಗ್ನಿಕ್‌

ಮುಂಬೈ: ಸಂಗೀತವನ್ನೇ ಉಸಿರಾಗಿಸಿಕೊಂಡಿರುವ ಬಾಲಿವುಡ್ ಖ್ಯಾತ ಹಿನ್ನೆಲೆ ಗಾಯಕಿ ಅಲ್ಕಾ ಯಾಗ್ನಿಕ್ ಅವರು ಹಠಾತ್‌ ಕಿವುಡುತನಕ್ಕೆ ಒಳಗಾಗಿದ್ದು, ತಾವು ಅಪರೂಪದ ಶ್ರವಣ ದೋಷದಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ಈ ಕುರಿತು ಸೋಮವಾರ ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಅಲ್ಕಾ ಅವರು, ಇತ್ತೀಚೆಗೆ ಯಾಕೆ ನಾನು ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ ಎಂದು ಕೇಳುತ್ತಿದ್ದ ಸ್ನೇಹಿತರು ಮತ್ತು ಹಿತೈಷಿಗಳಿಗಾಗಿ ಈ ವಿಷಯ ಹೇಳುತ್ತಿದ್ದೇನೆ. ನನ್ನೆಲ್ಲ ಅಭಿಮಾನಿಗಳು, ಸ್ನೇಹಿತರು, ಫಾಲೋವರ್ಸ್​ ಮತ್ತು ಹಿತೈಷಿಗಳಿಗೆ ಈ ವಿಷಯ ತಿಳಿಸುತ್ತಿದ್ದೇನೆ. ಕೆಲವು ವಾರಗಳ ಹಿಂದೆ ನಾನು ವಿಮಾನದಿಂದ ಹೊರಬಂದಾಗ ನನಗೆ ಏನೂ ಕೇಳಿಸುತ್ತಿಲ್ಲ ಎಂಬುದು ತಿಳಿಯಿತು. ಬಳಿಕ ವೈದ್ಯರ ಬಳಿ ತಪಾಸಣೆ ಮಾಡಿಸಿದಾಗ ವೈರಾಣು ಸೋಂಕಿನಿಂದ ಕಿವಿಯಲ್ಲಿರುವ ನರಕೋಶಗಳಿಗೆ ತೊಂದರೆಯಾಗಿ ಇದ್ದಕ್ಕಿದ್ದಂತೆ ಕಿವುಡುತನ ಕಾಣಿಸಿಕೊಂಡಿದೆ ಎಂದು ತಿಳಿಸಿದ್ದಾರೆ.

ನನಗೆ ತಿಳಿಯದಂತೆಯೇ ಈ ರೀತಿ ಆಗಿದೆ. ನಾನು ಇದರಿಂದ ಗುಣಮುಖವಾಗಲು ಪ್ರಯತ್ನಿಸುತ್ತಿದ್ದೇನೆ. ಈ ಸಂದರ್ಭದಲ್ಲಿ ನೀವು ನನಗಾಗಿ ಪ್ರಾರ್ಥಿಸಿ. ಹೆಡ್​ಫೋನ್​ ಅಥವಾ ಇತರೆ ಸಾಧನಗಳ ಬಳಕೆ ಮತ್ತು ಜೋರಾದ ಶಬ್ದಗಳಿಂದ ದೂರವಿರಿ ಎಂದು ನನ್ನ ಅಭಿಮಾನಿಗಳು ಮತ್ತು ಯುವಜನರನ್ನು ಕೇಳಿಕೊಳ್ಳುತ್ತೇನೆ ಎಂದಿದ್ದಾರೆ.

ಅಲ್ಕಾ ಯಾಗ್ನಿಕ್‌
ವೈರಲ್ ಜ್ವರದ ಜೊತೆ ಮುಂಬರುವ ದಿನಗಳಲ್ಲಿ ಕಿವಿ ಸೋಂಕಿನ ಪ್ರಕರಣ ಕೂಡ ಹೆಚ್ಚುವ ಸಾಧ್ಯತೆ: ವೈದ್ಯರು ಹೇಳೋದೇನು?

ನನ್ನ ವೃತ್ತಿ ಜೀವನದಲ್ಲಾದ ಆರೋಗ್ಯ ಸಮಸ್ಯೆಗಳನ್ನು ಮುಂದೊಂದು ದಿನ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ನಿಮ್ಮೆಲ್ಲರ ಪ್ರೀತಿ, ಬೆಂಬಲದಿಂದ ಗುಣಮುಖವಾಗಿ ಮತ್ತೆ ಬರುತ್ತೇನೆ ಎಂಬ ನಂಬಿಕೆ ನನಗಿದೆ. ಈ ಕಷ್ಟದ ಸಂದರ್ಭದಲ್ಲಿ ನನ್ನನ್ನು ಅರ್ಥ ಮಾಡಿಕೊಳ್ಳುವ ನೀವು ಮತ್ತು ನಿಮ್ಮ ಬೆಂಬಲ ನನಗೆ ಅತಿ ಮುಖ್ಯ’ ಎಂದು ಅಲ್ಕಾ ಯಾಗ್ನಿಕ್​ ಅವರು ಇನ್‌ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.

58 ವರ್ಷದ ಅಲ್ಕಾ ಯಾಗ್ನಿಕ್ ಅವರು ಎರಡು ಬಾರಿ ರಾಷ್ಟ್ರ ಪ್ರಶಸ್ತಿ, 7 ಬಾರಿ ಫಿಲ್ಮ್​ ಫೇರ್​ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳಿಗೆ ಪಾತ್ರರಾಗಿದ್ದಾರೆ. ಕೋಟ್ಯಂತರ ಅಭಿಮಾನಿಗಳನ್ನು ಅವರು ಹೊಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com