
ಮುಂಬೈ: ಪ್ರತಿಷ್ಠಿತ ಕ್ಯಾನ್ಸೆ ಚಲನಚಿತ್ರೋತ್ಸವಕ್ಕೆ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ನಿಗದಿತ ಅತಿಥಿ. ತಮ್ಮ ಅದ್ವಿತೀಯ ಪ್ರಸ್ತುತತೆ ಶೈಲಿಯಿಂದ ಕ್ಯಾಮರಾ ಕಣ್ಣುಗಳು ಮತ್ತು ಕ್ಯಾನ್ಸೆ ಚಲಚಿತ್ಸೋತ್ಸವದಲ್ಲಿ ಭಾಗವಹಿಸುವವರ ಗಮನವನ್ನು ಸೆಳೆಯುತ್ತಾರೆ.
ಕ್ಯಾನ್ಸ್ ಚಲನಚಿತ್ರೋತ್ಸವ ನಡೆಯುತ್ತಿದ್ದು ದೇವದಾಸ್ ನಟಿ ಐಶ್ವರ್ಯಾ ಕಳೆದ ರಾತ್ರಿ ತಮ್ಮ ಪುತ್ರಿ ಆರಾಧ್ಯ ಜೊತೆಗೆ ಹೊರಟಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ವಿಮಾನಕ್ಕೆ ಹತ್ತುವ ಮೊದಲು ಕ್ಯಾಮರಾ ಕಂಗಳಿಗೆ ನಗುನಗುತ್ತಾ ಫೋಸ್ ಕೊಟ್ಟಿದ್ದಾರೆ. ಆದರೆ ಇಲ್ಲಿ ಗಮನ ಸೆಳೆದಿದ್ದು ಅವರ ಕೈ.
ಐಶ್ವರ್ಯಾ ಅವರ ಬಲಗೈ ಫ್ರಾಕ್ಚರ್ ಆಗಿದ್ದು ಬ್ಯಾಂಡೇಜ್ ಕಟ್ಟಿಕೊಂಡು ಚಲನಚಿತ್ರೋತ್ಸವಕ್ಕೆ ಹೊರಟಿದ್ದಾರೆ. ಅವರ ಕೈ ನೋವಿನ ಬಗ್ಗೆ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅನೇಕ ರೀತಿ ಕಮೆಂಟ್ ಮಾಡುತ್ತಿದ್ದಾರೆ.
ಐಶ್ವರ್ಯಾ ರೈ ಪ್ರತಿವರ್ಷ ಕ್ಯಾನ್ಸೆ ಚಲನಚಿತ್ರೋತ್ಸವವನ್ನು ತಪ್ಪಿಸುವುದಿಲ್ಲ. ಲೊ ಓರಿಯಲ್ ಪ್ಯಾರಿಸ್ ನ ರಾಯಭಾರಿಯಾಗಿ ಚಲನಚಿತ್ಸೋತ್ಸವದಲ್ಲಿ ಭಾಗವಹಿಸುತ್ತಿದ್ದಾರೆ.
20022ರಲ್ಲಿ ಆರಂಭ: ಐಶ್ವರ್ಯಾ ಕ್ಯಾನ್ಸ್ ಚಲನಚಿತ್ಸೋತ್ಸವದಲ್ಲಿ ಮೊದಲ ಬಾರಿಗೆ ಭಾಗವಹಿಸಿದ್ದು 2002ರಲ್ಲಿ. ಅದು ಸೂಪರ್ ಸ್ಟಾರ್ ಶಾರೂಕ್ ಖಾನ್ ಮತ್ತು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಜೊತೆಗೆ ದೇವದಾಸ್ ಚಿತ್ರದ ಪ್ರೀಮಿಯರ್ ಶೋನಲ್ಲಿ. ಹಳದಿ ಸೀರೆಯಲ್ಲಿ ಕ್ಯಾನ್ಸ್ ರೆಡ್ ಕಾರ್ಪೆಟ್ ನಲ್ಲಿ ಅಂದು ಐಶ್ವರ್ಯಾ ಹೆಜ್ಜೆ ಹಾಕಿದ್ದನ್ನು ಅಭಿಮಾನಿಗಳು ಇಂದಿಗೂ ನೆನಪಿಸುತ್ತಾರೆ.
ಚೊಚ್ಚಲ ಬಾರಿಗೆ ಹೆಜ್ಜೆ ಹಾಕಿದ ನಂತರ ಕ್ಯಾನ್ಸ್ ಜ್ಯೂರಿಯ ಭಾಗವಾದ ಮೊಟ್ಟಮೊದಲ ನಟಿ ಐಶ್ವರ್ಯಾ. ನಂತರ ಪ್ರತಿವರ್ಷ ಭಾಗವಹಿಸುತ್ತಾ ಕ್ಯಾನ್ಸ್ ಕ್ವೀನ್ ಎನಿಸಿಕೊಂಡರು. 2002ರ ನಂತರ ನಿಗದಿತವಾಗಿ ಭಾಗವಹಿಸುತ್ತಾ ಬಂದಿದ್ದಾರೆ.
Advertisement