ರಿವಾಲ್ವರ್ ನಿಂದ ಗುಂಡು ತಗುಲಿಸಿಕೊಂಡ ನಟ ಗೋವಿಂದ ಆಸ್ಪತ್ರೆಯಿಂದ ಆಡಿಯೊ ಸಂದೇಶ
ಮುಂಬೈ: ತಮ್ಮ ನಿವಾಸದಲ್ಲಿ ಆಕಸ್ಮಿಕವಾಗಿ ರಿವಾಲ್ವರ್ ಗುಂಡು ತಗುಲಿ ಆಸ್ಪತ್ರೆ ಸೇರಿದ್ದ ಬಾಲಿವುಡ್ ನಟ ಗೋವಿಂದ ಆಸ್ಪತ್ರೆಯ ಹಾಸಿಗೆಯಿಂದಲೇ ಅಭಿಮಾನಿಗಳಿಗೆ ಆಡಿಯೊ ಸಂದೇಶ ಕಳುಹಿಸಿದ್ದಾರೆ.
ನನ್ನ ಮನೆಯವರು, ಪೋಷಕರು, ಅಭಿಮಾನಿಗಳು ಮತ್ತು ಗುರುಗುಳ ಆಶೀರ್ವಾದ ನನ್ನನ್ನು ಇಂದು ಜೀವಂತ ಉಳಿಸಿದೆ. ರಿವಾಲ್ವರ್ ಬುಲೆಟ್ ನಿಂದ ನನ್ನ ಕಾಲಿಗೆ ಗಾಯವಾಗಿದೆ. ಅದನ್ನು ವೈದ್ಯರು ಹೊರತೆಗೆದಿದ್ದಾರೆ. ಇಲ್ಲಿನ ವೈದ್ಯರಿಗೆ ಮತ್ತು ನಿಮ್ಮ ಪ್ರಾರ್ಥನೆಗೆ ಧನ್ಯವಾದಗಳು ಎಂದು ಅವರು ಆಡಿಯೊ ಕ್ಲಿಪ್‌ನಲ್ಲಿ ಹೇಳಿದ್ದಾರೆ.
ಅಪಘಾತದ ನಂತರ ಆಸ್ಪತ್ರೆಗೆ ದಾಖಲಾಗಿರುವ ನಟ ಅವರು ಅಪಾಯದಿಂದ ಪಾರಾಗಿದ್ದಾರೆ, ಸದ್ಯ ಬಿಡುಗಡೆಗೊಂಡು ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮುಂಬೈ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗೋವಿಂದ ಅವರ ಮ್ಯಾನೇಜರ್ ಶಶಿ ಸಿನ್ಹಾ ಅವರು ಮಾಧ್ಯಮಗಳಿಗೆ ವಿವರ ನೀಡಿ, ಗೋವಿಂದ ಅವರು ತಮ್ಮ ಮನೆಯಿಂದ ಬೆಳಿಗ್ಗೆ 4.45 ಕ್ಕೆ ಎದ್ದು ಕೋಲ್ಕತ್ತಾಗೆ ತೆರಳಲು ಬೆಳಗ್ಗೆ 6 ಗಂಟೆಗೆ ವಿಮಾನ ನಿಲ್ದಾಣಕ್ಕೆ ಹೊರಡಲು ರೆಡಿಯಾಗುತ್ತಿದ್ದ ವೇಳೆ ಮನೆಯ ಕಬೋರ್ಡ್ ನಲ್ಲಿ ಪರವಾನಗಿ ಪಡೆದ ರಿವಾಲ್ವರ್ ಆಕಸ್ಮಿಕವಾಗಿ ಕಾಲಿಗೆ ತಗುಲಿತು. ಬಂದೂಕು ತಪ್ಪಿ ಗುಂಡು ಅವರ ಕಾಲಿಗೆ ತಗುಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡ ನಟನನ್ನು ಚಿಕಿತ್ಸೆಗಾಗಿ ಸಮೀಪದ ಕ್ರಿಟಿ ಕೇರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಬಗ್ಗೆ ಯಾರೂ ದೂರು ನೀಡಿಲ್ಲ, ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ