
ಮುಂಬೈ: ಬಾಲಿವುಡ್ ನ ಐತಿಹಾಸಿಕ ಸಿನಿಮಾ ಕರಣ್, ಅರ್ಜುನ್ ಮರುಬಿಡುಗಡೆಗೆ ಸಿದ್ಧಗೊಂಡಿದೆ.
ಸಲ್ಮಾನ್ ಖಾನ್, ಶಾರೂಖಾನ್ ನಟಿಸಿರುವ ಈ ಚಿತ್ರ 1995 ರಲ್ಲಿ ತೆರೆ ಕಂಡಿತ್ತು. ಈಗ 2024 ರ ನವೆಂಬರ್ 22 ರಂದು ಮರು ಬಿಡುಗಡೆಯಾಗುತ್ತಿದೆ.
ಕರಣ್, ಅರ್ಜುನ್ ಸಿನಿಮಾವನ್ನು ರಾಕೇಶ್ ರೋಶನ್ ನಿರ್ದೇಶಿಸಿದ್ದರು. ರಾಖೀ, ಕಾಜೋಲ್, ಮಮತಾ ಕುಲಕರ್ಣಿ ಹಾಗೂ ಅಮರೀಶ್ ಪುರಿ ಸಿನಿಮಾದ ಮುಂಚೂಣಿ ತಾರಾಗಣದಲ್ಲಿದ್ದರು.
ಭಾರತದಾದ್ಯಂತ ಸಿಂಗಲ್ ಸ್ಕ್ರೀನ್‌ಗಳು ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ಚಿತ್ರ ತೆರೆ ಕಾಣಲಿದ್ದು, ಏಕಕಾಲದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲೂ ಬಿಡುಗಡೆಯಾಗಲಿದೆ. ಕರಣ್ ಅರ್ಜುನ್ ಬಾಲಿವುಡ್‌ನ ಅತ್ಯಂತ ಜನಪ್ರಿಯ ಚಲನಚಿತ್ರಗಳಲ್ಲಿ ಒಂದಾಗಿದೆ. ಚಿತ್ರದ ಹೊಸ ಟೀಸರ್ ನ್ನು ಹಂಚಿಕೊಂಡಿರುವ ಸಲ್ಮಾನ್ ಖಾನ್ ಹಂಚಿಕೊಂಡಿದ್ದಾರೆ.
ಸಲ್ಮಾನ್ ಪೋಸ್ಟ್ ಮಾಡಿದ 1 ನಿಮಿಷದ ಟೀಸರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನಪ್ರಿಯತೆ ಗಳಿಸಿದೆ.
ನವೆಂಬರ್ 22 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ನನ್ನ ಕರಣ್ ಅರ್ಜುನ್ ಮರಳುತ್ತಾರೆ ಎಂದು ರಾಖಿ ಜೀ ಚಿತ್ರದಲ್ಲಿ ಹೇಳಿರುವುದು ಸರಿಯಾಗಿದೆ ಎಂದು ಸಲ್ಮಾನ್ ಖಾನ್ ಟೀಸರ್ ಗೆ ಶೀರ್ಷಿಕೆ ನೀಡಿದ್ದಾರೆ.
Advertisement