
ಮುಂಬಯಿ: ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ತಮ್ಮ ಗಾಯನದ ಮೂಲಕವೇ ಮನೆ ಮಾತಗಿರುವ ಸೋನು ನಿಗಮ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೋನು ನಿಗಮ್ ಅವರು ಇದೀಗ ಗಂಭೀರ ಆರೋಗ್ಯ ಸಮಸ್ಯೆಗೆ ಗುರಿಯಾಗಿದ್ದಾರೆ. ದೊಡ್ಡ ಪರ್ಫಾರ್ಮೆನ್ಸ್ ಶೋನಲ್ಲಿ ಅವರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಅವರೇ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋದ ಮೂಲಕ ಅವರಿಗೆ ಎದುರಾದ ಆರೋಗ್ಯ ಸಮಸ್ಯೆಯ ಬಗ್ಗೆ ಹೇಳಿಕೊಂಡಿದ್ದಾರೆ.
ಗಾಯಕ ಸೋನು ನಿಗಮ್ ಅವರಿಗೆ ತೀವ್ರ ಬೆನ್ನು ಹುರಿ ನೋವು ಕಾಣಿಸಿಕೊಂಡಿದೆ. ಅವರು ನಡೆದಾಡಲು ಸಹ ಕಷ್ಟಪಟ್ಟಿದ್ದಾರೆ. ಸೋನು ನಿಗಮ್ ಅವರಿಗೆ ಸ್ಥಳೀಯರು ಹಾಗೂ ಸಹಾಯಕ ಸಿಬ್ಬಂದಿ ನೆರವಾಗಿದ್ದಾರೆ. ಶೋನಲ್ಲಿ ಹಾಡು ಹಾಡುವಾಗಲೇ ಅವರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ.
ಹಾಡುವಾಗ ಯಾರೋ ಬೆನ್ನಿಗೆ ಸೂಜಿಯಿಂದ ಚುಚ್ಚಿದ ಅನುಭವ ಆಗಿರುವುದಾಗಿಯೂ ಈಗ ಚೇತರಿಸಿಕೊಳ್ಳುತ್ತಿರುವುದಾಗಿ ಅವರು ಹೇಳಿದ್ದಾರೆ. ಅತಿಯಾದ ಬೆನ್ನು ನೋವಿನಿಂದ ಅವರು ಶೋ ಸ್ಟೇಜ್‌ನ ಹಿಂಭಾಗದಲ್ಲಿ ನಡೆಯುವುದಕ್ಕೂ ಕಷ್ಟಪಟ್ಟಿರುವ ವಿಡಿಯೋ ವೈರಲ್ ಆಗಿದೆ.
Advertisement