
ಅಮಿರ್ ಖಾನ್ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ. ಅಮಿರ್ 59 ನೇ ವಯಸ್ಸಿನಲ್ಲಿ ಮೂರನೇ ಮದುವೆ ಆಗಲಿದ್ದಾರೆ ಎಂಬ ವದಂತಿಗಳು ಕೇಳಿಬರುತ್ತಿವೆ. ಬೆಂಗಳೂರಿನ ನಿಗೂಢ ಹುಡುಗಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಪಿಂಕ್‌ವಿಲ್ಲಾ ವರದಿ ಪ್ರಕಾರ, ಅಮಿರ್ ಖಾನ್ ಡೇಟ್ ಮಾಡುತ್ತಿರುವ ಬೆಂಗಳೂರಿನ ಯುವತಿಗೆ ಬಾಲಿವುಡ್‌ನೊಂದಿಗೆ ಯಾವುದೇ ಸಂಬಂಧವಿಲ್ಲ. ಈ ಹಿಂದೆ ಅಮಿರ್ ಈ ಯುವತಿಯನ್ನು ತಮ್ಮ ಕುಟುಂಬ ಸದಸ್ಯರಿಗೆ ಪರಿಚಯಿಸಿದ್ದಾರೆ.
ಪಿಂಕ್ ವಿಲ್ಲಾ ವರದಿಯ ಪ್ರಕಾರ ಅಮೀರ್ ಖಾನ್ ಬೆಂಗಳೂರಿನ ಗೌರಿ ಎಂಬುವರ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ವಿಶೇಷ ಅಂದರೆ ಗೌರಿ ಮತ್ತು ಬಾಲಿವುಡ್ ನಡುವೆ ಯಾವುದೇ ನಂಟಿಲ್ಲ. ಕೇವಲ ಬಾಲಿವುಡ್ ಮಾತ್ರ ಅಲ್ಲ ಬೇರೆ ಯಾವ ಚಿತ್ರರಂಗಕ್ಕೆ ಗೌರಿ ಸಂಬಂಧಿಸಿದವರು ಕೂಡ ಅಲ್ಲ. ಆದರೂ. ಅಮೀರ್ ಖಾನ್ ಮತ್ತು ಗೌರಿಯ ನಡುವೆ ಪ್ರೇಮಾಂಕುರವಾಗಿದೆ. ಹೀಗಾಗಿಯೇ ಇದ್ಹೇಗೆ ಸಾಧ್ಯ ಎಂದು ಯೋಚನೆಯನ್ನು ಮಾಡುತ್ತಿರುವ ಅನೇಕರು ಗೌರಿ ಮತ್ತು ಅಮೀರ್ ಖಾನ್ ಮೊದಲು ಭೇಟಿಯಾಗಿದ್ದು ಎಲ್ಲಿ ಮತ್ತು ಹೇಗೆ ಎನ್ನುವ ವಿಚಾರವನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ.
ಅಮಿರ್ ಡೇಟಿಂಗ್ ಮಾಡುತ್ತಿರುವ ಈ ನಿಗೂಢ ಹುಡುಗಿ ಬೆಂಗಳೂರಿನವರು. ನಾವು ಅವರ ಗೌಪ್ಯತೆಯನ್ನು ಗೌರವಿಸಬೇಕು ಮತ್ತು ವೈಯಕ್ತಿಕ ವಿವರಗಳನ್ನು ಬಹಿರಂಗಪಡಿಸಬಾರದು ಎಂದು ಅಮಿರ್ ಖಾನ್ ಗೆ ಹತ್ತಿರವಿರುವ ಮೂಲವೊಂದು ಹೇಳಿದೆ. ಆದರೆ ಅಮಿರ್ ಇತ್ತೀಚೆಗೆ ಆ ಮಹಿಳೆಯನ್ನು ಅವರ ಇಡೀ ಕುಟುಂಬಕ್ಕೆ ಪರಿಚಯಿಸಿದ್ದಾರೆ ಎಂದು ನಾನು ನಿಮಗೆ ಹೇಳಬಲ್ಲೆ ಎಂದು ಅಮಿರ್ ಖಾನ್ ಗೆ ಹತ್ತಿರವಿರುವ ಮೂಲವೊಂದು ಹೇಳಿದೆ ಎನ್ನಲಾಗ್ತಿದೆ.
ಅಮೀರ್ ಖಾನ್‌ಗೆ ಈಗ 59ರ ಹರೆಯ. ಈಗಾಗಲೇ ರೀನಾ ದತ್ತ ಜೊತೆ ಹದಿನಾರು ವರ್ಷ ಮತ್ತು ಕಿರಣ್ ರಾವ್ ಅವರ ಜೊತೆ ಕೂಡ ಹದಿನಾರು ವರ್ಷ ಸಂಸಾರದ ಸುಖ ದುಃಖಗಳನ್ನು ಅಮೀರ್ ಖಾನ್ ಅನುಭವಿಸಿದ್ದಾರೆ. ಇನ್ನು ಮೊದಲ ಪತ್ನಿ ರೀನಾ ಅವರಿಂದ ಜುನೈದ್ ಮತ್ತು ಇರಾ ಖಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಇನ್ನು ಕಿರಣ್ ರಾವ್ ಅವರಿಂದ ಆಜಾದ್ ರಾವ್ ಖಾನ್ ಎಂಬ ಮಗ ಅಮೀರ್ ಖಾನ್‌ಗೆ ಇದ್ದಾನೆ.
Advertisement