
ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಜೋನಾಸ್ ಅವರ ತಮ್ಮ ಸಿದ್ದಾರ್ಥ್ ಹಾಗೂ ನಟಿ ನೀಲಂ ಉಪಾಧ್ಯಾಯ ಶುಕ್ರವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಜುಹುವಿನ ಆರ್ಮಿ ಕ್ಲಬ್‌ನಲ್ಲಿ ಕುಟುಂಬಸ್ಥರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ವಿವಾಹ ನಡೆಯಿತು. ಸಂಜೆ 4-30 ಮದುವೆ ದಿಬ್ಬಣ ಹೊರಡುವುದರೊಂದಿಗೆ ವಿವಾಹ ಮಹೋತ್ಸವ ಆರಂಭವಾಯಿತು. ಪ್ರಿಯಾಂಕಾ ಮತ್ತು ನಿಕ್ ಸೇರಿದಂತೆ ಕುಟುಂಬಸ್ಥರು ಸಂಗೀತದೊಂದಿಗೆ ನೃತ್ಯ ಪ್ರದರ್ಶನ ಮೂಲಕ ಸಂಭ್ರಮಿಸಿದರು.
ಪ್ರಿಯಾಂಕಾ ಅವರ ಸೋದರ ಸಂಬಂಧಿ ಪರಿಣಿತಿ ಚೋಪ್ರಾ, ಅವರ ರಾಜಕಾರಣಿ ಪತಿ ರಾಘವ್ ಚಡ್ಡಾ ಮತ್ತು ನೀತಾ ಅಂಬಾನಿ , ನಿಕ್ ಅವರ ಪೋಷಕರಾದ ಡೆನಿಸ್ ಮಿಲ್ಲರ್-ಜೋನಸ್ ಮತ್ತು ಕೆವಿನ್ ಜೋನಾಸ್ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಸಂಜೆ 6-6:30 ರ ಸುಮಾರಿಗೆ ಮದುವೆ ಪ್ರಾರಂಭವಾಯಿತು. ತದನಂತರ ಮುಂಬೈನ ಓಶಿವಾರಾ ಪ್ರದೇಶದ ಬಟರ್‌ಫ್ಲೈ ಹೈ ರೆಸ್ಟೊರೆಂಟ್‌ನಲ್ಲಿ ಪಾರ್ಟಿ ನಡೆಯುವುದಾಗಿ ಮೂಲಗಳು ತಿಳಿಸಿವೆ.
ಸಿದ್ಧಾರ್ಥ್ ಇನ್ಸ್ಟಾಗ್ರಾಮ್ ಪ್ರೊಫೈಲ್ ನಲ್ಲಿ ನಿರ್ಮಾಪಕರು ಎಂದು ಹೇಳಿಕೊಂಡಿದ್ದಾರೆ. ಇನ್ನೂ ನೀಲಂ Mr.7, Action 3D, Unnodu Oru Naal, ಮತ್ತು Om Shanthi Om ನಂತಹ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
Advertisement