'ಈ ರೀತಿ ಸುಳ್ಳು ಸುದ್ದಿ ಹಬ್ಬಿಸಲು ನಾಚಿಕೆಯಾಗಬೇಕು ನಿಮಗೆ': ನಟಿ ಪ್ರೀತಿ ಝಿಂಟಾ ಆಕ್ರೋಶಕ್ಕೆ ಕೇರಳ ಕಾಂಗ್ರೆಸ್ ನ ಪ್ರತಿಕ್ರಿಯೆಯೇನು?

ಪಕ್ಷವು ಸುಳ್ಳು ಮತ್ತು ಕೀಳುಮಟ್ಟದ ಆರೋಪದಲ್ಲಿ ತೊಡಗಿದೆ. ಸಾಲದ ಮೊತ್ತವನ್ನು 10 ವರ್ಷಗಳ ಹಿಂದೆಯೇ ಪೂರ್ಣವಾಗಿ ಮರುಪಾವತಿಸಲಾಗಿತ್ತು ಎಂದು ಇಂದು ಸೋಷಿಯಲ್ ಮೀಡಿಯಾದಲ್ಲಿ ಪ್ರೀತಿ ಝಿಂಟಾ ವಿವರವಾಗಿ ಬರೆದುಕೊಂಡಿದ್ದಾರೆ.
Preity Zinta
ಪ್ರೀತಿ ಝಿಂಟಾ
Updated on

ನವದೆಹಲಿ: ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿರುವ ನ್ಯೂ ಇಂಡಿಯಾ ಕೋ ಆಪರೇಟಿವ್ ಬ್ಯಾಂಕಿನಿಂದ ಪಡೆದ 18 ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡಲು ತನ್ನ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಬಿಜೆಪಿಗೆ ನೀಡಿದ್ದರು ಎಂದು ಆರೋಪಿಸಿದ ಕೇರಳ ಕಾಂಗ್ರೆಸ್ ಘಟಕವನ್ನು ಬಾಲಿವುಡ್ ನಟಿ ಪ್ರೀತಿ ಝಿಂಟಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಪಕ್ಷವು ಸುಳ್ಳು ಮತ್ತು ಕೀಳುಮಟ್ಟದ ಆರೋಪದಲ್ಲಿ ತೊಡಗಿದೆ. ಸಾಲದ ಮೊತ್ತವನ್ನು 10 ವರ್ಷಗಳ ಹಿಂದೆಯೇ ಪೂರ್ಣವಾಗಿ ಮರುಪಾವತಿಸಲಾಗಿತ್ತು ಎಂದು ಇಂದು ಸೋಷಿಯಲ್ ಮೀಡಿಯಾದಲ್ಲಿ ಪ್ರೀತಿ ಝಿಂಟಾ ವಿವರವಾಗಿ ಬರೆದುಕೊಂಡಿದ್ದಾರೆ.

ಏನಿದು ಆರೋಪ?

ನಿನ್ನೆ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಕೇರಳ ಕಾಂಗ್ರೆಸ್‌, ಸುದ್ದಿವಾಹಿನಿಯೊಂದರ ಪೋಸ್ಟ್ ನ್ನು ಹಂಚಿಕೊಂಡು, ಪ್ರೀತಿ ಝಿಂಟಾ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಬಿಜೆಪಿಗೆ ನೀಡಿ 18 ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡಿಸಿಕೊಂಡಿದ್ದರು. ಕಳೆದ ವಾರ ಬ್ಯಾಂಕ್ ಆರ್ಥಿಕವಾಗಿ ತೀವ್ರ ನಷ್ಟ ಹೊಂದಿ ಠೇವಣಿದಾರರು ತಮ್ಮ ಹಣಕ್ಕಾಗಿ ಬೀದಿಗಿಳಿದಿದ್ದಾರೆ ಎಂದು ಟೀಕಿಸಿತ್ತು.

Preity Zinta
ಟೀಂ ಇಂಡಿಯಾ ಸರಣಿ ಗೆಲುವಿನ ಸಂಭ್ರಮ ಕುರಿತು ತಪ್ಪು ಟ್ವೀಟ್ ಮಾಡಿ ಟ್ರೋಲ್ ಆದ ಪ್ರೀತಿ ಝಿಂಟಾ!

ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಪ್ರೀತಿ ಝಿಂಟಾ, ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ತಾವೇ ನಿರ್ವಹಿಸುತ್ತಿದ್ದು, ಕೇರಳ ಕಾಂಗ್ರೆಸ್ ಸುಳ್ಳು ಸುದ್ದಿ ಹಬ್ಬಿಸುತ್ತಿದೆ ಎಂದು ಟೀಕಿಸಿದ್ದಾರೆ. ನನ್ನ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಾನೇ ನಿರ್ವಹಿಸುತ್ತೇನೆ. ಸುಳ್ಳು ಸುದ್ದಿ ಹಬ್ಬಿಸುವ ನಿಮಗೆ ನಾಚಿಕೆಯಾಗಬೇಕು! ಯಾರೂ ನನಗಾಗಿ ಏನನ್ನೂ ಅಥವಾ ಯಾವುದೇ ಸಾಲವನ್ನು ಮನ್ನಾ ಮಾಡಿಲ್ಲ. ಒಂದು ರಾಜಕೀಯ ಪಕ್ಷ ಅಥವಾ ಅವರ ಪ್ರತಿನಿಧಿ ನಕಲಿ ಸುದ್ದಿಗಳನ್ನು ಪ್ರಚಾರ ಮಾಡುತ್ತಿರುವುದು ಮತ್ತು ನನ್ನ ಹೆಸರು ಮತ್ತು ಚಿತ್ರಗಳನ್ನು ಬಳಸಿಕೊಂಡು ಕೆಟ್ಟ ಗಾಸಿಪ್ ಹಬ್ಬಿಸುತ್ತಿರುವುದು, ಕೇವಲ ಪ್ರಚಾರಕ್ಕಾಗಿ ಈ ರೀತಿ ಕೀಳುಮಟ್ಟಕ್ಕೆ ಇಳಿದಿರುವುದು ನನಗೆ ಆಘಾತವನ್ನುಂಟು ಮಾಡಿದೆ ಎಂದು ಅವರು ಪೋಸ್ಟ್ ಮಾಡಿದ್ದಾರೆ.

ನಾನು ಸಹಕಾರಿ ಬ್ಯಾಂಕಿನಿಂದ ಸಾಲ ಪಡೆದು 10 ವರ್ಷಗಳ ಹಿಂದೆಯೇ ಮರುಪಾವತಿ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಬ್ಯಾಂಕ್ 28 ಶಾಖೆಗಳನ್ನು ಹೊಂದಿದ್ದು, ಅವುಗಳಲ್ಲಿ ಹೆಚ್ಚಿನವು ಮುಂಬೈ ಮಹಾನಗರ ಪ್ರದೇಶದಲ್ಲಿವೆ.

ಕೇರಳ ಕಾಂಗ್ರೆಸ್ ಹೇಳುವುದೇನು?

ಇದಕ್ಕೆ ಕೇರಳ ಕಾಂಗ್ರೆಸ್ ಘಟಕ ಸೋಷಿಯಲ್ ಮೀಡಿಯಾ ಮೂಲಕವೇ ಪ್ರತಿಕ್ರಿಯಿಸಿದ್ದು, ನಿಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ನ್ನು ನೀವೇ ಹ್ಯಾಂಡಲ್ ಮಾಡುತ್ತಿರುವುದು ಸಂತೋಷದ ವಿಷಯ, ನಿಮ್ಮ ಸ್ಪಷ್ಟನೆಗೆ ಸಹ ಧನ್ಯವಾದಗಳು, ನಮ್ಮ ಕಡೆಯಿಂದ ತಪ್ಪಾಗಿದ್ದರೆ ಕ್ಷಮಿಸಿ. ಮಾಧ್ಯಮ ಸಂಸ್ಥೆಯೊಂದು ಮಾಡಿದ್ದ ವರದಿಯನ್ನಾಧರಿಸಿ ನಾವು ಈ ವಿಷಯವನ್ನು ಹಾಕಿದ್ದೆವು ಎಂದು ಮಾಧ್ಯಮದಲ್ಲಿ ಬಂದ ವರದಿಯನ್ನು ವಿವರವಾಗಿ ಹಾಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com