31 ಕೋಟಿಗೆ ಖರೀದಿ- 83 ಕೋಟಿಗೆ ಅಪಾರ್ಟ್‌ಮೆಂಟ್ ಮಾರಾಟ: 4 ವರ್ಷಕ್ಕೆ ಶೇ.168 ರಷ್ಟು ಲಾಭ ಗಳಿಸಿದ ಅಮಿತಾಬ್ ಬಚ್ಚನ್!

ಓಶಿವಾರಾದಲ್ಲಿರುವ ಕ್ರಿಸ್ಟಲ್ ಗ್ರೂಪ್‌ನ ವಸತಿ ಸಮುಚ್ಚಯವಾದ ‘ದಿ ಅಟ್ಲಾಂಟಿಸ್‌’ನಲ್ಲಿರುವ ಈ ಅಪಾರ್ಟ್‌ಮೆಂಟ್‌ ಅನ್ನು 2021ರ ಏಪ್ರಿಲ್‌ನಲ್ಲಿ ಅಮಿತಾಬ್‌ ಬಚ್ಚನ್‌ ಅವರು 31 ಕೋಟಿಗೆ ಖರೀದಿಸಿದ್ದರು
Amitabh Bachchan
ಅಮಿತಾಬ್ ಬಚ್ಚನ್
Updated on

ಮುಂಬಯಿ: ಬಾಲಿವುಡ್‌ ನಟ ಅಮಿತಾಬ್‌ ಬಚ್ಚನ್‌ ಅವರು ಮುಂಬೈನ ಓಶಿವಾರಾದಲ್ಲಿರುವ ಡುಪ್ಲೆಕ್ಸ್‌ ಅಪಾರ್ಟ್‌ಮೆಂಟ್‌ ಅನ್ನು 83 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ ಎಂದು ವರದಿಯಾಗಿದೆ.

ಓಶಿವಾರಾದಲ್ಲಿರುವ ಕ್ರಿಸ್ಟಲ್ ಗ್ರೂಪ್‌ನ ವಸತಿ ಸಮುಚ್ಚಯವಾದ ‘ದಿ ಅಟ್ಲಾಂಟಿಸ್‌’ನಲ್ಲಿರುವ ಈ ಅಪಾರ್ಟ್‌ಮೆಂಟ್‌ ಅನ್ನು 2021ರ ಏಪ್ರಿಲ್‌ನಲ್ಲಿ ಅಮಿತಾಬ್‌ ಬಚ್ಚನ್‌ ಅವರು 31 ಕೋಟಿಗೆ ಖರೀದಿಸಿದ್ದರು.

ಇದೀಗ ನೋಂದಣಿ ಮಹಾಪರಿವೀಕ್ಷಕ ಹಾಗೂ ಮುದ್ರಾಂಕ ಆಯುಕ್ತರ (ಐಜಿಆರ್) ಪ್ರಕಾರ, ಈ ಅಪಾರ್ಟ್‌ಮೆಂಟ್‌ ಅನ್ನು ₹83 ಕೋಟಿಗೆ ಮಾರಾಟ ಮಾಡಲಾಗಿದೆ. ಅದರಂತೆ ಅಮಿತಾಬ್‌ ಅವರು ಶೇ 168ರಷ್ಟು ಲಾಭ ಪಡೆದಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

2021ರ ಏಪ್ರಿಲ್‌ನಲ್ಲಿ ಈ ಅಪಾರ್ಟ್‌ಮೆಂಟ್‌ ಅನ್ನು ಖರೀದಿಸಿದ್ದ ಅಮಿತಾಬ್‌, ಆದೇ ವರ್ಷ ನವೆಂಬರ್‌ನಲ್ಲಿ ನಟಿ ಕೃತಿ ಸನೋನ್ ಅವರಿಗೆ ಭದ್ರತಾ ಠೇವಣಿ 60 ಲಕ್ಷ ಮತ್ತು ಮಾಸಿಕ 10 ಲಕ್ಷದಂತೆ ಬಾಡಿಗೆಗೆ ನೀಡಿದ್ದರು ಎಂದು ಐಜಿಆರ್ ಗುತ್ತಿಗೆ ದಾಖಲೆಗಳಿಂದ ತಿಳಿದುಬಂದಿದೆ.

ಪಶ್ಚಿಮ ಮುಂಬೈನಲ್ಲಿರುವ ಓಶಿವಾರಾವು ಉತ್ತಮ ರಸ್ತೆಗಳು ಮತ್ತು ಮೆಟ್ರೊ ಸಂಪರ್ಕವನ್ನು ಹೊಂದಿರುವ ಪ್ರದೇಶವಾಗಿದ್ದು, ಆಧುನಿಕ ಜೀವನಶೈಲಿಗೆ ಹೆಸರುವಾಸಿಯಾಗಿದೆ. ಓಶಿವಾರಾದಲ್ಲಿನ ಕ್ರಿಸ್ಟಲ್ ಗ್ರೂಪ್‌ನ ವಸತಿ ಪ್ರಾಜೆಕ್ಟ್ ದಿ ಅಟ್ಲಾಂಟಿಸ್‌ 1.55 ಎಕರೆಗಳಲ್ಲಿ ಹರಡಿದೆ, 4, 5 ಮತ್ತು 6 BHK ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಿದೆ.

Amitabh Bachchan
ನನ್ನನ್ನು ನಟ ಅಲ್ಲು ಅರ್ಜುನ್ ಜೊತೆ ಹೋಲಿಸಬೇಡಿ, ನಾನು ಅವರ ಅಭಿಮಾನಿ: ಅಮಿತಾಬ್ ಬಚ್ಚನ್

ಐಜಿಆರ್ ನೋಂದಣಿ ದಾಖಲೆಗಳ ಪ್ರಕಾರ, ಪ್ರೀಮಿಯಂ ಡ್ಯೂಪ್ಲೆಕ್ಸ್ ಅಪಾರ್ಟ್ಮೆಂಟ್ 529.94 ಚದರ ಮೀಟರ್ (ಸುಮಾರು 5,704 ಚದರ ಅಡಿ) ವಿಸ್ತೀರ್ಣ ಮತ್ತು 5,185.62 ಚದರ ಅಡಿ (ಸುಮಾರು 481.75 ಚದರ ಮೀಟರ್) ಕಾರ್ಪೆಟ್ ಪ್ರದೇಶವನ್ನು ಹೊಂದಿದೆ. ಇದು 445.93 ಚದರ ಮೀಟರ್ (ಸುಮಾರು 4,800 ಚದರ ಅಡಿ) ಅಳತೆಯ ವಿಶಾಲವಾದ ಟೆರೇಸ್ ಅನ್ನು ಸಹ ಹೊಂದಿದೆ ಮತ್ತು ಆರು ಕಾರುಗಳಿಗೆ ಪಾರ್ಕಿಂಗ್ ಸ್ಥಳ ಒಳಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com