
ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಶುಕ್ರವಾರ ತಮ್ಮ ಮುಂದಿನ ಚಿತ್ರವನ್ನು ಘೋಷಿಸಿದ್ದಾರೆ.
2020 ರಲ್ಲಿ ಚೀನಾ- ಭಾರತದ ನಡುವೆ ನಡೆದ ಗಲ್ವಾನ್ ಕಣಿವೆ ಸಂಘರ್ಷದ ಘಟನೆಯನ್ನು ಆಧರಿಸಿದ ಚಿತ್ರಕಥೆ ಬ್ಯಾಟಲ್ ಆಫ್ ಗಲ್ವಾನ್ ನಲ್ಲಿ ಸಲ್ಮಾನ್ ಖಾನ್ ನಟಿಸುತ್ತಿದ್ದು, ಅವರ ಪಾತ್ರದ ಬಗ್ಗೆ ಈಗ ಹೆಚ್ಚಿನ ಕುತೂಹಲ ಮೂಡಿದೆ. ಈ ಚಿತ್ರವನ್ನು ಶೂಟೌಟ್ ಅಟ್ ಲೋಖಂಡ್‌ವಾಲಾ ಖ್ಯಾತಿಯ ಅಪೂರ್ವ ಲಖಿಯಾ ನಿರ್ದೇಶಿಸಿದ್ದಾರೆ.
59 ವರ್ಷದ ನಟ ಈ ಚಿತ್ರಕ್ಕೆ ಸಂಬಂಧಿಸಿದ 1.22 ನಿಮಿಷಗಳ ಮೋಷನ್ ಪೋಸ್ಟರ್ ಕ್ಲಿಪ್ ನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಕ್ಲಿಪ್ ಪ್ರಕಾರ, ಈ ಚಿತ್ರ ಒಂದೇ ಒಂದು ಗುಂಡು ಹಾರಿಸದೆ ನಡೆದ ಭಾರತದ ಅತ್ಯಂತ ಕ್ರೂರ ಯುದ್ಧಗಳಲ್ಲಿ ಒಂದನ್ನು ಆಧರಿಸಿದೆ.
ಸಮುದ್ರ ಮಟ್ಟದಿಂದ 15,000 ಅಡಿ ಎತ್ತರದಲ್ಲಿ ಈ ಸಂಘರ್ಷ ನಡೆದಿದ್ದು, ಭಾರತದ ಅದಮ್ಯ ಚೈತನ್ಯಕ್ಕೆ ಸಾಕ್ಷಿಯಾಗಿದೆ.
ಚಿತ್ರದ ಬಗ್ಗೆ ಇತರ ವಿವರಗಳು ಇನ್ನೂ ಗೌಪ್ಯವಾಗಿವೆ. ಜೂನ್ 2020 ರಲ್ಲಿ ನಡೆದ ಗಾಲ್ವಾನ್ ಕಣಿವೆಯ ಘರ್ಷಣೆಯಲ್ಲಿ ಇಪ್ಪತ್ತು ಭಾರತೀಯ ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದರು. ಇದು ದಶಕಗಳಲ್ಲಿ ಭಾರತ ಮತ್ತು ಚೀನಾ ನಡುವಿನ ಅತ್ಯಂತ ಗಂಭೀರ ಮಿಲಿಟರಿ ಸಂಘರ್ಷವಾಗಿದೆ.
Advertisement