
ಮುಂಬೈ: ರೂ. 23 ಲಕ್ಷ ವಂಚನೆ ಆರೋಪದ ಮೇಲೆ ಬಾಲಿವುಡ್ ನಿರ್ಮಾಪಕ ಕರಣ್ ಸಿಂಗ್ ಗೆ ಮಾಡೆಲ್ ರುಚಿ ಗುಜ್ಜರ್ ಚಪ್ಪಲಿಯಿಂದ ಹೊಡೆದಿರುವ ಘಟನೆ ನಡೆದಿದೆ. ಶುಕ್ರವಾರ ರಾತ್ರಿ ನಡೆದ 'So Long Valley' ಪ್ರೀಮಿಯರ್ ಶೋನಲ್ಲಿ ಕರಣ್ ಸಿಂಗ್‌ಗೆ ಗುಜ್ಜರ್ ಚಪ್ಪಲಿಯಿಂದ ಹೊಡೆದಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರುಚಿ ಗುಜ್ಜರ್ ಅವರಿಗೆ ವಂಚನೆ ಆರೋಪದ ಮೇಲೆ ಕರಣ್ ಸಿಂಗ್ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗುರುವಾರ ಗುಜ್ಜರ್ ಅವರು ನೀಡಿದ ದೂರಿನ ಮೇರೆಗೆ ಸಿಂಗ್ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಓಶಿವಾರಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.
ಟೆಲಿವಿಷನ್ ಚಾನೆಲ್‌ಗಾಗಿ ಸಿನಿಮಾವೊಂದನ್ನು ಆರಂಭಿಸುವ ನೆಪದಲ್ಲಿ ಕರಣ್ ಸಿಂಗ್ ತನ್ನಿಂದ ಹಣ ಪಡೆದಿದ್ದು, ಬಂದಂತಹ ಲಾಭ ಮತ್ತು ಆನ್-ಸ್ಕ್ರೀನ್ ಕ್ರೆಡಿಟ್‌ನಲ್ಲಿ ತನಗೆ ಪಾಲು ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಸಿನಿಮಾವೂ ಆರಂಭವಾಗಿಲ್ಲ. ಹಣ ಕೂಡಾ ಮತ್ತೆ ವಾಪಸ್ ನೀಡಿಲ್ಲ ಎಂದು ಮಾಡೆಲ್ ಆರೋಪಿಸಿದ್ದಾರೆ.
ನಟಿಯ ಮೇಲೆ ಹಲ್ಲೆ ಮಾಡಿದ್ದಕ್ಕಾಗಿ ಸಿಂಗ್ ವಿರುದ್ಧ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎಫ್‌ಐಆರ್ ದಾಖಲಿಸಲಾಗುವುದು ಎಂದು ಗುಜ್ಜರ್ ಪರ ವಕೀಲರು ತಿಳಿಸಿದ್ದಾರೆ. 'ಸೋ ಲಾಂಗ್ ವ್ಯಾಲಿ 'ಹಿಂದಿ ಭಾಷೆಯ ಕ್ರೈಮ್ ಥ್ರಿಲ್ಲರ್ ಚಿತ್ರವಾಗಿದ್ದು ತ್ರಿಧಾ ಚೌಧರಿ ಮತ್ತು ವಿಕ್ರಮ್ ಕೊಚ್ಚರ್ ನಟಿಸಿದ್ದಾರೆ.
Advertisement