Air India ವಿಮಾನ ದುರಂತ: ಟ್ವೀಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಕರೀಷ್ಮಾ ಕಪೂರ್ ಮಾಜಿ ಪತಿ ಹೃದಯಾಘಾತದಿಂದ ನಿಧನ

ಏರ್ ಇಂಡಿಯಾ ವಿಮಾನ ದುರಂತದ ಬಳಿಕ ಸಂಜಯ್ ಟ್ವೀಟ್ ಮಾಡಿ ಸಂತಾಪ ಕೋರಿದ್ದರು. ಅದಾದ ಕೆಲವೇ ಗಂಟೆಗಳಲ್ಲಿ ಅವರಿಗೆ ಹೃದಯಾಘಾತ ಆಗಿದೆ.
Karisma Kapoor's ex-husband Sunjay Kapur
ಕರೀಷ್ಮಾ ಕಪೂರ್ ಮತ್ತು ಸಂಜಯ್ ಕಪೂರ್
Updated on

ಬಾಲಿವುಡ್ ನಟಿ ಕರೀಷ್ಮಾ ಕಪೂರ್ ಅವರ ಮಾಜಿ ಪತಿ, ಉದ್ಯಮಿ ಸಂಜಯ್ ಕಪೂರ್ ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರಿಗೆ 53 ವರ್ಷ ವಯಸ್ಸಾಗಿತ್ತು.

ಸಂಜಯ್​ ಮತ್ತು ಕರೀಷ್ಮಾಗೆ ಇಬ್ಬರು ಮಕ್ಕಳು ಹಾಗೂ ಎರಡನೇ ಪತ್ನಿ ಪ್ರಿಯಾ ಜೊತೆ ಒಂದು ಮಗು ಹೊಂದಿದ್ದಾರೆ. ಅವರ ಸಾವಿಗೆ ಅನೇಕರು ಸಂತಾಪ ಸೂಚಿಸುತ್ತಿದ್ದಾರೆ. ಏರ್ ಇಂಡಿಯಾ ವಿಮಾನ ದುರಂತದ ಬಳಿಕ ಸಂಜಯ್ ಟ್ವೀಟ್ ಮಾಡಿ ಸಂತಾಪ ಕೋರಿದ್ದರು. ಅದಾದ ಕೆಲವೇ ಗಂಟೆಗಳಲ್ಲಿ ಅವರಿಗೆ ಹೃದಯಾಘಾತ ಆಗಿದೆ.

ಸಂಜಯ್ ಅವರು ಪೊಲೋ ಗೇಮ್​ನ ಆಡುತ್ತಿದ್ದರು. ಈ ವೇಳೆ ಅವರಿಗೆ ಅನಾರೋಗ್ಯ ಉಂಟಾಗಿದೆ. ಆ ಬಳಿಕ ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ. ಅವರು ಇಂಗ್ಲೆಂಡ್​ನಲ್ಲಿ ನಿಧನ ಹೊಂದಿದ್ದಾರೆ. ಈ ವಿಚಾರವನ್ನು ಅವರ ಆಪ್ತೆ ಸುಹೇಲ್ ಸೇಠ್ ಅವರು ಖಚಿತಪಡಿಸಿದ್ದಾರೆ.

ಅಹಮದಾಬಾದ್​​ನ ವಿಮಾನ ಅಪಘಾತ ಕೆಟ್ಟ ಸುದ್ದಿ. ದುರಂತದಿಂದ ತೊಂದರೆಗೆ ಒಳಗಾದ ಎಲ್ಲಾ ಕುಟುಂಬದವರಿಗೆ ನನ್ನ ಸಂತಾಪ. ಈ ಕಷ್ಟದ ಸಮಯದಲ್ಲಿ ಅವರ ಕುಟುಂಬದವರಿಗೆ ಶಕ್ತಿ ಸಿಗಲಿ’ ಎಂದು ಸಂಜಯ್ ಕಪೂರ್ ಟ್ವೀಟ್ ಮಾಡಿದ್ದರು. ಇದಾದ ಬಳಿಕ ಅವರು ನಿಧನ ಹೊಂದಿದ್ದಾರೆ. ಸಂಜಯ್ ಕಪೂರ್ ಅವರು ಹಲವು ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ಸೋನಾ ಕಾಮ್​ಸ್ಟಾರ್ ಕಂಪನಿ​​ಗೆ ಅವರು ಅಧ್ಯಕ್ಷರಾಗಿದ್ದಾರೆ.

Karisma Kapoor's ex-husband Sunjay Kapur
Watch | ಮೆಡಿಕಲ್ ಕಾಲೇಜು ಕ್ವಾರ್ಟರ್ಸ್ ಮೇಲೆ ಏರ್ ಇಂಡಿಯಾ ವಿಮಾನ ಪತನ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com