
ಬಾಲಿವುಡ್ ನಟಿ ಇಲಿಯಾನಾ ಡಿ'ಕ್ರೂಜ್ ಅವರು ಎರಡನೇ ಬಾರಿಗೆ ತಾಯಿಯಾಗಿದ್ದು, ಪತಿ ಮೈಕೆಲ್ ಡೋಲನ್ ಅವರೊಂದಿಗೆ ತಮ್ಮ ಎರಡನೇ ಮಗುವನ್ನು ಸ್ವಾಗತಿಸಿದ್ದಾರೆ.
ಇಲಿಯಾನಾ ಡಿ'ಕ್ರೂಜ್ ಶನಿವಾರ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಎರಡನೇ ಗಂಡು ಮಗು ಜನಿಸಿರುವುದಾಗಿ ಘೋಷಿಸುವ ಮೂಲಕ ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಮುದ್ದಾದ ಮಗ ಕೀನು ರಾಫೆ ಡೋಲನ್ ಅವರ ಫೋಟೋವನ್ನು ನಟಿ ಹಂಚಿಕೊಂಡಿದ್ದು, ಜೂನ್ 19, 2025 ರಂದು ಕೀನು ಜನಿಸಿದನು. ನಮ್ಮ ಹೃದಯಗಳು ತುಂಬಿವೆ" ಎಂದು ಹೇಳಿದ್ದಾರೆ.
ಅನೇಕ ಸೆಲೆಬ್ರಿಟಿಗಳು ಇಲಿಯಾನಾ ದಂಪತಿಯನ್ನು ಅಭಿನಂದಿಸಿದ್ದು, "ಅಭಿನಂದನೆಗಳು ನನ್ನ ಇಲು" ಎಂದು ಅಥಿಯಾ ಶೆಟ್ಟಿ ಬರೆದಿದ್ದಾರೆ.
ವಿದ್ಯಾ ಬಾಲನ್ ಅವರು, "ಅಭಿನಂದನೆಗಳು ಮತ್ತು ದೇವರು ನಿಮ್ಮೆಲ್ಲರನ್ನು ಆಶೀರ್ವದಿಸಲಿ" ಎಂದು ಬರೆದಿದ್ದಾರೆ.
ಇಲಿಯಾ ಡಿ'ಕ್ರೂಜ್ ಮತ್ತು ಡೋಲನ್ ಮೇ 2023 ರಲ್ಲಿ ವಿವಾಹವಾದರು ಮತ್ತು ಆಗಸ್ಟ್ 1, 2023 ರಂದು ಮೊದಲ ಗಂಡು ಮಗು, ಕೋವಾ ಫೀನಿಕ್ಸ್ ಡೋಲನ್ ಸ್ವಾಗತಿಸಿದರು.
Advertisement